ತೀರ್ಥಹಳ್ಳಿ ಸಾಧಕ ವಿದ್ಯಾರ್ಥಿಗಳಿಗೆ ಗಾಯತ್ರಿ ಜುವೆಲ್ಲರ್ಸ್ ಗೌರವ
– ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಸನ್ಮಾನ
– ಉದ್ಯಮದ ಜತೆಗೆ ಸಾಮಾಜಿಕ ಕಾಳಜಿ ಮೆರೆಯುತ್ತಿರುವ ಸಂಸ್ಥೆ
NAMMUR EXPRESS NEWS
ಮಲೆನಾಡಿನ ಪ್ರತಿಷ್ಠಿತ ಜ್ಯುವೆಲ್ಲರಿ ತೀರ್ಥಹಳ್ಳಿಯ ಗಾಯತ್ರಿ ಜ್ಯುವೆಲ್ಲರ್ಸ್ ವತಿಯಿಂದ ರಾಜ್ಯಕ್ಕೆ ಹಾಗೂ ತಾಲೂಕಿಗೆ ಪ್ರಮುಖ ಸ್ಥಾನ ಪಡೆದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.
ತೀರ್ಥಹಳ್ಳಿ ಗಾಂಧಿ ಚೌಕದಲ್ಲಿರುವ ಜ್ಯುವೆಲ್ಲರಿಯಲ್ಲಿ ಪಿಯುಸಿಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ದೀಕ್ಷಾ ರಾಘವೇಂದ್ರ ಕಲ್ಕೂರ್
(600/600 ರಾಜ್ಯಕ್ಕೆ ಪ್ರಥಮ ಸ್ಥಾನ ) ಹಾಗೆಯೇ ಎಸ್ ಎಸ್ ಎಲ್ ಸಿಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಕನ್ನಿಕಾ ಜಿ ಶೆಟ್ಟಿ ,ಪ್ರೇಕ್ಷ ಪೂಜಾರಿ, ಉತ್ತಮ ಸಾಧನೆ ಮಾಡಿದ ಅವಳಿ ಮಕ್ಕಳಾದ ಸಂಕೇತ್ ಪಿ ಭಟ್ ,ಸಮರ್ಥ್ ಪಿ ಭಟ್ ಸೇರಿದಂತೆ ಅನೇಕ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ಸಾಧಕ ಮಕ್ಕಳ ಪೋಷಕರು ಹಾಜರಿದ್ದರು.ಅವರನ್ನು ಕೂಡ ಗೌರವಿಸಲಾಯಿತು.
ಇನ್ನು ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಸಾಧನೆಯನ್ನು ಮಾಡಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಕೆಗಳನ್ನು ಗಾಯತ್ರಿ ಜ್ಯುವೆಲ್ಲರ್ಸ್ ತಂಡ ಮಾಡಿದೆ. ಗಾಯತ್ರಿ ಜ್ಯುವೆಲ್ಲರ್ಸ್ ಮಾಲೀಕರಾದ ಅನಂತ ಪದ್ಮನಾಭ ಆಚಾರ್ಯ ಹಾಗೂ ಮೋಹಿನಿ ಆಚಾರ್ಯ, ಎಲ್ಲಾ ಸಿಬ್ಬಂದಿ ಹಾಜರಿದ್ದರು.
ಉದ್ಯಮದ ಜತೆಗೆ ಸಾಮಾಜಿಕ ಕಾಳಜಿ ಮೆರೆಯುತ್ತಿರುವ ಸಂಸ್ಥೆ
ಮಲೆನಾಡಿನಲ್ಲೇ ಉತ್ತಮ ಚಿನ್ನ, ಬೆಳ್ಳಿ ಆಭರಣಗಳಿಗೆ ಹೆಸರುವಾಸಿ ಆಗಿರುವ ಗಾಯತ್ರಿ ಜ್ಯುವೆಲ್ಲರ್ಸ್ ಉದ್ಯಮದ ಜತೆಗೆ ಸಾಮಾಜಿಕ ಕಾಳಜಿ ಮೂಲಕ ಜನರ ಪ್ರೀತಿಗೆ ಪಾತ್ರವಾಗಿದೆ. ಇದೀಗ ತೀರ್ಥಹಳ್ಳಿಯ ಸಾಧಕ ಮಕ್ಕಳನ್ನು ಗೌರವಿಸುವ ಮೂಲಕ ಮತ್ತೆ ಸೇವಾ ಹೆಜ್ಜೆ ಇಟ್ಟಿದೆ.
