ಉಡುಪಿಯಲ್ಲಿ ಬ್ಯಾನ್ ಆಯ್ತು ಪ್ರೀ ವೆಡ್ಡಿಂಗ್ ಶೂಟ್
– ಜೋಡಿಗಳ ಸರಸಸಲ್ಲಾಪಗಳಿಂದ ಭಕ್ತರಿಗೆ ಮುಜುಗರ?
– ಅಷ್ಟ ಮಠಾಧೀಶರು ಓಡಾಡುವ ಜಾಗದಲ್ಲಿ ರೋಮ್ಯಾನ್ಸ್ ಬೇಡ: ಅಧಿಕೃತ ಹೇಳಿಕೆ!
NAMMUR EXPRESS NEWS
ಉಡುಪಿ: ಇತ್ತೀಚೆಗೆ ಮದುವೆಯ ಮುನ್ನ ನವ ಜೋಡಿಗಳ ಪ್ರೀ ವೆಡ್ಡಿಂಗ್ ಶೂಟ್ ಮಾಡಿಸುವುದು ಒಂದು ಟ್ರೆಂಡ್ ಆಗಿಬಿಟ್ಟಿದೆ. ಇದಕ್ಕಾಗಿ ಫೋಟೋ ಶೂಟ್ ಪೂರಕವಾಗುವಂತೆ ಕೆಲವು ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸಾಂಪ್ರದಾಯಿಕ ರೀತಿಯ ವೆಡ್ಡಿಂಗ್ ಶೂಟ್ ಗೆ ಕೆಲವು ದೇವಸ್ಥಾನವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇಂತಹ ಛಾಯಾಚಿತ್ರಗಳಿಗೆ ಧಾರ್ಮಿಕ ಕ್ಷೇತ್ರಗಳನ್ನು ಬಳಸುತ್ತಿರುವುದರ ಬಗ್ಗೆ ವಿರೋಧ ವ್ಯಕ್ತವಾಗುತ್ತಿದೆ.
ಆದ್ದರಿಂದ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಅಥವಾ ರಥಬೀದಿಯಲ್ಲಿ ಫೋಟೋಶೂಟ್ ಮಾಡಬಾರದು ಎಂದು ಅಧಿಕಾರಿಗಳು ಖಡಕ್ ಆದೇಶವನ್ನು ಹೊರಡಿಸಿದ್ದಾರೆ. ಜೋಡಿಗಳು ಚಿತ್ರೀಕರಣದ ಹೆಸರಿನಲ್ಲಿ ಧಾರ್ಮಿಕ ಸ್ಥಳದಲ್ಲಿ ಸರಸ ಸಲಾಪದಲ್ಲಿ ತೊಡಗುತ್ತಾರೆ. ಇದು ಬರುವ ಭಕ್ತರಿಗೂ ಕೂಡ ನೋಡಲು ಅಪಹಾಸ್ಯವಾಗಿ ಕಾಣುತ್ತದೆ. ನಮ್ಮ ಸಂಪ್ರದಾಯಗಳಿಗೆ ಇದೆಲ್ಲ ಶೋಭೆ ತರುವುದಿಲ್ಲ. ಆದ್ದರಿಂದ ಅಗತ್ಯ ಕ್ರಮ ಕೈಗೊಳ್ಳಲೇಬೇಕು ಎಂದು ನಿಖರವಾಗಿ ಆದೇಶಿಸಿದ್ದಾರೆ.
ಅಷ್ಟ ಮಠಾಧೀಶರು ಓಡಾಡುವ ಜಾಗ ರಥಬೀದಿ. ಆದರೆ ಇಲ್ಲಿ ಇತ್ತೀಚೆಗೆ ಕೇವಲ ಊರಿನವರು ಮಾತ್ರವಲ್ಲದೆ ಉತ್ತರ ಕರ್ನಾಟಕದ ಫೋಟೋಗ್ರಾಫರ್ಸ್, ಜೋಡಿಗಳು ಬಂದು ಫೋಟೋಶೂಟ್ ಮಾಡಿಸುವುದು, ಅಸಭ್ಯ ವರ್ತನೆ ತೋರುವುದು ಹೆಚ್ಚಾಗುತ್ತಿದೆ. ಸರಸಸಲ್ಲಾಪಗಳು ಮುಜುಗರ ತರುತ್ತಿದೆ ಇದಕ್ಕೆಲ್ಲ ಕಡಿವಾಣ ಹಾಕಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮಠ ಅಧಿಕೃತವಾಗಿ ಹೇಳಿಕೆ ನೀಡಿದೆ.
