ತೀರ್ಥಹಳ್ಳಿಯ ಎಳ್ಳಮಾವಾಸ್ಯೆ ಜಾತ್ರೆಗೆ ತೆರೆ..!
– ಪಟ್ಟಣದಲ್ಲಿ ಮುಗಿದ ಜಾತ್ರೆಯ ವೈಭವ
– ಅಂಗಡಿ ಮುಗ್ಗಟ್ಟು ತೆಗೆಯುತ್ತಿರುವ ವ್ಯಾಪಾರಸ್ಥರು
– ಕೊನೆ ಹಂತದ ಖರೀದಿಯಲ್ಲಿ ಜನ ಬ್ಯುಸಿ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಎಳ್ಳಮವಾಸ್ಯೆ ಜಾತ್ರೆಯು ಸಡಗರ ಸಂಭ್ರಮದಿಂದ ಮುಕ್ತಾಯಗೊಂಡಿದ್ದು, ವೈಭವದ ಎಳ್ಳಮಾವಾಸ್ಯೆ ಜಾತ್ರೆಗೆ ತೆರೆ ಬಿದ್ದಿದೆ. ರಥ ಬೀದಿಯಲ್ಲಿ ಹಾಕಿದ್ದ ಅಂಗಡಿಗಳೆಲ್ಲ ತೆಗೆಯುತ್ತಿದ್ದು ವ್ಯಾಪಾರಸ್ಥರು ಹೊರಟಿದ್ದಾರೆ. ಈ ಬಾರಿ ಜಾತ್ರೆಯಲ್ಲಿ ವಿಶೇಷ ಆಕರ್ಷಣೆಯಾಗಿ ಅಯೋಧ್ಯೆಯ ರಾಮಮಂದಿರ ವಿದ್ಯುತ್ ಅಲಂಕಾರದಿಂದ ನಿರ್ಮಾಣ ಮಾಡಿದ್ದು ಜನರ ಕಣ್ಮನ ಸೆಳೆದಿತ್ತು. ಇನ್ನು ಸುಂದರವಾದ ತೆಪ್ಪ ನಿರ್ಮಾಣ ಕೂಡ ಮಾಡಲಾಗಿತ್ತು.
ಜೊತೆಗೆ ವಿಶೇಷ ಆಕರ್ಷಣೆಯಾಗಿ ನೂರಾರು ಬೆಳಕಿನ ದೀಪಗಳನ್ನು ಆಕಾಶದಲ್ಲಿ ಹಾರಿಬಿಡಲಾಯಿತು. ಬಣ್ಣ ಬಣ್ಣದ ಪಟಾಕಿ ಪ್ರದರ್ಶನ ಹಿಂದಿನ ವರ್ಷಗಳಿಗಿಂತ ಹೆಚ್ಚಿನ ರೀತಿಯಲ್ಲಿ ಪಟಾಕಿ ಸಿಡಿಸಲಾಯಿತು. ಆಕರ್ಷಕವಾದ ವಿದ್ಯುತ್ ದೀಪಾಲಂಕಾರದಿಂದ ತೀರ್ಥಹಳ್ಳಿ ಕಂಗೊಳಿಸುತ್ತಿದ್ದು, ನೆರದಿದ್ದ ಲಕ್ಷಾಂತರ ಜನರಿಗೆ ಸಂತಸಕೊಟ್ಟಿತ್ತು. ಈಗ ಸಂಕ್ರಾಂತಿಯ ಬಳಿಕ ಜಾತ್ರೆಗೆ ತೆರ ಬೀಳುತ್ತಿದ್ದು, ಎಲ್ಲೆಡೆ ಅಂಗಡಿಗಳು ತೆಗೆಯುತ್ತಿದ್ದೂ, ಪಟ್ಟಣದಲ್ಲಿ ಜಾತ್ರೆಯ ವೈಭವ ಮುಗಿಯುತ್ತಿದೆ.
ಕೊನೆಯ ಖರೀದಿ ಜೋರು!
ಜಾತ್ರೆಯಲ್ಲಿ ಕೊನೆಯ ಹಂತದ ಖರೀದಿಯಲ್ಲಿ ಜನ ಬ್ಯುಸಿಯಾಗಿದ್ದಾರೆ. ವ್ಯಾಪಾರಸ್ಥರು ಕೂಡ ಕೊನೆ ಸೇಲ್ ಮಾಡುತ್ತಿದ್ದಾರೆ.
ಮಲೆನಾಡಿನ ಮಡಿಲು ತೀರ್ಥಹಳ್ಳಿಗೆ ಸ್ವಾಗತ
ಪರಶುರಾಮನ ಮಾತೃ ಹತ್ಯದೋಷವನ್ನು ನಿವಾರಿಸಿದ ಈ ಪುಣ್ಯ ಕ್ಷೇತ್ರಕ್ಕೆ ಹೋಗೋಣ ಬನ್ನಿ
[embedyt] https://www.youtube.com/watch?v=x_OjmjnKCoc%5B/embedyt%5D