ತೀರ್ಥಹಳ್ಳಿಯಲ್ಲಿ ತಡ ರಾತ್ರಿ ಗೋ ಕಳ್ಳತನ!
– ಸೀಬಿನಕೆರೆ ಕೋರ್ಟ್ ಸಮೀಪ ಗೋವು ಸಾಗಾಟ
– ಹೆಚ್ಚುತಿದೆ ಗೋ ಕಳ್ಳತನ: ಸ್ಥಳೀಯರ ಆರೋಪ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಅಕ್ರಮ ದನ ಕಳ್ಳ ಸಾಗಾಣಿಕೆ ಜಾಸ್ತಿಯಾಗುತ್ತಿದ್ದು,ಅದರಲ್ಲೂ ಪಟ್ಟಣದ ವ್ಯಾಪ್ತಿಯಲ್ಲಿ ಅಕ್ರಮ ಗೋಸಾಗಾಟ ಹೆಚ್ಚುತ್ತಿದೆ ಎಂಬ ದೂರು ಕೇಳಿ ಬಂದಿದೆ. ಬುಧವಾರ ರಾತ್ರಿ ಪಟ್ಟಣದ ಸೀಬಿನಕೆರೆ ಕೋರ್ಟ್ ಬಳಿ ಮೇಯುತಿದ್ದ ಜಾನುವಾರನ್ನು ಇಬ್ಬರು ವ್ಯಕ್ತಿಗಳು ಕಾರಿನಲ್ಲಿ ಅಕ್ರಮವಾಗಿ ಗೋವು ಸಾಗಾಟ ಮಾಡಿದ್ದಾರೆ, ಗೋವು ಕಳ್ಳತನ ಮಾಡುತ್ತಿರುವ ದೃಶ್ಯ ಸ್ಥಳೀಯ ನಿವಾಸಿ ಒಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು ಈಗ ಎಲ್ಲೆಡೆ ಈ ವಿಡಿಯೋ ವೈರಲ್ ಆಗಿದೆ. ಇತ್ತೀಚಿಗೆ ಬಾಳೆಬೈಲು ಬಳಿ ಕಾರಿನಲ್ಲಿ ದನಗಳನ್ನು ಸಾಗಣೆ ಮಾಡಲಾಗಿತ್ತು. ಇದೀಗ ಮತ್ತೊಂದು ಪ್ರಕರಣ ವರದಿ ಆಗಿದೆ.