Categories
ತೀರ್ಥಹಳ್ಳಿ

2024ರಲ್ಲಿ ಎರಡು ಬಾರಿ ಎಳ್ಳಮಾಸ್ಯೆ ಜಾತ್ರೆ!

2024ರಲ್ಲಿ ಎರಡು ಬಾರಿ ಎಳ್ಳಮಾಸ್ಯೆ ಜಾತ್ರೆ!
– ಒಂದೇ ವರ್ಷದಲ್ಲಿ ಎರಡು ಸಲ ರಥೋತ್ಸವ
– ದೇಗುಲ ಅಭಿವೃದ್ಧಿ ಕಾರ್ಯಗಳ ನಿರೀಕ್ಷೆಯಲ್ಲಿ ಜನ
– 2025ರ ಹೊಸ ವರ್ಷದ ದಿನವೇ ತೆಪ್ಪೋತ್ಸವ..!

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನದ ಜಾತ್ರೆ ರಾಜ್ಯದಲ್ಲಿಯೇ ಪ್ರಸಿದ್ಧಿ. ಈ ಜಾತ್ರೆ ಸಂಭ್ರಮಕ್ಕೆ ಲಕ್ಷಾಂತರ ಜನ ಭೇಟಿ ನೀಡುತ್ತಾರೆ. ಜೊತೆಗೆ ನಾಡಿನಲ್ಲಿಯೇ ಇದರ ಪ್ರಸಿದ್ದಿ ಉಂಟು. ಜೊತೆಗೆ ಶ್ರೀ ರಾಮೇಶ್ವರ ದೇವಸ್ಥಾನದ ಮಹಿಮೆ ಕೂಡ ಅಪಾರ. ಇಲ್ಲಿ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಆಗುತ್ತಿದೆ. ಅದರಲ್ಲೂ ರಾಜ್ಯಮಟ್ಟದಲ್ಲಿ ತೀರ್ಥಹಳ್ಳಿಯ ಹೆಸರು ಎಲ್ಲಾ ಕ್ಷೇತ್ರದಲ್ಲಿ ಕೇಳಿಬರುವುದಕ್ಕೆ ರಾಮೇಶ್ವರನ ಆಶೀರ್ವಾದವೇ ಕಾರಣ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ನಡೆಯುತ್ತಿರುವ ಎಳ್ಳಮಾವಾಸ್ಯೆ ಜಾತ್ರೆಗೆ ತಮ್ಮದೇ ಆದ ಇತಿಹಾಸ ಇದೆ. ಅಚ್ಚರಿ ಎಂದರೆ ಈ ವರ್ಷ 2024ನೇ ವರ್ಷ ಎರಡು ಬಾರಿ ಎಳ್ಳಮಾವಾಸ್ಯೆ ಜಾತ್ರೆ ನಡೆಯಲಿದೆ.

ಅಂದರೇ ಈಗಾಗಲೇ ಜನವರಿ 11, 12, 13 ರಂದು ಜಾತ್ರೆ ನಡೆದಿದ್ದು, ಇದೇ ವರ್ಷ ಡಿಸೆಂಬರ್ ತಿಂಗಳಲ್ಲಿ ಮತ್ತೆ ಜಾತ್ರೆ ಬರಲಿದೆ. ಡಿ.30 ಸ್ನಾನ, 31 ರಥ, ಜನವರಿ 1ಕ್ಕೆ ತೆಪ್ಪೋತ್ಸವ ಬರಲಿದೆ. ಹೀಗಾಗಿ 2024ರಲ್ಲಿ ಎರಡು ಬಾರಿ ಜಾತ್ರೆಯನ್ನು ತೀರ್ಥಹಳ್ಳಿ ಜನ ಹಾಗೂ ಭಕ್ತರು ನೋಡಬಹುದಾಗಿದೆ. ಈಗಾಗಲೇ ಸಂಭ್ರಮದಿಂದ ಆಚರಣೆ ಮಾಡುತ್ತಿರುವ ಜಾತ್ರೆ ಇನ್ನಷ್ಟು ಅಭಿವೃದ್ಧಿ ಕೆಲಸಗಳಿಗೆ ಕಾರಣವಾಗಲಿ ಎಂಬುದು ನಮ್ಮ ಆಶಯ.

ಇನ್ನಷ್ಟು ಅಭಿವೃದ್ಧಿ ಆಗಬೇಕಿದೆ!

ಶ್ರೀ ರಾಮೇಶ್ವರ ದೇವಸ್ಥಾನದ ಅಭಿವೃದ್ಧಿ, ಅದರ ಸಮುದಾಯ ಭವನ, ಜೊತೆಗೆ ಇನ್ನಷ್ಟು ಧಾರ್ಮಿಕ ಕೆಲಸವನ್ನು ಸಾಮಾಜಿಕ ಕೆಲಸವನ್ನು ಮಾಡಲು ತೀರ್ಥಹಳ್ಳಿಯ ಎಲ್ಲಾ ನಾಯಕರು ತಮ್ಮ ರಾಜಕೀಯ, ಸ್ವಾರ್ಥ, ಪ್ರತಿಷ್ಠೆ ಬಿಟ್ಟು ರಾಮೇಶ್ವರನಿಗೆ ತಲೆ ಬಾಗಬೇಕಿದೆ.ಇದು ಭಕ್ತರ ಆಶಯವಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.