ಮಂಜುನಾಥ ಶೆಟ್ಟಿ, ವೆಂಕಟೇಶ್ ಹೆಗಡೆ ಅವರಿಗೆ ಪ್ರಶಸ್ತಿ
– ಸಮಾಜ ಸೇವೆ ಸಲ್ಲಿಸಿರುವ ಇಬ್ಬರಿಗೆ ರಾಷ್ಟ್ರೀಯ ರತ್ನ ಪ್ರಶಸ್ತಿ
– ಬೆಂಗಳೂರಲ್ಲಿ ಪ್ರಶಸ್ತಿ ಪ್ರದಾನ: ಶುಭಾಶಯ ಸಲ್ಲಿಸಿದ ಸ್ನೇಹಿತರು
NAMMUR EXPRESS NEWS
ತೀರ್ಥಹಳ್ಳಿ: ಕರ್ನಾಟಕ ನೇತಾಜಿ ಚಾರಿಟಬಲ್ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ 2025-26ನೇ ಸಾಲಿನ ಅತ್ಯುತ್ತಮ ರಾಷ್ಟ್ರೀಯ ರತ್ನ ಪ್ರಶಸ್ತಿಗೆ ತೀರ್ಥಹಳ್ಳಿಯ ಇಬ್ಬರು ಸಮಾಜ ಸೇವಕರನ್ನು ಆಯ್ಕೆ ಮಾಡಲಾಗಿದೆ. ಕನ್ನಡ ಭಾಷೆಯ ಉಳಿವನ್ನೆ ತನ್ನ ಉಸಿರಾಗಿಸಿಕೊಂಡು ಕನ್ನಡ ಭಾಷೆ ಹಾಗೂ ಕನ್ನಡ ಶಿಕ್ಷಕರ ಪರವಾಗಿ ಹತ್ತಾರು ಕನ್ನಡಪರ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ ಬಂದಿರುವ ತೀರ್ಥಹಳ್ಳಿಯ ಮಂಜುನಾಥ್ ಶೆಟ್ಟಿ ಹಾಗೂ ಕರವೇ ನಾಯಕ ವೆಂಕಟೇಶ್ ಹೆಗಡೆ ಎಂ ಆರ್ ಅವರ ಸಮಾಜ ಸೇವೆಯನ್ನು ಗುರುತಿಸಿ ಹಾಗೂ ಕರ್ನಾಟಕ ಚಾರಿಟಬಲ್ ಟ್ರಸ್ಟ್ ಸದಸ್ಯತ್ವದ ಆಧಾರದ ಮೇಲೆ ಗೌರವಪೂರ್ವಕವಾಗಿ 2025-26ನೇ ಸಾಲಿನ ರಾಷ್ಟ್ರೀಯ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು ಇತ್ತೀಚಿಗೆ ಬೆಂಗಳೂರಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ವೇಳೆ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಸೇರಿದಂತೆ ಹಲವು ಗಣ್ಯರು ಇದ್ದರು.
