ತೀರ್ಥಹಳ್ಳಿಗರಿಂದ ವಿದೇಶದಲ್ಲೂ ರಾಮನ ಉತ್ಸವ!
– ಪ್ರವಾಸ ಹೋಗಿದ್ದ ತೀರ್ಥಹಳ್ಳಿಗರ ಜತೆ ಅನಿವಾಸಿ ಭಾರತೀಯರಿಂದ ರಾಮ ಸ್ಮರಣೆ
– ಪ್ರವಾಸದಲ್ಲಿರುವ ಭಾರತೀಯರಿಂದ ವಿದೇಶದಲ್ಲಿ ಆಚರಣೆ
NAMMUR EXPRESS NEWS
ತೀರ್ಥಹಳ್ಳಿ: ಜನವರಿ 22ರ ರಾಮ ಪ್ರತಿಷ್ಠಾಪನೆಯನ್ನು ಅಯೋಧ್ಯೆಯ ಮಾತ್ರವಲ್ಲದೆ ಪ್ರತಿ ಊರು, ಹಳ್ಳಿ, ಮನೆಗಳಲ್ಲೂ ಆಚರಿಸಲಾಗಿದೆ. ಅಷ್ಟೇ ಅಲ್ಲದೆ ಅನಿವಾಸಿ ಭಾರತೀಯರು ವಿದೇಶಗಳಲ್ಲೂ ಈ ಸಂಭ್ರಮವನ್ನು ಜೋರಾಗಿಯೇ ಸಂಭ್ರಮಿಸಿದ್ದಾರೆ. ಯುಕೆ, ದುಬೈ, ಅಮೇರಿಕಾಗಳಲ್ಲು ರಾಮ ಭಜನೆ, ಆಚರಣೆ ಕಂಡುಬಂದಿದ್ದು ವಿಶೇಷವಾಗಿತ್ತು. ಹಾಗೆಯೇ, ದಕ್ಷಿಣ ಏಷ್ಯಾದ ವಿಯೆಟ್ನಾಮ್ ದೇಶದ ಪ್ರವಾಸದಲ್ಲಿ ಇರುವ ತೀರ್ಥಹಳ್ಳಿಗರಾದ ಅರುಣ ಮಲ್ಲೇಸರ, ರವಿ ಶೆಟ್ಟಿ ನೊಣಬೂರು, ಪ್ರದೀಪ್ ಹೆಗ್ಗೋಡು, ತೀರ್ಥಹಳ್ಳಿಯ ದೀಲಿಪ್ ಕುಮಾರ, ರವೀಶ್ ಮತ್ತು ವಸಂತ ಮತ್ತಿತರು ಅಲ್ಲಿನ ಅನಿವಾಸಿ ಭಾರತೀಯರೊಂದಿಗೆ ಒಟ್ಟಾಗಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನಾ ದಿನ ಶ್ರೀ ರಾಮನ ಜಯಕಾರ ಕೂಗುತ್ತಾ ವಿಯೇಟ್ನಾಮ್ ನಲ್ಲಿ ಹಬ್ಬ ಆಚರಿಸಿದರು.