Categories
ತೀರ್ಥಹಳ್ಳಿ

ದೇಗುಲದ ಮುಂಭಾಗ ಕಸ ಗುಡಿಸಿದ ಕಿಮ್ಮನೆ!

ದೇಗುಲದ ಮುಂಭಾಗ ಕಸ ಗುಡಿಸಿದ ಕಿಮ್ಮನೆ!
– ಕೋದಂಡರಾಮ ದೇಗುಲ ಸ್ವಚ್ಛತೆ: ಕಾಂಗ್ರೆಸ್ ಪ್ರಮುಖರು ಹಾಜರ್
– ಜ.22ರಂದು ವಿಶೇಷ ಪೂಜೆ: ದೇಗುಲ ಅಭಿವೃದ್ಧಿ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಕೋದಂಡರಾಮ ದೇವಸ್ಥಾನ ಸ್ವಚ್ಛತಾ ಕಾರ್ಯಕ್ರಮ ಕಾಂಗ್ರೆಸ್ ನಾಯಕ ಕಿಮ್ಮನೆ ನೇತೃತ್ವದಲ್ಲಿ ಶನಿವಾರ ನಡೆಯಿತು. ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರತಿಷ್ಠಾಪನೆ ಅಂಗವಾಗಿ 20ರಂದು ಮುಂಜಾನೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಕಸ ಗುಡಿಸುವ ಮೂಲಕ ದೇವಸ್ಥಾನ ಆವರಣ ಸ್ವಚ್ಛತೆಗೆ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಪಕ್ಷದ ಎಲ್ಲಾ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಇದ್ದರು.

ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀ ರಾಮ ಪ್ರಾಣ ಪ್ರತಿಷ್ಠಾಪನೆಯಾಗುತ್ತಿರುವ ಹಿನ್ನೆಲೆಯಲ್ಲಿ ತೀರ್ಥಹಳ್ಳಿಯಲ್ಲಿ ಕೋದಂಡರಾಮನಿಗೆ ಆ ದಿನ ಪೂಜಾ ಸಂಕಲ್ಪಗಳನ್ನು ನೆರವೇರಿಸಲಾಗುವುದು. ಆ ದಿನ ಬೆಳಿಗ್ಗೆ ಪುರಾಣ ಪ್ರಸಿದ್ಧವಾದ ಮತ್ತು ಅತ್ಯಂತ ಪ್ರಾಚೀನ ದೇವಸ್ಥಾನವಾದ ರಥಬೀದಿಯ ಕೋದಂಡರಾಮ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಮಧ್ಯಾಹ್ನ 12ತ್ತದೆ.ಕ್ಕೆ ಮಹಾ ಮಂಗಳಾರತಿ ಕಾರ್ಯಕ್ರಮ ಜರುಗಲಿದೆ.

ಹಾಗೆಯೇ ಜ.20 ಮತ್ತು 21ನೆಯ ಶನಿವಾರ ಮತ್ತು ಭಾನುವಾರದಂದು ದೇವಸ್ಥಾನದಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ದೇವಸ್ಥಾನದ ಆವರಣಗಳನ್ನು ಸ್ವಚ್ಛ ಮಾಡಿ ಸುಣ್ಣ ಬಣ್ಣ ಮಾಡಲಾಗುತ್ತದೆ. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾ ರಮೇಶ್, ಡಿಎಸ್ ವಿಶ್ವನಾಥ್ ಶೆಟ್ಟಿ, ಸ್ಥಾಯಿ ಸಮಿತಿಯ ಅಧ್ಯಕ್ಷ ಬಿ ಗಣಪತಿ, ಅಮರನಾಥ್ ಶೆಟ್ಟಿ, ರತ್ನಾಕರ್ ಶೆಟ್ಟಿ, ಅಮರಪಾಲಿ ಸುರೇಶ್, ಎಸ್ ಎಂ ಎಸ್ ಸತೀಶ್, ಮಾರ್ಟೀಸ್ ಹಾಗೂ ಪಕ್ಷದ ಪ್ರಮುಖರು ಇದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.