ಕಾಫಿನಾಡಿನಾದ್ಯಂತ ಗೌರಿಗಣೇಶ ಹಬ್ಬದ ಸಂಭ್ರಮ
* ಇಂದು ಸ್ವರ್ಣ ಗೌರೀವ್ರತ ನಾಳೆ ಗಣೇಶನ ಪ್ರತಿಷ್ಠಾಪನೆ
* ವಿಶೇಷ ಆಕರ್ಷಣೆಗಳೊಂದಿಗೆ ತುಂಬಿದ ಹಬ್ಬದ ತುಂಬಿದ ಕಳೆ
NAMMMUR EXPRESS NEWS
ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಗೌರಿಗಣೇಶ ಹಬ್ಬ ಬಹಳ ಸಡಗರದಿಂದ ನಡೆಯುತ್ತಿದ್ದು, ಇಂದು ಭಕ್ತಿ ಸಡಗರದಿಂದ ಸ್ವರ್ಣಗೌರೀ ವ್ರತ ಆಚರಣೆ ನಡೆಯಿತು.ನಾಳೆಯಿಂದ ಗಣೇಶೋತ್ಸವಕ್ಕೆ ಭರ್ಜರಿ ತಯಾರಿ ನಡೆದಿದ್ದು,ನಾಳೆ ಗಣೇಶ ಪ್ರತಿಷ್ಠಾಪಿಸುವ ಕಾರ್ಯಕ್ರಮಗಳಿಗೆ ಕಾಫಿನಾಡು ಸಜ್ಜಾಗಿದೆ. ಚಿಕ್ಕಮಗಳೂರು ನಗರದಲ್ಲಿ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನೆ ಹಾಗೂ ಗಣೇಶೋತ್ಸವಕ್ಕೆ ಭರ್ಜರಿ ತಯಾರಿ ನಡೆದಿದ್ದು,ಪ್ರತಿ ವರ್ಷವೂ ಒಂದಿಲ್ಲೊಂದು ವಿಶೇಷತೆಯೊಂದಿಗೆ ಆಚರಿಸುವ ಚಿಕ್ಕಮಗಳೂರು ಹಿಂದೂ ಮಹಾ ಗಣಪತಿ ಸಮಿತಿಯು ಈ ಬಾರಿ ಗಣೇಶೋತ್ಸವ ಮಹಾದ್ವಾರಕ್ಕೆ ‘ ಶ್ರೀ ಧರ್ಮಸ್ಥಳ ಮಹಾದ್ವಾರ’ ಎಂದು ಹೆಸರಿಡುವುದರೊಂದಿಗೆ ಮತ್ತೊಂದು ವಿಶೇಷತೆಗೆ ಕಾರಣವಾಗಿದೆ.
ಬಾಳೆಹೊನ್ನೂರಿನ ವಿದ್ಯಾಗಣಪತಿ ಸೇವಾ ಸಮಿತಿ,ಆಲ್ದೂರು,ಮೂಡಿಗೆರೆ,ಟಳಸ,ಎನ್ ಆರ್ ಪುರ ಹಿಂದೂ ಮಹಾ ಗಣಪತಿ,ಕೊಪ್ಪ,ಹರಿಹರಪುರ,ಶೃಂಗೇರಿ,ತರೀಕೆರೆ,ಬಿರೂರು,ಅಜ್ಜಂಪುರಸಾರ್ವಜನಿಕ ಮಹಾಗಣಪತಿ ಸೇವಾ ಸಮಿತಿಗಳು ತಾಲೂಕು ಕೇಂದ್ರ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಗಣಪತಿ ಪ್ರತಿಷ್ಠಾಪಿಸಲಿದ್ದು,ಉಳಿದಂತೆ ಜಿಲ್ಲೆಯ ಎಲ್ಲಾ ಊರುಗಳಲ್ಲೂ ಗಣೇಶೋತ್ಸವದ ವಿಜೃಂಭಣೆಯ ಆಚರಣೆಗೆ ಸಜ್ಜಾಗಿದೆ.
