Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಗೋ ಕಳ್ಳತನ: ಪ್ರತಿಭಟನೆ

ತೀರ್ಥಹಳ್ಳಿಯಲ್ಲಿ ಗೋ ಕಳ್ಳತನ: ಪ್ರತಿಭಟನೆ
– ಬಿಜೆಪಿ ಯುವ ಮೋರ್ಚಾದಿಂದ ತಕ್ಷಣ ಕ್ರಮಕ್ಕೆ ಪಟ್ಟು
– ಪೊಲೀಸ್ ಇಲಾಖೆ, ತಹಸೀಲ್ದಾರ್ ಅವರಿಗೆ ಮನವಿ

NAMMUR EXPRESS NEWS
ತೀರ್ಥಹಳ್ಳಿ: ಗೋವುಗಳ ಕಳ್ಳತನ ಮತ್ತು ಅಕ್ರಮ ಸಾಗಣೆ ಇದೀಗ ಬಿಜೆಪಿ ಯುವ ಮೋರ್ಚಾ ಹೋರಾಟಕ್ಕೆ ಮುಂದಾಗಿದೆ.
ತೀರ್ಥಹಳ್ಳಿಯಲ್ಲಿ ಶುಕ್ರವಾರ ಪೊಲೀಸ್ ಇಲಾಖೆ ಮತ್ತು ತಹಸೀಲ್ದಾರ್ ಅವರಿಗೆ ಬಿಜೆಪಿ ಯುವ ಮೋರ್ಚಾ ಮುಖಂಡರು ಹೆದ್ದೂರು ನವೀನ್ ನೇತೃತ್ವದಲ್ಲಿ ಮನವಿ ಸಲ್ಲಿಸಿದರು. ಇತ್ತೀಚಿಗೆ ಸೀಬಿನಕೆರೆ ಬಳಿ ದುಷ್ಕರ್ಮಿಗಳು ದನಗಳನ್ನು ತುಂಬಿಕೊಂಡು ಹೋಗಿದ್ದ ದೃಶ್ಯವೂ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ತಕ್ಷಣ ಆರೋಪಿಗಳನ್ನು ಪತ್ತೆ ಹಚ್ಚಬೇಕು ಎಂದು ಈವರೆಗೂ ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ಆರಕ್ಷಕ ಇಲಾಖೆ ವಿಫಲವಾಗಿದೆ.

ಪ್ರಾಣಿ ಹಿಂಸೆಯನ್ನು ವಿರೋಧಿಸಿ ಹಾಗೂ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಇಂತಹ ಪೈಶಾಚಿಕ ಕೃತ್ಯವನ್ನು ಖಂಡಿಸಿ, ತಪ್ಪಿತಸ್ಥರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಇಂದು ತಾಲೂಕು ತಹಸೀಲ್ದಾರ್ ಹಾಗೂ ಡಿ ವೈ ಎಸ್ ಪಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭ ಪಕ್ಷದ ಪ್ರಮುಖರಾದ ಸಂದೇಶ್ ಜವಳಿ, ಅಶೋಕ್ ಮೂರ್ತಿ, ಚಂದವಳ್ಳಿ ಸೋಮಶೇಖರ್, ಕುಕ್ಕೆ ಪ್ರಶಾಂತ್, ಹಸಿರುಮನೆ ನಂದನ್, ಯತೀರಾಜ್ ( ನವೀನ್), ಯುವಮೋರ್ಚಾ ಪ್ರಮುಖರಾದ ಸಂದೀಪ್ ಭಟ್, ಯಶಸ್ವಿ, ಅಂಜುರ ಕುಡುಮಲ್ಲಿಗೆ, ಅಮಿತ್ ಹೆಗ್ಗಾರ್, ವಿನುತ ಗೌಡ, ಬಿಜೆಪಿ ಸದಸ್ಯರು, ಗೋ ಪ್ರೇಮಿಗಳು, ಕಾರ್ಯಕರ್ತರು ಹಾಜರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.