ಗೌರಿ-ಗಣೇಶ ಹಬ್ಬ: ಖರೀದಿ ಜೋರು.. ಎಲ್ಲೆಡೆ ಸಂಭ್ರಮ
– ತೀರ್ಥಹಳ್ಳಿ ತಾಲೂಕಲ್ಲಿ ಒಟ್ಟು 253 ಗಣಪತಿ ಪ್ರತಿಷ್ಠಾಪನೆ
– ಹಬ್ಬದ ಸಂಭ್ರಮ ಕಸಿಯುತ್ತಾ ಮಳೆ: ಮೊದಲ ದಿನ 84 ಗಣಪತಿ ವಿಸರ್ಜನೆ
NAMMUR EXPRESS NEWS
ತೀರ್ಥಹಳ್ಳಿ: ಗೌರಿ-ಗಣೇಶ ಹಬ್ಬದ ಸಂಭ್ರಮ ಜೋರಾಗಿದೆ. ಮಳೆಯ ಅರ್ಭಟವೂ ಹೆಚ್ಚಾಗಿದ್ದು ಹಬ್ಬ ಇನ್ನಷ್ಟು ಕಳೆ ಕಟ್ಟಿದೆ. ಹಬ್ಬದ ಖರೀದಿ ಬಿರುಸಾಗಿದೆ. ಎಲ್ಲೆಡೆ ಜನ ಕಾಣುತ್ತಿದ್ದಾರೆ.
ತೀರ್ಥಹಳ್ಳಿಯಲ್ಲಿ ಸೋಮವಾರ ಹಬ್ಬದ ಸಂತೆ ಬಲು ಜೋರಾಗಿತ್ತು. ಸಾಲು-ಸಾಲು ಸರ್ಕಾರಿ ರಜೆ, ಹಲವು ಶಾಲೆಗಳಿಗೆ 4ರಿಂದ 6 ದಿನಗಳ ನಿರಂತರ ರಜೆ ನೀಡಿರುವುದರಿಂದ ಪರ ಊರುಗಳಲ್ಲಿ ನೆಲೆಸಿರುವ ತೀರ್ಥಹಳ್ಳಿ ಮೂಲದವರು ಹಬ್ಬಕ್ಕೆ ಊರಿಗೆ ಬಂದಿದ್ದಾರೆ.
ಸೋಮವಾರ, ಮಂಗಳವಾರ ತೀರ್ಥಹಳ್ಳಿಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ವಿವಿಧೆಡೆ ಸಾರ್ವಜನಿಕ ಗಣಪತಿ ಪ್ರತಿಷ್ಠಾಪನಾ ಸಮಿತಿಗಳೂ ಹಬ್ಬಕ್ಕಾಗಿ ತಮ್ಮ ತಮ್ಮ ಬಡಾವಣೆಗಳಲ್ಲಿ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಿದ್ದಾರೆ. ಊರು ಜಗಮಗಿಸುತ್ತಿದೆ.
ತೀರ್ಥಹಳ್ಳಿ ತಾಲೂಕಲ್ಲಿ ಒಟ್ಟು 253 ಗಣಪತಿ ಪ್ರತಿಷ್ಠಾಪನೆ
ತೀರ್ಥಹಳ್ಳಿ ತಾಲೂಕಲ್ಲಿ ಒಟ್ಟು 253 ಗಣಪತಿ ಪ್ರತಿಷ್ಠಾಪನೆ ಮಾಡಲಾಗಿದೆ. ತೀರ್ಥಹಳ್ಳಿ ಠಾಣಾ ವ್ಯಾಪ್ತಿಯಲ್ಲಿ 135, ಆಗುಂಬೆ ಠಾಣೆ ವ್ಯಾಪ್ತಿಯಲ್ಲಿ 54, ಮಾಳೂರು ವ್ಯಾಪ್ತಿಯಲ್ಲಿ 64 ಗಣಪತಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಮೊದಲ ದಿನ ಒಟ್ಟು 84 ಗಣಪತಿ ವಿಸರ್ಜನೆ ಮಾಡಲಾಗುತ್ತದೆ.
