Categories
ತೀರ್ಥಹಳ್ಳಿ

ಸಾಲದ ಕಿರಿಕಿರಿ: ತೀರ್ಥಹಳ್ಳಿಯಲ್ಲಿ ದಂಪತಿಗಳ ಆತ್ಮಹತ್ಯೆ!

ಸಾಲದ ಕಿರಿಕಿರಿ: ತೀರ್ಥಹಳ್ಳಿಯಲ್ಲಿ ದಂಪತಿಗಳ ಆತ್ಮಹತ್ಯೆ!
– ಕಾಡಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ
– ಹೊಸನಗರ : ಸರ್ಕಾರಿ ಶಾಲೆ ನೀರಿನ ತೊಟ್ಟಿಗೆ ವಿಷ ಬೆರೆಸಿದ ಬಾಲಕ!

NAMMUR EXPRESS NEWS
ತೀರ್ಥಹಳ್ಳಿ : ಮನೆಗಾಗಿ ಸಾಲ ಮಾಡಿಕೊಂಡಿದ್ದ ದಂಪತಿಗಳು, ಮನೆಯಲ್ಲಿ ನಡೆದ ಸಣ್ಣ ಪುಟ್ಟ ಕಿರಿ ಕಿರಿಯಿಂದಾಗಿ ಮನನೊಂದು ಮರಕ್ಕೆ ನೇ‌ಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ತೀರ್ಥಹಳ್ಳಿ ತಾಲೂಕಿನ ಬಿಳುವೆ ಗ್ರಾಮದ ಕಣಬೂರು ಸಮೀಪದ ಹಲ್ಯಾಪುರ ಎಂಬಲ್ಲಿ ನಡೆದಿದೆ. ಈ ಘಟನೆ ಇದೀಗ ಭಾರೀ ಚರ್ಚೆಗೂ ಕಾರಣವಾಗಿದೆ.
ದಂಪತಿಗಳಿಬ್ಬರು ಮನೆಯಿಂದ 200 ಮೀ ದೂರದ ಕಾಡಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುಂಡ ನಾಯ್ಕ (72 ವರ್ಷ) ಲಕ್ಷ್ಮಮ್ಮ (58 ವರ್ಷ) ಮೃತರು. ಮನೆಗಾಗಿ ಸಾಲ ಮಾಡಿಕೊಂಡಿದ್ದರು. ಇದನ್ನು ಮನೆಯಲ್ಲಿ ಪ್ರಶ್ನೆ ಮಾಡಿದ್ದಾರೆ. ಇದರಿಂದ ಮನೆಯಲ್ಲಿ ಕಿರಿ ಕಿರಿ ಉಂಟಾಗಿದ್ದು ಮನನೊಂದ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

– ಹೊಸನಗರ : ಸರ್ಕಾರಿ ಶಾಲೆಯ ನೀರಿನ ತೊಟ್ಟಿಗೆ ವಿಷ ಬೆರೆಸಿದ ಬಾಲಕ..!!

ಹೊಸನಗರ : ಸರ್ಕಾರಿ ಶಾಲೆಯ ನೀರಿನ ತೊಟ್ಟಿಗೆ ವಿಷ ಬೆರೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕೃತ್ಯ ಎಸಗಿರುವುದು 5ನೇ ತರಗತಿ ಬಾಲಕ ಎಂದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಹುಡುಗಾಟಿಕೆಯಿಂದ ಬಾಲಕ ಈ ತೊಟ್ಟಿಗೆ ವಿಷ ಬೆರೆಸಿದ್ದನು ಎಂದು ತನಿಖೆಯಿಂದ ತಿಳಿದು ಹೇಳಿದ್ದರು. ತಾಲೂಕಿನ ಹೂವಿನಕೋಣಿಯ ಸರ್ಕಾರಿ ಶಾಲೆಯ ನೀರಿನ ತೊಟ್ಟಿಗೆ ವಿಷ ಬೆರೆಸಲಾಗಿತ್ತು. ಈ ನೀರನ್ನು ಕುಡಿದಿದ್ದ ಕೆಲವು ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲು ಆಗಿದ್ದರು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಟ್ವಿಟ್ ಮಾಡಿ ಇದು ಭಯೋತ್ಪಾದನೆಗಿಂತ ಗಂಭೀರವಾದ ವಿಷಯ ಎಂದು ಹೇಳಿದ್ದರು. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಶಿವಮೊಗ್ಗದ ಎಸ್ ಪಿಗೆ ಕರೆ ಮಾಡಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆದೇಶಿಸಿದ್ದರು. ಇದರ ಬೆನ್ನಲ್ಲೇ ಎಸ್ ಪಿ ಮಿಥುನ್ ಕುಮಾರ್ ಅವರು ಪ್ರಕರಣದ ತನಿಖೆ ಕುರಿತು ತೀರ್ಥಹಳ್ಳಿ ಡಿವೈಎಸ್‌ಪಿ ಅರವಿಂದ್ ಕಲಗುಜ್ಜಿ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಿ ಒಟ್ಟು 18 ಪೊಲೀಸರನ್ನು ತನಿಖೆಗೆ ನಿಯೋಜನೆ ಮಾಡಲಾಗಿತ್ತು. ಫುಲ್ ಅಲರ್ಟ್ ಆಗಿದ್ದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದರು. ಪ್ರಕರಣ ಭೇದಿಸಲು ಮೂರು ತಂಡಗಳು ಶ್ರಮಿಸಿದ್ದವು. ಟೆಕ್ನಿಕಲ್ ಎವಿಡೆನ್ಸ್ ಕಲೆಹಾಕಲು ಪೊಲೀಸರು ಮುಂದಾಗಿದ್ದರು. ಟವರ್ ಡಂಪ್ ಮೂಲಕ ತನಿಖೆ ಕೈಗೊಂಡಿದ್ದರು. ಆದರೆ ಇದೀಗ 5ನೇ ತರಗತಿಯ ಬಾಲಕನೇ ಈ ಕೃತ್ಯ ನಡೆಸಿರುವುದು ಎಂದು ತನಿಖೆಯಿಂದ ಬೆಳಕಿಗೆ ಬಂದಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.