Categories
ಕರಾವಳಿ

ಕರಾವಳಿ ಮೂಲದ ಪೈಲಟ್‌ ವಿಮಾನ ಅಪಘಾತಕ್ಕೆ ಬಲಿ: ನುಡಿ ನಮನ

ಕರಾವಳಿ ಮೂಲದ ಪೈಲಟ್‌ ವಿಮಾನ ಅಪಘಾತಕ್ಕೆ ಬಲಿ: ನುಡಿ ನಮನ
– ಶಿಷ್ಯನನ್ನು ಸ್ಮರಿಸಿಕೊಂಡು ಕಂಬನಿ ಮಿಡಿದ ಮಂಗಳೂರು ಪ್ರಾಧ್ಯಾಪಕರು
– 1000 ಗಂಟೆ ವಿಮಾನ ಓಡಿಸಿ ಅನುಭವ ಇದ್ರು ವಿಧಿ ಬಿಡಲಿಲ್ಲ..!

NAMMUR EXPRESS NEWS
ಅಹಮದಾಬಾದ್ ವಿಮಾನ ದುರಂತದಲ್ಲಿ ಪ್ರಾಣವನ್ನು ಕಳೆದುಕೊಂಡ 241 ಜನರಿಗಾಗಿ ಇಡೀ ದೇಶವೇ ಸಾಮಾಜಿಕ ಜಾಲತಾಣಗಳ ಮೂಲಕ, ಬರಹಗಳ ಮೂಲಕ ಶ್ರದ್ಧಾಂಜಲಿ ಅರ್ಪಿಸುತ್ತಿದೆ. ರಾಜ್ಯ, ಭಾಷೆ, ಜಾತಿ, ಧರ್ಮ, ಅಂತಸ್ತು ಎನ್ನುವುದು ಇಲ್ಲಿ ಗೌಣವಾಗಿದೆ.ಸೂಕ್ಷ್ಮ ಮನಸ್ಸು, ನೋವಿಗೆ ಸ್ಪಂದಿಸುವ ಹೃದಯ ಇಲ್ಲಿ ಮುಖ್ಯವಾಗಿದೆ.
ವಿಮಾನ ದುರಂತದಲ್ಲಿ ಕರ್ನಾಟಕ ಮೂಲದ ಸಹ ಪೈಲಟ್ ಕ್ಲೈವ್ ಕುಂದರ್ ಅಸುನೀಗಿದ್ದಾರೆ. ಇವರು ಮಂಗಳೂರು ಮೂಲದವರಾಗಿದ್ದು, ಮುಂಬೈಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ.
ಕ್ಲೈವ್ ಕುಂದರ್ ಅವರು ಪ್ಯಾರಿಸ್ ನ ಏರ್ ಇಂಕ್ ನಲ್ಲಿ ತರಬೇತಿ ಪಡೆದಿದ್ದು, 1.100ಗಂಟೆಗಳ ಹಾರಾಟದ ಅನುಭವ ಹೊಂದಿದ್ದರು. ಅಷ್ಟೇ ಅಲ್ಲದೆ 8.200ಕ್ಕೂ ಹೆಚ್ಚು ಹಾರಾಟದ ಅನುಭವ ಹೊಂದಿದ್ದ ಲೈನ್ ಟ್ರೈನಿಂಗ್ ಕ್ಯಾಪ್ಟನ್ ಆದ ಸುಮಿತ್ ಸರ್ಭವಾಲ್ ಅವರಿಗೆ ಸಹಾಯಕರಾಗಿದ್ದರು.
“ಕ್ಲೈವ್ ತುಂಬಾ ಪ್ರತಿಭಾವಂತ ಬುದ್ಧಿವಂತ ಮತ್ತು ಸಮಯವನ್ನು ಸರಿಯಾಗಿ ಪಾಲಿಸುವ ಶಿಸ್ತುಬದ್ಧ ವಿದ್ಯಾರ್ಥಿಯಾಗಿದ್ದ ಅವನ ಈ ಶಿಸ್ತುಬದ್ಧ ಜೀವನವೇ ಯಶಸ್ವಿ ಪೈಲಟ್ ಆಗಿ ರೂಪಿಸಿತು. ಇಂದು ಅವನ ಸಾವಿನ ಸುದ್ಧಿಯನ್ನು ಅರಗಿಸಿಕೊಳ್ಳಲಾಗುತ್ತಿಲ್ಲ” ಎಂದು ಕ್ಲೈವ್ ಕುಂದರ್ ಅವರಿಗೆ ಪಿಯುಸಿಯಲ್ಲಿ ಭೌತಶಾಸ್ತ್ರವನ್ನು ಬೋಧಿಸುತ್ತಿದ್ದ ಊರ್ವಶಿ ಎನ್ನುವ ಪ್ರಾಧ್ಯಾಪಕಿಯೊಬ್ಬರು ಶಿಷ್ಯನನ್ನು ಸ್ಮರಿಸಿಕೊಂಡು ಕಂಬನಿ ಮಿಡಿದಿದ್ದಾರೆ.
ಕ್ಲೈವ್ ಕುಂದರ್ ಬಾಲಿವುಡ್ ನಟ ವಿಕ್ರಾಂತ್ ಮಾಸಿ ಅವರಿಗೆ ಸಂಬಂಧಿ ಎಂದು ತಿಳಿದುಬಂದಿದ್ದು, ಬಾಲಿವುಡ್ ನ ಪ್ರಮುಖ ನಟ ನಟಿಯರು ಕೂಡ ಕ್ಲೈವ್ ಕುಂದರ್ ಅವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.