Categories
ತೀರ್ಥಹಳ್ಳಿ

ಹೂವು,ಹಣ್ಣು,ಅಲಂಕಾರಿಕ ವಸ್ತುಗಳು, ಸ್ವೀಟ್ಸ್ ಗೆ ಡಿಮ್ಯಾಂಡ್!

ಹೂವು,ಹಣ್ಣು,ಅಲಂಕಾರಿಕ ವಸ್ತುಗಳು, ಸ್ವೀಟ್ಸ್ ಗೆ ಡಿಮ್ಯಾಂಡ್!
– ಆಯುಧ ಪೂಜೆ, ವಿಜಯದಶಮಿ ಹಬ್ಬದ ಸಂಭ್ರಮ
– ಎಲ್ಲಾ ಕಡೆ ಹೂವು ಹಣ್ಣುಗಳಿಗೆ ಸಿಕ್ಕಾಪಟ್ಟೆ ಬೇಡಿಕೆ
– ಅಂಗಡಿ ಮುಗ್ಗಟ್ಟುಗಳಲ್ಲೂ ಆಯುಧ ಪೂಜೆಗೆ ಸಿದ್ಧತೆ

NAMMUR EXPRESS NEWS
ತೀರ್ಥಹಳ್ಳಿ/ಮಲೆನಾಡು: ನವರಾತ್ರಿ ವಿಜಯದಶಮಿ ಅಂಗವಾಗಿ ತೀರ್ಥಹಳ್ಳಿ ಸೇರಿದಂತೆ ಮಲೆನಾಡಿನ ಬಹುತೇಕ ಕಡೆ ಅದ್ದೂರಿ ಹಬ್ಬದ ಆಚರಣೆಗೆ ಸಿದ್ಧತೆ ನಡೆದಿದೆ. ಸೋಮವಾರ ಆಯುಧ ಪೂಜೆ ಇದ್ದು ಸೋಮವಾರ ಸಂಜೆ ಎಲ್ಲಾ ಅಂಗಡಿ ಮುಗ್ಗಟ್ಟುಗಳ ಪೂಜೆ ನಡೆಯಲಿದೆ. ಸೋಮವಾರ ಯಂತ್ರ ಉಪಕರಣಗಳು, ಕಚೇರಿಗೆ ಪೂಜೆ ಮಾಡಲಾಗುತ್ತದೆ. ಹೀಗಾಗಿ ಹೂವು, ಹಣ್ಣು ಹಾಗೂ ಅಲಂಕಾರಿಕ ವಸ್ತುಗಳು, ಸ್ವೀಟ್ಸ್ ಗೆ ಬಾರಿ ಬೇಡಿಕೆ ಉಂಟಾಗಿದೆ. ಅಲ್ಲದೆ ಬೆಲೆಯಲ್ಲೂ ಕೂಡ ಏರಿಕೆ ಕಂಡು ಬಂದಿದೆ. ಅದರಲ್ಲೂ ವಾಹನಗಳನ್ನು ಅಲಂಕಾರ ಮಾಡಲು ಸಿದ್ಧತೆ ನಡೆಸಲಾಗಿದೆ. ಇನ್ನು ಅಂಗಡಿಗಳ ಪೂಜೆಗಾಗಿ ಈಗಾಗಲೇ ಪೈಂಟ್ಸ್ ಹಾಗೂ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಸೋಮವಾರ ಆಯುಧ ಪೂಜೆ ಅದ್ದೂರಿಯಾಗಿ ನಡೆಯಲಿದೆ.

ಮಂಗಳವಾರ ವಿಜಯ ದಶಮಿ ನಡೆಯಲಿದೆ. ಸತತವಾಗಿ ರಜೆ ಇರುವ ಕಾರಣ ಹೊರ ಊರಿನಿಂದ ತಮ್ಮ ಊರಿಗೆ ಬಂದಿದ್ದಾರೆ. ಹಾಗಾಗಿ ಪಟ್ಟಣದಲ್ಲಿ ಜನರ ಸಂಖ್ಯೆ ಹೆಚ್ಚಿದೆ. ಬಟ್ಟೆ, ಆಭರಣ, ಹೂವು ಹಣ್ಣು, ಅಲಂಕಾರ ವಸ್ತುಗಳ ಖರೀದಿಯಲ್ಲಿ ಜನ ಬ್ಯುಸಿ ಆಗಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.