Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಜ.20ಕ್ಕೆ ದೇಗುಲ ಸ್ವಚ್ಛ

ತೀರ್ಥಹಳ್ಳಿಯಲ್ಲಿ ಜ.20ಕ್ಕೆ ದೇಗುಲ ಸ್ವಚ್ಛ
– ಅಯೋಧ್ಯೆಯಲ್ಲಿ ಶ್ರೀ ರಾಮ ಪ್ರಾಣ ಪ್ರತಿಷ್ಠಾಪನೆ
– ಜ.22ರಂದು ವಿಶೇಷವಾಗಿ ಕೋದಂಡರಾಮನಿಗೆ ಪೂಜೆ
– ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಧಾರ್ಮಿಕ ಕೆಲಸ

NAMMUR EXPRESS NEWS:
ತೀರ್ಥಹಳ್ಳಿ: ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀ ರಾಮ ಪ್ರಾಣ ಪ್ರತಿಷ್ಠಾಪನೆಯಾಗುತ್ತಿರುವ ಹಿನ್ನೆಲೆಯಲ್ಲಿ ತೀರ್ಥಹಳ್ಳಿಯಲ್ಲಿ ಕೋದಂಡರಾಮನಿಗೆ ಆ ದಿನ ಪೂಜಾ ಸಂಕಲ್ಪಗಳನ್ನು ನೆರವೇರಿಸಲಾಗುವುದು. ಆ ದಿನ ಬೆಳಿಗ್ಗೆ ಪುರಾಣ ಪ್ರಸಿದ್ಧವಾದ ಮತ್ತು ಅತ್ಯಂತ ಪ್ರಾಚೀನ ದೇವಸ್ಥಾನವಾದ ರಥಬೀದಿಯ ಕೋದಂಡರಾಮ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಮಧ್ಯಾಹ್ನ 12ಕ್ಕೆ ಮಹಾ ಮಂಗಳಾರತಿ ಕಾರ್ಯಕ್ರಮ ಜರುಗಲಿದೆ.

ಹಾಗೆಯೇ ಜ.20 ಮತ್ತು 21ನೆಯ ಶನಿವಾರ ಮತ್ತು ಭಾನುವಾರದಂದು ದೇವಸ್ಥಾನದಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ದೇವಸ್ಥಾನದ ಆವರಣಗಳನ್ನು ಸ್ವಚ್ಛ ಮಾಡಿ ಸುಣ್ಣ ಬಣ್ಣ ಮಾಡಲಾಗುವುದು. ಸಾರ್ವಜನಿಕರು ಇದರಲ್ಲಿ ಭಾಗವಹಿಸಬೇಕಾಗಿ ಕಿಮ್ಮನೆ ರತ್ನಾಕರ್ ಅವರು ಮನವಿ ಮಾಡಿದ್ದಾರೆ. ಇದಕ್ಕೆ ಪಟ್ಟಣ ಪಂಚಾಯತಿಯ ನೆರವನ್ನೂ ಕೋರಿರುವುದಾಗಿ ಕಿಮ್ಮನೆ ರತ್ನಾಕರ್ ತಿಳಿಸಿದ್ದಾರೆ.

2 ಕೋಟಿ ವೆಚ್ಚದಲ್ಲಿ ದೇಗುಲ ಅಭಿವೃದ್ಧಿ

ತೀರ್ಥಹಳ್ಳಿ ರಥ ಬೀದಿ ತುಂಗಾ ತೀರದಲ್ಲಿರುವ ಕೋದಂಡಸ್ವಾಮಿ ದೇಗುಲವನ್ನು ಎರಡು ಕೋಟಿ ವೆಚ್ಚದಲ್ಲಿ ದೇವಸ್ಥಾನದ ಅಭಿವೃದ್ಧಿಗೆ ಏನು ಬೇಕೊ ಅದಕ್ಕೆ ಪ್ರಯತ್ನಿಸುತ್ತೇವೆ. ಮೋದಿಯವರಿಗೆ ಶ್ರೀ ರಾಮ ಶಕ್ತಿ ಕೊಡಲಿ. ಯಾರೂ ಕೂಡ ಪ್ರಚೋದನಕಾರಿ ಹೇಳಿಕೆ ಕೊಡಬೇಡಿ. ಸೌಹಾರ್ದತೆ ಕಾಪಾಡಿ ಎಂದು ಮನವಿ ಮಾಡಿದ್ದಾರೆ. ಸಭೆಯಲ್ಲಿ ಕೆಸ್ತೂರ್ ಮಂಜುನಾಥ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾ ರಮೇಶ್, ಡಿಎಸ್ ವಿಶ್ವನಾಥ್ ಶೆಟ್ಟಿ, ಸ್ಥಾಯಿ ಸಮಿತಿಯ ಅಧ್ಯಕ್ಷ ಬಿ ಗಣಪತಿ, ಅಮರನಾಥ್ ಶೆಟ್ಟಿ, ರತ್ನಾಕರ್ ಶೆಟ್ಟಿ, ಮಾರ್ಟೀಸ್ ಹಾಗೂ ಪಕ್ಷದ ಪ್ರಮುಖರು ಇದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.