Categories
ತೀರ್ಥಹಳ್ಳಿ

ಸಿಗಂದೂರು ಸೇತುವೆ ಮಾದರಿ ಜತೆ ಗಣೇಶ!

ಸಿಗಂದೂರು ಸೇತುವೆ ಮಾದರಿ ಜತೆ ಗಣೇಶ!
– ಸುಳುಗೋಡು-ಯಡೂರುನಲ್ಲಿ ವಿಭಿನ್ನ ಆಕರ್ಷಣೆಯ ಗಣಪತಿ
– ಸಿಗಂದೂರು ಸೇತುವೆ ಅದ್ಭುತ ಮಾದರಿ ತಯಾರಿಸಿ ಗಣೇಶೋತ್ಸವ

NAMMUR EXPRESS NEWS
ತೀರ್ಥಹಳ್ಳಿ : ನಾಡಿನ ಮೂಲೆಮೂಲೆಗೂ ಗಣೇಶ ಚತುರ್ಥಿಯ ಹಬ್ಬದ ಕಳೆ ಮನೆಮಾಡಿದೆ. ವಿಶೇಷವಾಗಿ ಮಲೆನಾಡಿನಲ್ಲಿ ತೀವ್ರ ಮಳೆಯ ನಡುವೆಯೂ ಸಾರ್ವಜನಿಕ ಗಣೇಶೋತ್ಸವಗಳನ್ನು ಜನರು ಅಪಾರ ಉತ್ಸಾಹದಿಂದ ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ.
ಸುಳುಗೋಡು-ಯಡೂರು ವಿನಾಯಕ ಸೇವಾ ಸಮಿತಿಯು ಪ್ರತಿವರ್ಷವೂ ವಿಭಿನ್ನ ಆಕರ್ಷಣೆಗಳ ಮೂಲಕ ಭಕ್ತರ ಮನಗೆಲ್ಲುತಿದೆ. ಕಳೆದ ವರ್ಷ ಮಾಣಿ ಡ್ಯಾಂ ಮಾದರಿಯನ್ನು ನಿರ್ಮಿಸಿ ಎಲ್ಲರ ಮೆಚ್ಚುಗೆ ಪಡೆದಿದ್ದ ಸಮಿತಿ, ಈ ಬಾರಿ ಇತ್ತೀಚೆಗಷ್ಟೇ ಲೋಕಾರ್ಪಣೆಗೊಂಡ ಸಿಗಂದೂರು ಸೇತುವೆಯ ಅದ್ಭುತ ಮಾದರಿಯನ್ನು ತಯಾರಿಸಿ ಗಣೇಶೋತ್ಸವಕ್ಕೆ ವಿಶಿಷ್ಟ ಮೆರಗು ನೀಡಿದೆ.
ಆದರೆ ಈ ಬಾರಿ ಸಮಿತಿಯ ವಿಶೇಷತೆ ಕೇವಲ ಕಲಾತ್ಮಕತೆಯಲ್ಲಿ ಮಾತ್ರ ಸೀಮಿತವಾಗಿರದೆ, ಗ್ರಾಮದ ಸಮಗ್ರ ಅಭಿವೃದ್ಧಿಯ ಅವಶ್ಯಕತೆಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಗ್ರಾಮಸ್ಥರಲ್ಲಿ ಹೋರಾಟದ ಕಿಚ್ಚು ಹೊತ್ತಿಸುವ ಕೆಲಸವನ್ನೂ ಕೈಗೊಂಡಿದೆ. ಹಬ್ಬದ ಸಂಭ್ರಮದ ನಡುವೆ ಸಮಾಜಮುಖಿ ಚಟುವಟಿಕೆಯನ್ನು ಹಬ್ಬದ ಅಂಗವಾಗಿ ಸೇರಿಸಿರುವುದು ಸ್ಥಳೀಯರಲ್ಲಿ ಹೊಸ ಚೈತನ್ಯವನ್ನು ಉಂಟುಮಾಡಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.