Categories
ತೀರ್ಥಹಳ್ಳಿ

ಡಿಸಿಸಿ ಬ್ಯಾಂಕ್ ನ ಹೊಸ ಬ್ರಾಂಚ್ ಆರಂಭ

ಡಿಸಿಸಿ ಬ್ಯಾಂಕ್ ನ ಹೊಸ ಬ್ರಾಂಚ್ ಆರಂಭ
– ಡಾ ಆರ್ ಎಂ ಮಂಜುನಾಥ್ ಗೌಡ ಅವರಿಂದ ಮಾನವೀಯ ಸೇವೆ
– ಕಾಲು ಕಳೆದುಕೊಂಡ ಕಾರ್ಮಿಕರಿಗೆ ಮತ್ತು ಕ್ಯಾನ್ಸರ್ನಿಂದ ಬಳಲುತ್ತಿರುವ ವ್ಯಕ್ತಿಗೆ ಚಿಕಿತ್ಸೆಗೆ ಧನ ಸಹಾಯ

NAMMUR EXPRESS NEWS
ರಾಜ್ಯ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ ಆರ್ ಎಂ ಮಂಜುನಾಥ್ ಗೌಡ ಅವರು ನಗರ ಹೋಬಳಿಯ ಚಿಕ್ಕಪೇಟೆ ಹಾಗೂ ಗದ್ದೆಮನೆ ಮರ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕಾಲು ಕಳೆದುಕೊಂಡ ಕಾರ್ಮಿಕರಿಗೆ ಮತ್ತು ಕ್ಯಾನ್ಸರ್ನಿಂದ ಬಳಲುತ್ತಿರುವ ವ್ಯಕ್ತಿಗೆ ಚಿಕಿತ್ಸೆಗೆ ಧನ ಸಹಾಯ ಮಾಡಿದರು

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ನಗರ ಹೋಬಳಿಯ ರೈತರಿಗೆ ಮಹಿಳಾ ಸ್ವಸಹಾಯ ಗುಂಪುಗಳಿಗೆ ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಡಿಸಿಸಿ ಬ್ಯಾಂಕ್ ನ ಹೊಸ ಬ್ರಾಂಚನ್ನು ಹೊಸದಾಗಿ ಆರಂಭಿಸುವ ಉದ್ದೇಶದಿಂದ ಜಾಗವನ್ನ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಸದ್ಯದಲ್ಲೇ ಈ ಭಾಗದ ಜನರಿಗೆ ಅನುಕೂಲವಾಗಲಿದೆ ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಶಿಮುಲ್ ಅಧ್ಯಕ್ಷರಾದ ಗುರುಶಕ್ತಿ ವಿದ್ಯಾಧರ್, ನಗರ ಶ್ರೀಕಂಠೇಶ್ವರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಅಂಬರೀಶ್ ನೀಲಕೃಷ್ಣ, ಗೋಪಾಲ ಶೆಟ್ಟಿ, ಕರುಣಾಕರ ಶೆಟ್ಟಿ, ಡಾಕ್ಟರ್ ಪ್ರದೀಪ್ ಡಿಮ್ಯಾಲೋ, ಸತೀಶ್ ಪಟೇಲ್ ಮತ್ತು ಪ್ರಮುಖರು ಉಪಸ್ಥಿತಿ ಇದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.