Categories
ತೀರ್ಥಹಳ್ಳಿ

ಮುತ್ತುಗುಂಡಿ ಕಾಂಪ್ಲೆಕ್ಸ್ ಅ.22ಕ್ಕೆ ಶುಭಾರಂಭ

ಮುತ್ತುಗುಂಡಿ ಕಾಂಪ್ಲೆಕ್ಸ್ ಅ.22ಕ್ಕೆ ಶುಭಾರಂಭ
– ತೀರ್ಥಹಳ್ಳಿಯ ಮೇಲಿನ ಕುರುವಳ್ಳಿಯಲ್ಲಿ ನೂತನ ಉದ್ಯಮ
– ಅವಧೂತ ವಿನಯ್ ಗುರೂಜಿ ಆಗಮನ
– ಸರ್ವರನ್ನು ಸ್ವಾಗತಿಸಿದ ಪ್ರವೀಣ್, ಅನಿತಾ ಹಾಗೂ ಕುಟುಂಬ

NAMMUR EXPRESS NEWS
ತೀರ್ಥಹಳ್ಳಿ: ಯುವ ಉದ್ಯಮಿಗಳಾದ ಪ್ರವೀಣ್ ಮುತ್ತುಗುಂಡಿ ಹಾಗೂ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅನಿತಾ ಪ್ರವೀಣ್ ಮೇಲಿನ ಕುರುವಳ್ಳಿಯಲ್ಲಿ ನೂತನವಾಗಿ ನಿರ್ಮಿಸಿದ ಮುತ್ತುಗುಂಡಿ ಕಾಂಪ್ಲೆಕ್ಸ್, ಅನುಪ್ರಿಯ ಇನ್ ಅಕ್ಟೋಬರ್ 22ರ ಭಾನುವಾರ ಬೆಳಿಗ್ಗೆ 11-30ಕ್ಕೆ ಶುಭಾರಂಭಗೊಳ್ಳಲಿದೆ. ಗೌರಿಗದ್ದೆ ಅವಧೂತ ವಿನಯ್ ಗುರೂಜಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಆರ್.ಎಂ.ಮಂಜುನಾಥಗೌಡ, ಶೃಂಗೇರಿ ಕ್ಷೇತ್ರ ಶಾಸಕ ರಾಜೇಗೌಡ, ಡಿವೈಎಸ್ಪಿ ಗಜಾನನ ವಾಮನ ಸುತಾರ, ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮಾಜಿ ನಿರ್ದೇಶಕ ಆರ್. ಮದನ್, ಜೆಡಿಎಸ್ ಮುಖಂಡ ರಾಜಾರಾಂ, ನ್ಯಾಷನಲ್ ಗ್ರೂಪ್‌ನ ಇಬ್ರಾಹಿಂ ಷರೀಫ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರು, ಡಿಐಟಿ ಅಧ್ಯಕ್ಷ ಧರ್ಮೇಶ್, ಸಹ್ಯಾದ್ರಿ ಸಮೂಹ ಸಂಸ್ಥೆಯ ಅಧ್ಯಕ್ಷ ಹೆಚ್.ಎನ್.ವಿಜಯದೇವ್, ಮೇಲಿನ ಕುರುವಳ್ಳಿ ಗ್ರಾ.ಪಂ. ಅಧ್ಯಕ್ಷ ಯು.ಡಿ.ವೆಂಕಟೇಶ್, ಚಿಂತಕ ನೆಂಪೆ ದೇವರಾಜ್, ಪ.ಪಂ.ಅಧ್ಯಕ್ಷೆ ಗೀತಾ ರಮೇಶ್, ಪ.ಪಂ.ಉಪಾಧ್ಯಕ್ಷ ರೆಹಮತ್ ಉಲ್ಲಾ ಅಸಾದಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸಮಾರಂಭಕ್ಕೆ ಪ್ರವೀಣ್, ಅನಿತಾ ಪ್ರವೀಣ್ ಕುಟುಂಬದವರು ಸರ್ವರನ್ನೂ ಸ್ವಾಗತಿಸಿದ್ದಾರೆ.

ತೀರ್ಥಹಳ್ಳಿ ಪ್ರವಾಸೋದ್ಯಮಕ್ಕೆ ಹೊಸ ಕೊಡುಗೆ

ಅತ್ಯಂತ ಸುಂದರವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೂಡಿ ಬಂದಿರುವ ಕಟ್ಟಡದಲ್ಲಿ ಲಾಡ್ಜ್ ಹಾಗೂ ಹೋಟೆಲ್ ಉದ್ಘಾಟನೆಗೊಳ್ಳಲಿದೆ. ತೀರ್ಥಹಳ್ಳಿ ಕೊಪ್ಪ ರಸ್ತೆಯಲ್ಲಿರುವ ಈ ಕಟ್ಟಡ ತೀರ್ಥಹಳ್ಳಿ ಪ್ರವಾಸೋದ್ಯಮಕ್ಕೆ ಹೊಸ ಕೊಡುಗೆಯಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.