ತೀರ್ಥಹಳ್ಳಿಯ ರಾಮೇಶ್ವರ ತೀರದಲ್ಲಿ ತುಂಗಾ ಆರತಿ..!
– ಅನೇಕ ಭಕ್ತರ ಆಗಮನ : ಪಟಾಕಿ ಸಿಡಿಸಿ ಸಂಭ್ರಮ
– ಬೆಳಗ್ಗಿನಿಂದಲೂ ವಿಶೇಷ ಧಾರ್ಮಿಕ ಪೂಜೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ರಾಮೇಶ್ವರ ದೇವಸ್ಥಾನಕ್ಕೆ ಹೊಂದಿಕೊಂಡಂತೆ ಹರಿಯುವ ತುಂಗಾ ನದಿಯ ದಂಡೆಯಲ್ಲಿ ಸೋಮವಾರ ಸಂಜೆ ನಡೆದ ತುಂಗಾ ಆರತಿ ಮಹೋತ್ಸವ ನೆರೆದಿದ್ದವರ ಕಣ್ಮನ ಸೆಳೆಯಿತು. ದೇವಸ್ಥಾನದಲ್ಲಿ ವಿಶೇಷ ಪೂಜೆಯ ನಂತರ ಸಂಜೆ ಉತ್ಸವ ಮೂರ್ತಿಯು ತುಂಗಾ ನದಿಯ ತೀರಕ್ಕೆ ತಲುಪಿ ಶ್ರದ್ಧಾ ಭಕ್ತಿಯಿಂದ ಅದ್ದೂರಿ ತುಂಗಾ ಆರತಿ ನಡೆದಿದ್ದು , ಒಂದು ದಡದಲ್ಲಿ ದೀಕ್ಷಿತ್ ಜೋಯ್ಸ್ ರವರ ಸಾರಥ್ಯದಲ್ಲಿ ಮತ್ತು ಇನ್ನೊಂದು ದಡದಲ್ಲಿ ವೇದ ಬ್ರಹ್ಮ ಲಕ್ಷ್ಮೀಶ ತಂತ್ರಿಗಳ ಸಾರಾಥ್ಯದಲ್ಲಿ ನಡೆದಿದ್ದು, ಎರಡು ಕಡೆಯ ದಡದಲ್ಲಿ ತುಂಗಾ ಆರತಿ ವಿಶೇಷವಾಗಿ ನಡೆದಿದ್ದು ವಿಶೇಷವಾಗಿತ್ತು.
ನದಿಗೆ ಹೋಗಲು ವಿಶೇಷ ರೀತಿಯಲ್ಲಿ ವಿದ್ಯುತ್ ನಿಂದ ಅಲಂಕರಿಸಿದ್ದರು. ನಂತರ ಪಟಾಕಿ ಸಿಡಿಸಲಾಯಿತು. ದೀಪಗಳಿಂದ ಇಡೀ ನದಿಗೆ ಅಲಂಕರಿಸಿದ್ದರಿಂದ ಇಡೀ ಪರಿಸರಕ್ಕೆ ವಿಶೇಷ ಕಳೆ ಬಂದಿತ್ತು. ತುಂಗಾ ನದಿಯ ದಡದಲ್ಲಿ ಸಾವಿರಾರು ಭಕ್ತರು ಆಗಮಿಸಿ ತುಂಗಾ ಆರತಿಯನ್ನು ವೀಕ್ಷಿಸಿ ಶ್ರೀರಾಮನಾಮವನ್ನು ಜಪಿಸಿದರು. ಹಾಗೂ ಶಾಸಕ ಆರಗ ಜ್ಞಾನೇಂದ್ರ ರವರು ಕೂಡ ಈ ದೇವತಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇನ್ನು ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಹಿನ್ನೆಲೆ ಬೆಳಗ್ಗಿನಿಂದಲೆ ರಾಮೇಶ್ವರ ದೇವಸ್ಥಾನ ಸೇರಿದಂತೆ ರಾಜ್ಯದ ಎಲ್ಲೆಡೆ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನು ಹಾಗೂ ಅನ್ನ ಸಂತರ್ಪಣೆಯನ್ನು ನಡೆಸಲಾಗಿತ್ತು.