Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಅದಮಾರು ಮಠದ ಕಿರಿಯ ಶ್ರೀಗಳ ಪ್ರವಚನ

ತೀರ್ಥಹಳ್ಳಿಯಲ್ಲಿ ಅದಮಾರು ಮಠದ ಕಿರಿಯ ಶ್ರೀಗಳ ಪ್ರವಚನ
– ಭಾರತೀಯರ ಬದುಕಿನಲ್ಲಿ ಸನಾತನ ಧರ್ಮದ ಮಹತ್ವ: ನಿನ್ನೆ – ಇಂದು-ನಾಳೆ ಎಂಬುದರ ಬಗ್ಗೆ ವಿಶೇಷ ಪ್ರವಚನ ಯಶಸ್ವಿ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಬ್ರಾಹ್ಮಣ ಸಂಘದ ವತಿಯಿಂದ ನಡೆದ ಭಾರತೀಯರ ಬದುಕಿನಲ್ಲಿ ಸನಾತನ ಧರ್ಮದ ಮಹತ್ವ: ನಿನ್ನೆ – ಇಂದು-ನಾಳೆ ಎಂಬುದರ ಬಗ್ಗೆ ವಿಶೇಷ ಪ್ರವಚನ ಯಶಸ್ವಿಯಾಯಿತು.
ದಿನಾಂಕ : 10-04-2025 ಗುರುವಾರದಂದು ಇಳಿಹೊತ್ತು 6 ಗಂಟೆಗೆ ತೀರ್ಥಹಳ್ಳಿ ಗಾಯಿತ್ರಿ ಮಂದಿರ ಪಕ್ಕದ ಕಟ್ಟಡದ ಮೇಲಂತಸ್ತಿನಲ್ಲಿ ಒಂದು ಅಭೂತಪೂರ್ವ, ಅವಿಸ್ಮರಣೀಯ ಕಾರ್ಯಕ್ರಮ ನಡೆಯಿತು.
ಬ್ರಾಹ್ಮಣ ಸಂಘ, ತೀರ್ಥಹಳ್ಳಿ ತಾಲೂಕು (ರಿ) ತೀರ್ಥಹಳ್ಳಿ ಮತ್ತು ಹಿರಿಯರ ಬಳಗ ಬ್ರಾಹ್ಮಣ ಸಂಘ ತೀರ್ಥಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಉಡುಪಿಯ ಶ್ರೀ ಅದಮಾರು ಮಠದ ಕಿರಿಯ ಪೀಠಾಧಿಪತಿಗಳಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀ
ಪಾದಂಗಳವರ ದಿವ್ಯ ಸಾನಿಧ್ಯ ಮತ್ತು ಪ್ರವಚನ ಕಾರ್ಯಕ್ರಮ ವಿಶೇಷವಾಗಿ, ವಿಜೃಂಭಣೆಯಿಂದ ಸಂಪನ್ನಗೊಂಡಿತು.
ಭಾರತೀಯರ ಬದುಕಿನಲ್ಲಿ ಸನಾತನ ಧರ್ಮದ ಮಹತ್ವ ನಿನ್ನೆ -ಇಂದು
-ನಾಳೆ ಎಂಬುದರ ಬಗ್ಗೆ ವಿಶೇಷ ಪ್ರವಚನ ಶ್ರೀ ಶ್ರೀ ಗಳಿಂದ ನಡೆಯಿತು.
ಸನಾತನ ಪ್ರಕೃತಿಗೆ ಹತ್ತಿರವಾದದ್ದು, ಸನಾತನ ಎಂದ ಕೂಡಲೇ ನಾವು ಕಾರ್ಯಪ್ರವೃತ್ತರಾಗುತ್ತೇವೆ. ಒಂದು ವಸ್ತುವಿನಿಂದ ವಿಧಿಯಾಗಿದೆ. ಎಲ್ಲರೂ ಸುಖ ಪಡೆಯಲು ಸಂತೋಷವಾಗಿರಲು ಸಾಧ್ಯವಿಲ್ಲ. ಎಲ್ಲರೂ ಕಷ್ಟದಿಂದ ಸುಖದೆಡೆಗೆ ಹೋಗಲು ಶ್ರಮ, ಪ್ರಯತ್ನ ಪಡಬೇಕು. ನಾವು ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಚವನ ಪ್ರಾಶದಿಂದ ಚವನ ಮಹರ್ಷಿ ಗಳು ಹೇಗಾದರೂ ಎಂಬ ಕಥೆಯ ಮೂಲಕ ವಿವರಿಸಿದರು. ಇರುವಷ್ಟು ದಿವಸ ಶುದ್ಧ ಮನಸ್ಸಿನಿಂದ ಇರಬೇಕೆಂದರು. ನಾವು ನಮ್ಮ ಕರ್ತವ್ಯವನ್ನು ಸನ್ಮಾರ್ಗದಲ್ಲಿ ನಿಭಾಯಿಸಿಕೊಂಡು ಹೋದರೆ ಸನಾತನ ಧರ್ಮ ಉಳಿಯುತ್ತದೆ ಎಂದರು.
ಕಾರ್ಯಕ್ರಮವು ವೇದ ಘೋಷದೊಂದಿಗೆ ಪ್ರಾರಂಭವಾಯಿತು. ಸ್ವಾಗತ ಮತ್ತು ಪ್ರಾಸ್ತಾವಿಕ ಮಾತುಗಳನ್ನು ಬ್ರಾಹ್ಮಣ ಸಂಘ, ತೀರ್ಥಹಳ್ಳಿ ತಾಲೂಕು (ರಿ ) ಇದರ ಅಧ್ಯಕ್ಷರಾದ ತುಂಬ್ರುಮನೆ ಚಂದ್ರಶೇಖರ್ ನೆರವೇರಿಸಿದರು. ಪೂರ್ಣಕುಂಭದ ಸ್ವಾಗತದ ಜವಾಬ್ದಾರಿಯನ್ನು ಶ್ರೀ ಶಿವರಾಂ ಉಡುಪರು, ಸಂಚಾಲಕರು ಧಾರ್ಮಿಕ ಸಮಿತಿ. ಬ್ರಾಹ್ಮಣ ಸಂಘದ ಕಾರ್ಯದರ್ಶಿ ಶ್ರೀ ಸತೀಶ್ ರವರು ನೆರವೇರಿಸಿದರು. ಡಾ|| ಮನೋಹರ್ ರಾವ್ ಎನ್. ಎಸ್ ಸಂಚಾಲಕರು ಹಿರಿಯರ ಬಳಗ, ಬ್ರಾಹ್ಮಣ ಸಂಘ ಇವರು ವಂದಿಸಿದರು. ಡಾ|| ಮುರಳೀಧರ್ ಕಿರಣಕೆರೆ ನಿರೂಪಿಸಿದರು.
ಶ್ರೀ ಶ್ರೀ ಈಶಪ್ರಿಯ ತೀರ್ಥ ಪಾದಂಗಳವರ ಉಡುಪಿಯ ಶ್ರೀ ಅದಮಾರು ಮಠದ ಕಿರಿಯ ಪೀಠಾಧಿಪತಿಗಳು ಇವರ ಪೂರ್ವಾಶ್ರಮದ ಸ್ನೇಹಿತರಾದ ಡಾ.ಭರತ್ ಎನ್ ಎಂ ನೆಲ್ಲಿಸರ, ಅನಂತ ಕೃಷ್ಣ, ಭುವನ ಎಸ್, ಗಣೇಶ್ ಪೈ, ಮೋಹನ್ ಹಾಗೂ ರಾಘವೇಂದ್ರ ನಾಯಕ್ ಕಾರ್ಯಕ್ರಮ ಯಶಸ್ವಿಯಾಗಲು ಹೆಚ್ಚಿನ ಶ್ರಮ ವಹಿಸಿದ್ದು ಶ್ಲಾಘನೀಯ.
ತೀರ್ಥಹಳ್ಳಿ ಕ್ಷೇತ್ರದ ಶಾಸಕರು ಮತ್ತು ಮಾಜಿ ಗೃಹ ಮಂತ್ರಿಗಳಾದ ಸನ್ಮಾನ್ಯ ಶ್ರೀ ಆರಗ ಜ್ಞಾನೇಂದ್ರ ಅವರು, ರಾಷ್ಟ್ರೀಯ ಶಿಕ್ಷಣ ಸಮಿತಿಯ (ರಿ) ಶಿವಮೊಗ್ಗ ಇದರ ಅಧ್ಯಕ್ಷರು ಮತ್ತು ತಾಲೂಕು ಬ್ರಾಹ್ಮಣ ಸಂಘದ ಮಾಜಿ ಅಧ್ಯಕ್ಷರಾದ ಗುಡ್ಡೇಕೊಪ್ಪ ನಾರಾಯಣ್ ರಾವ್, ಪೂಜ್ಯಪಾದ ಕ್ಲಿನಿಕ್ ಡಾ. ಜೀವಂದರ್ ಜೈನ್ ಹಾಗೂ ಜ್ಞಾನ ದರ್ಶಿನಿ ಶಾಲೆಯ ಅಧ್ಯಕ್ಷರು ಮತ್ತು ಬ್ರಾಹ್ಮಣ ಸಂಘದ ಮಾಜಿ ಅಧ್ಯಕ್ಷರಾದ ಕುಳೂರು ಸತ್ಯನಾರಾಯಣ ರಾವ್ ಕಾರ್ಯಕ್ರಮ ಮುಗಿಯುವವರೆಗೂ ಇದ್ದಿದ್ದು ಪ್ರಶಂಸನೀಯ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.