Categories
ತೀರ್ಥಹಳ್ಳಿ

ರಾಮಮಂದಿರ ಉದ್ಘಾಟನೆಯಂದು ಹಳ್ಳಿ ಹಳ್ಳಿಗಳಲ್ಲಿ ಹಬ್ಬ

ರಾಮಮಂದಿರ ಉದ್ಘಾಟನೆಯಂದು ಹಳ್ಳಿ ಹಳ್ಳಿಗಳಲ್ಲಿ ಹಬ್ಬ
– ವಿವಿಧ ಪೂಜೆ, ಹೋಮ ಹವನ, ಅನ್ನ ಸಂತರ್ಪಣೆ
– ಎಲ್.ಇ.ಡಿ ಟಿವಿಯಲ್ಲಿ ಉದ್ಘಾಟನೆ ಲೈವ್

NAMMUR EXPRESS NEWS
ತೀರ್ಥಹಳ್ಳಿ: ಅಯೋಧ್ಯೆಯ ಶ್ರೀರಾಮ ಜನ್ಮಸ್ಥಾನದಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಮಂದಿರದ ನೆಲ ಅಂತಸ್ತಿನಲ್ಲಿರುವ ಗರ್ಭಗುಡಿಯಲ್ಲಿ ಶ್ರೀ ರಾಮಲಲ್ಲಾ( ಬಲರಾಮ) ನೂತನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯೂ ನೆರವೇರಲಿದೆ. ಜ.22ರಂದು ಸೋಮವಾರದಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1ರ ಮಧ್ಯದಲ್ಲಿ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಅಯೋಧ್ಯ ನಗರಿಯಲ್ಲಿ ಈ ಸಂದರ್ಭದಲ್ಲಿ ಸಂಭ್ರಮದ ವಾತಾವರಣವು ನಿರ್ಮಾಣವಾಗಲಿದೆ. ಹಾಗೂ ಹಳ್ಳಿ ಹಳ್ಳಿಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಲಿದ್ದು, ಈ ಅಮೃತಗಳಿಗೆಯಲ್ಲಿ ತಮ್ಮ ಊರಿನ ಮಂದಿರಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸುವುದು ಮಂದಿರ ಕೇಂದ್ರಿತವಾಗಿ ಈ ಕಾರ್ಯಕ್ರಮವನ್ನು ಆಯೋಜಿಸುವುದು ದೂರದರ್ಶನ ಅಥವಾ ಎಲ್ಇಡಿ ಪರದೆ ಮೇಲೆ ಪ್ರೊಜೆಕ್ಟರ್ ಹಾಗೂ ಯಾವುದೇ ತರಹದ ಪರದೆಯಲ್ಲಿ ಅಯೋಧ್ಯೆಯ ಕಾರ್ಯಕ್ರಮವನ್ನು ನೇರವಾಗಿ ವೀಕ್ಷಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಆಯಾ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಿರುವ ವಿವಿಧ ದೇವತೆಗಳ ಭಜನೆ, ಕೀರ್ತನೆ, ಪೂಜೆ ಮತ್ತು ಆರತಿಗಳನ್ನು ಮಾಡುವುದು. ಶ್ರೀರಾಮ ಜಯರಾಮ ಜಯ ಜಯ ರಾಮ ವಿಜಯ ಮಹಾಮಂತ್ರವನ್ನು ಸಾಮೂಹಿಕವಾಗಿ 108 ಬಾರಿ ಜಪ ಮಾಡುವುದು. ವಿವಿಧ ಪೂಜೆ, ಹೋಮ ಹವನ, ಅನ್ನ ಸಂತರ್ಪಣೆ ಕೂಡ ನಡೆಯಲಿದೆ. ಎಲ್ಲ ದೂರದರ್ಶನ ಚಾನೆಲ್ ಗಳಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ನೇರಪ್ರಸಾರ ಇರುತ್ತದೆ. ಪ್ರಾಣ ಪ್ರತಿಷ್ಠಾಪನೆಯ ದಿನದಂದು ಸಂಜೆ ಸೂರ್ಯಾಸ್ತವಾದ ಮೇಲೆ ತಮ್ಮ ತಮ್ಮ ಮನೆಗಳ ಮುಂದೆ ಎಲ್ಲಾ ದೇವದಿದೇವತೆಗಳನ್ನು ಪ್ರಸನ್ನ ಗೊಳಿಸಲು ದೀಪಗಳನ್ನು ಬೆಳಗಲು ಗ್ರಾಮೀಣ ಭಾಗಗಳಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಜಗತ್ತಿನ ಕೋಟಿ ಕೋಟಿ ಮನೆಗಳ ಮುಂದೆ ದೀಪುತ್ಸವ ನಡೆದು ಇಡೀ ಜಗತ್ತು ದೀಪಗಳ ಮಾಲೆಯಿಂದ ಜ್ಯೋತಿರ್ಮಯವಾಗುವ ದಿನಕ್ಕೆ ಈಗಾಗಲೇ ದಿನಗಣನೆ ಆರಂಭವಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.