ರಜೆ ನೀಡಲಿಲ್ಲ ಎಂಬ ಕಾರಣಕ್ಕೆ ಬಸ್ಸಿನಲ್ಲೇ ಆತ್ಮಹತ್ಯೆ!
– ಬೆಂದು ಬೆಂದು ಬೇಸತ್ತ ಜೀವ, ಆತ್ಮಹತ್ಯೆಗೆ ಶರಣು?
ಚಿಕ್ಕಮಗಳೂರು: ಕುಟುಂಬದ ಮೂವರನ್ನು ಹತ್ಯೆಗೈದು ಬಳಿಕ ತಾನೂ ಆತ್ಮಹತ್ಯೆ!
– ಹತ್ಯೆಗೂ ಮುನ್ನ ಮಾಡಿದ ಆರೋಪಿಯ ಸೆಲ್ಫಿ ವಿಡಿಯೋ ವೈರಲ್!
NAMMUR EXPRESS NEWS
ಬೆಳಗಾವಿ: ರಜೆ ನೀಡಲಿಲ್ಲ ಎಂಬ ಕಾರಣಕ್ಕೆ ತೀವ್ರವಾಗಿ ಮನನೊಂದ ಚಾಲಕನೊಬ್ಬ ಬಸ್ಸಿನಲ್ಲಿಯೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬಾಲಚಂದ್ರ ಹೂಕೋಜಿ ಆತ್ಮಹತ್ಯೆ ಶರಣಾಗಿರುವ ಬಸ್ ಚಾಲಕ.
ಬೆಳಗಾವಿ ಸಿಬಿಟಿ ಬಸ್ಸಿನಲ್ಲಿಯೇ ಚಾಲಕ ನೇಣಿಗೆ ಕೊರಳೊಡ್ಡಿದ್ದಾರೆ. ಬಾಲಚಂದ್ರ ಹೂಕೋಜಿ ಹಲವು ದಿನಗಳಿಂದ ರಜೆ ಕೇಳುತ್ತಿದ್ದರಂತೆ ಆದರೆ ಹಿರಿಯ ಅಧಿಕಾರಿಗಳು ರಜೆ ನೀಡಿರಲಿಲ್ಲವಂತೆ. ಈಗ ತನ್ನ ಅಕ್ಕನ ಮಗಳ ಮದುವೆ ಇದೆ. ಅದಕ್ಕಾಗಿ ರಜೆ ಬೇಕು ಎಂದು ಕೇಳಿದ್ದರಂತೆ ಆದಾಗ್ಯೂ ರಜೆ ನೀಡಿಲ್ಲ. ಇದರಿಂದ ಬೇಸರಗೊಂಡ ಬಾಲಚಂದ್ರ ಬಸಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಿಕ್ಕಮಗಳೂರು: ಕುಟುಂಬದ ಮೂವರನ್ನು ಹತ್ಯೆಗೈದು ಬಳಿಕ ತಾನೂ ಆತ್ಮಹತ್ಯೆ!
– ಹತ್ಯೆಗೂ ಮುನ್ನ ಮಾಡಿದ ಆರೋಪಿಯ ಸೆಲ್ಫಿ ವಿಡಿಯೋ ವೈರಲ್!
ಚಿಕ್ಕಮಗಳೂರು: ವ್ಯಕ್ತಿಯೊಬ್ಬ ತಮ್ಮ ಕುಟುಂಬದ ನಾಲ್ವರ ಮೇಲೆ ಗುಂಡು ಹಾರಿಸಿ ಹತ್ಯೆಗೈದು, ಬಳಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಳೆಹೊನ್ನೂರು ತಾಲೂಕಿನ ಖಾಂಡ್ಯ ಹೋಬಳಿ ಮಾಗಲು ಗ್ರಾಮದಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಅತ್ತೆ ಜ್ಯೋತಿ(50), ಮಗಳು ಮೌಲ್ಯ(6) ಮತ್ತು ನಾದಿನಿ ಸಿಂಧೂ(24) ಮೇಲೆ ರತ್ನಾಕರ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ. ಅಲ್ಲದೆ, ಘಟನೆಯಲ್ಲಿ ನಾದಿನಿಯ ಗಂಡನ ಕಾಲಿಗೆ ಗುಂಡೇಟು ತಗುಲಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಹತ್ಯೆ ಕೃತ್ಯದ ಬಳಿಕ ರತ್ನಾಕರ ಸ್ವಯಂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಹತ್ಯೆಗೂ ಮುನ್ನ ರತ್ನಾಕರ ಸೆಲ್ಫಿ ವಿಡಿಯೋ ಮಾಡಿದ್ದು, ‘ಕುಟುಂಬದವರು ನನಗೆ ಮೋಸ ಮಾಡಿದ್ದಾರೆ. ಎರಡು ವರ್ಷದಿಂದ ಪತ್ನಿ ನನ್ನನ್ನು ಬಿಟ್ಟು ಹೋಗಿದ್ದಾಳೆ’ ಎಂದು ಹೇಳಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.