Categories
ತೀರ್ಥಹಳ್ಳಿ

ತೀರ್ಥಹಳ್ಳಿ ತುಂಗಾ ಪಿಯು ಕಾಲೇಜಿಗೆ ಅತ್ಯುತ್ತಮ ಫಲಿತಾಂಶ

ತೀರ್ಥಹಳ್ಳಿ ತುಂಗಾ ಪಿಯು ಕಾಲೇಜಿಗೆ ಅತ್ಯುತ್ತಮ ಫಲಿತಾಂಶ
– ಕಾಲೇಜಿಗೆ ಶೇ.92% ಫಲಿತಾಂಶದ ಸಾಧನೆ
– ಕಲಾ,ವಾಣಿಜ್ಯ,ವಿಜ್ಞಾನ ಮೂರು ವಿಭಾಗದಲ್ಲೂ ಉತ್ತಮ ಫಲಿತಾಂಶ
– ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆಗಳು

NAMMUR EXPRESS NEWS
ತೀರ್ಥಹಳ್ಳಿ: 2024-25ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ತುಂಗಾ ಪದವಿ ಪೂರ್ವ ಕಾಲೇಜು ಎಂದಿನಂತೆ ಉತ್ತಮ ಫಲಿತಾಂಶ ಪಡೆದಿದೆ.
ವಾಣಿಜ್ಯ ವಿಭಾಗ – 90.90% ಫಲಿತಾಂಶ ಪಡೆದಿದ್ದು ಸಂಜನ ಹೆಚ್ 527/600 ಟಾಪರ್ ಆಗಿ ಸಾಧನೆ ಮಾಡಿದ್ದಾರೆ. ಕಲಾ ವಿಭಾಗ – 100% ಫಲಿತಾಂಶ ಪಡೆದಿದ್ದು, ಸನ್ನಿಧಿ ಟಿ – 578/600 ಟಾಪರ್ ಆಗಿದ್ದಾರೆ
ವಿಜ್ಞಾನ ವಿಭಾಗ – 87.5% ಫಲಿತಾಂಶ ಪಡೆದಿದೆ. ಮಧು ಎಸ್. ಕೆ – 519/600, 516/600 ಸ್ಪೂರ್ತಿ ಎ. ಎಂ ಟಾಪರ್ ಆಗಿದ್ದಾರೆ.
ಒಟ್ಟಾರೆ ಫಲಿತಾಂಶ ಶೇ.92 ದಾಖಲು ಮಾಡಿದ್ದು ಮತ್ತೆ ತುಂಗಾ ಪಿಯುಸಿ ಸಾಧನೆಯತ್ತ ಸಾಗಿದೆ.
ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಕಾಲೇಜಿನ ಪರವಾಗಿ ಆಡಳಿತ ಮಂಡಳಿಯವರು, ಪದವಿ ಮತ್ತು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

ಯಾವ ವಿಭಾಗಕ್ಕೆ ಎಷ್ಟು ಫಲಿತಾಂಶ?

ವಾಣಿಜ್ಯ ವಿಭಾಗ – 90.90% ಫಲಿತಾಂಶ
ಕಲಾ ವಿಭಾಗ – 100% ಫಲಿತಾಂಶ
ವಿಜ್ಞಾನ ವಿಭಾಗ – 87.5% ಫಲಿತಾಂಶ
ಒಟ್ಟು ಕಾಲೇಜಿನ ಫಲಿತಾಂಶ ಶೇ.92 ದಾಖಲು

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.