ತೀರ್ಥಹಳ್ಳಿಯಲ್ಲಿ ಡಿಗ್ರಿ ವಿದ್ಯಾರ್ಥಿನಿ ನೇಣಿಗೆ ಶರಣು!
– ಅಪ್ಪ ಅಮ್ಮ ಅಡಿಕೆ ಸುಲಿಯಲು ಹೋಗಿದ್ದ ವೇಳೆ ಆತ್ಮಹತ್ಯೆ
– ಬಿಳುಕೊಪ್ಪದಲ್ಲಿ ಘಟನೆ: ಸಾಯುವ ಮುನ್ನ 17 ಕಾಲ್ ಬಂದಿತ್ತು!
– ಮತ್ತೊಂದು ಘಟನೆಯಲ್ಲಿ ಕೆರೆಗೆ ಹಾರಿದ ವ್ಯಕ್ತಿ ಸಾವು!
NAMMUR EXPRESS NEWS
ತೀರ್ಥಹಳ್ಳಿ: ತೃತೀಯ ಬಿ ಎ ವಿದ್ಯಾರ್ಥಿನಿಯೊಬ್ಬಳು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ರಾತ್ರಿ ತೀರ್ಥಹಳ್ಳಿಯಲ್ಲಿ ನಡೆದಿದೆ. ತೀರ್ಥಹಳ್ಳಿ ಪಟ್ಟಣದ ಬಾಳೆಬೈಲು ಡಿಗ್ರಿ ಕಾಲೇಜಿನಲ್ಲಿ ತೃತೀಯ ಬಿ ಎ ವ್ಯಾಸಂಗ ಮಾಡುತ್ತಿದ್ದ ಬಿಳುಕೊಪ್ಪದ ವಿದ್ಯಾರ್ಥಿನಿ ಅಧೀಕ್ಷಾ (20) ಮೃತ ವಿದ್ಯಾರ್ಥಿನಿ. ಈಕೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಮೊಬೈಲ್ ಅಲ್ಲಿ ಘಟನೆಗೆ ಕಾರಣ ತಿಳಿಯಲಿದೆ. ಅಧೀಕ್ಷಾ (20) ಗುರುವಾರ ರಾತ್ರಿ ತಂದೆ ತಾಯಿ ಇಲ್ಲದ ಸಮಯದಲ್ಲಿ ಮನೆಯ ರೂಮಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ವೇಳೆ ಕೈಯಲ್ಲೇ ಮೊಬೈಲ್ ಇತ್ತು. ಸುಮಾರು 17 ಬಾರಿ ಮೊಬೈಲ್ ವಾಟ್ಸಪ್ಪ್ ಕರೆ ಇತ್ತು ಎನ್ನಲಾಗಿದೆ. ಪೊಲೀಸ್ ಇಲಾಖೆ ಈ ಬಗ್ಗೆ ತನಿಖೆ ಮಾಡಲಾಗುತ್ತಿದೆ.
ಗೊತ್ತಾಗಿದ್ದು ಹೇಗೆ..?
ಶುಕ್ರವಾರ ಬೆಳಗ್ಗೆ ಮಗಳು ಹೊರಗೆ ಬರದಿದ್ದಾಗ ಈ ಘಟನೆ ಬೆಳಕಿಗೆ ಬಂದಿದೆ. ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಿಖರ ಮಾಹಿತಿ ತಿಳಿದುಬಂದಿಲ್ಲ. ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ಶವವನ್ನು ಇರಿಸಲಾಗಿದ್ದು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆರೆಗೆ ಹಾರಿ ಮತ್ತೊಬ್ಬರು ಆತ್ಮಹತ್ಯೆ
ಕೇರೋಡಿ ಪಾಂಡುರಂಗ ಭಗತ್ ಅವರ ಮಗ ನಾಗರಾಜ್ ಭಗತ್ ( 60) ಗುರುವಾರ ಬೆಳಿಗ್ಗೆ ಮನೆ ಮುಂದಿನ ತೋಟದ ಬಾವಿಗೆ ಬಿದ್ದು ಮೃತ ಪಟ್ಟ ಘಟನೆ ನಡೆದಿದೆ. ಒಬ್ಬಳು ಮಗಳು, ಅಳಿಯ, ಪತ್ನಿಯನ್ನು ಅಗಲಿದ್ದಾರೆ. ಅತ್ಯುತ್ತಮ ಕೃಷಿಕರಾಗಿದ್ದು, ಯಾವುದೇ ಕಾರಣ ಇರಲಿಲ್ಲ ಎನ್ನಲಾಗಿದೆ.
ತೀರ್ಥಹಳ್ಳಿಯಲ್ಲಿ ಆತ್ಮಹತ್ಯೆ ಸರಣಿ!
ಕಳೆದ ಮೂರು ದಿನಗಳಿಂದ ತೀರ್ಥಹಳ್ಳಿಯಲ್ಲಿ 5 ಆತ್ಮಹತ್ಯೆ ಪ್ರಕರಣ ನಡೆದಿದೆ. ಇದು ದುರಂತ ಕೂಡ. ಕಾಲೇಜು ಮಕ್ಕಳ ಮೊಬೈಲ್ ಹುಚ್ಚು ಈಗ ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ.
