ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಅಧ್ಯಕ್ಷರು ಸೇವೆಗೆ ಲಭ್ಯ
– ಮೆಕ್ಕಾ ಮದೀನಾ ಪ್ರವಾಸ ಮುಗಿಸಿ ತಾಯ್ನಾಡಿಗೆ ಆಗಮಿಸಿದ ಅಸಾದಿ
– ಜನ ಸ್ನೇಹಿ ನಾಯಕ ಎಂಬ ಹೆಸರು ಪಡೆದಿರುವ ಅಸಾದಿ
NAMMUR EXPRESS NEWS
ತೀರ್ಥಹಳ್ಳಿ: ಕಳೆದೊಂದು ತಿಂಗಳಿಂದ ಮೆಕ್ಕಾ ಮದಿನಾ ಪ್ರವಾಸದಲ್ಲಿದ್ದ ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ಅಸಾದಿ ಅವರು ಏಪ್ರಿಲ್ 21ರಿಂದ ತೀರ್ಥಹಳ್ಳಿ ಪಟ್ಟಣದ ಜನತೆಗೆ ಲಭ್ಯರಿರಲಿದ್ದಾರೆ. ಮುಸಲ್ಮಾನ ಬಾಂಧವರು ಪವಿತ್ರ ಮೆಕ್ಕಾ ಮದೀನ ತಮ್ಮ ಜೀವಮಾನದಲ್ಲಿ ಒಮ್ಮೆಯಾದರೂ ನೋಡಿದರೆ ಜೀವನ ಸಾರ್ಥಕವೆಂಬ ನಂಬಿಕೆ ಇಟ್ಟುಕೊಂಡಿದ್ದಾರೆ. ಈ ಆಶಯದೊಂದಿಗೆ ತಮ್ಮಎಂದೆಂದಿನ ಮೆಕ್ಕಾ ಪ್ರವಾಸ ಮಾಡಬೇಕೆಂಬ ಕನಸನ್ನು ನನಸು ಮಾಡಲು ಅಸಾದಿ ಅವರು ಮೆಕ್ಕಾ ಪ್ರವಾಸ ತೆರಳಿದ್ದರು. ತೀರ್ಥಹಳ್ಳಿ ಜನರ ಕುಂದು ಕೊರತೆಗಳನ್ನ ಶೀಘ್ರಗತಿಯಲ್ಲಿ ಸ್ಪಂದಿಸಿ ನಿವಾರಿಸಿಕೊಡುವ ಆಶಯ ವ್ಯಕ್ತಪಡಿಸಿದ್ದಾರೆ. ಪಟ್ಟಣದ ನಾಗರೀಕರು ಮುಕ್ತವಾಗಿ ಕಛೇರಿಗೆ ಭೇಟಿ ಕೊಡಬಹುದೆಂದು ತಿಳಿಸಿದ್ದಾರೆ. ಅತ್ಯಂತ ಚುರುಕುತನದ ಜನಸ್ನೇಹಿ ಅಧ್ಯಕ್ಷರು ಎಂಬ ಹೆಸರನ್ನು ಅಸಾದಿ ಪಡೆದಿದ್ದಾರೆ.
