Categories
ತೀರ್ಥಹಳ್ಳಿ

ಸಾಧಕಿ ದೀಕ್ಷಾ .ಆರ್ ಅವರಿಗೆ ಕರವೇ ಅಭಿನಂದನೆ

ಸಾಧಕಿ ದೀಕ್ಷಾ .ಆರ್ ಅವರಿಗೆ ಕರವೇ ಅಭಿನಂದನೆ
– ರಾಜ್ಯಕ್ಕೆ ಮೊದಲ ಸ್ಥಾನದ ಹೆಮ್ಮೆ: ಮನೆಯಲ್ಲಿ ಗೌರವ
– ಕರವೇ ನಾಯಕರಿಂದ ಸಾಧನೆಗೆ ಪ್ರಶಂಸೆ

NAMMUR EXPRESS NEWS
ತೀರ್ಥಹಳ್ಳಿ: ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ 600 ಕ್ಕೆ 599 ಅಂಕ ಗಳಿಸಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ತೀರ್ಥಹಳ್ಳಿ ಬೆಟ್ಟಮಕ್ಕಿಯ ರಾಘವೇಂದ್ರ ಕಲ್ಕೂರ್, ಶ್ರೀಮತಿ ಉಷಾ ಕಲ್ಕೂರ್ ಅವರ ಹೆಮ್ಮೆಯ ಪುತ್ರಿ ದೀಕ್ಷಾ .ಆರ್. ಇವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಘಟಕದ ವತಿಯಿಂದ ಅಭಿನಂದನೆಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷರಾದ ಯಡೂರ್ ಸುರೇಂದ್ರ, ರಾಜ್ಯ ಸಂಘಟನಾ ಕಾರ್ಯದರ್ಶಿ ಪಟೇಲ್ ವೆಂಕಟೇಶ್ ಹೆಗಡೆ, ಗೌರವ ಅಧ್ಯಕ್ಷರಾದ ಮಲ್ಲಕ್ಕಿ ರಾಘವೇಂದ್ರ, ಪಟ್ಟಣ ಪಂಚಾಯತ್ ಸದಸ್ಯರಾದ ನವೀನ್ ಗೌಡ, ಕ.ರ.ವೇ ಮಹಿಳಾ ಅಧ್ಯಕ್ಷರಾದ ಜ್ಯೋತಿ ದೀಲಿಪ್, ತಾಲೂಕು ಉಪಾಧ್ಯಕ್ಷರಾದ ಸುರೇಶ್, ಯುವ ಘಟಕದ ಅಧ್ಯಕ್ಷರಾದ ಶ್ರೀಕಾಂತ್ ಬೆಟ್ಟಮಕ್ಕಿ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.