Categories
ತೀರ್ಥಹಳ್ಳಿ

ಗೀತಾ ರಮೇಶ್ ತೀರ್ಥಹಳ್ಳಿ ಪ. ಪಂ ನೂತನ ಸಾರಥಿ!

ಗೀತಾ ರಮೇಶ್ ತೀರ್ಥಹಳ್ಳಿ ಪ. ಪಂ ನೂತನ ಸಾರಥಿ!
– ಅಧ್ಯಕ್ಷೆಯಾಗಿ ಗೀತಾ ರಮೇಶ್ ಆಯ್ಕೆ: ಫಲ ಕೊಡದ ಬಿಜೆಪಿ ತಂತ್ರಗಾರಿಕೆ!
– ಕಿಮ್ಮನೆ-ಮಂಜುನಾಥ ಗೌಡ ಜೋಡಿ ದರ್ಬಾರ್..!

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷೆಯಾಗಿ ಗೀತಾ ರಮೇಶ್ ಅಧಿಕಾರ ಸ್ವೀಕರಿಸಿದ್ದಾರೆ.
ಪಟ್ಟಣದಲ್ಲಿ ಅಧಿಕಾರ ಹಿಡಿದಿರುವ ಕಾಂಗ್ರೆಸ್ 9 ಸದಸ್ಯರ ಬಲ ಹೊಂದಿದ್ದು, ಬಿಜೆಪಿ 6 ಸದಸ್ಯರ ಬಲ , ಜೊತೆಗೆ ಶಾಸಕರು ಮತ್ತು ಸಂಸದರು ಬಿಜೆಪಿಯವರಾಗಿದ್ದು ಒಟ್ಟು 8 ಸಂಖ್ಯಾ ಬಲ ಹೊಂದಿತ್ತು. ಈಗಾಗಲೇ ಎರಡುವರೆ ವರ್ಷದ ಅವಧಿಯೊಳಗೆ ಶಬನಂ ಹಾಗೂ ಸುಶೀಲ ಶೆಟ್ಟಿ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದ್ದು,ಇದೀಗ ಗೀತಾ ರಮೇಶ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಪಕ್ಷ ಆಯ್ಕೆ ಮಾಡಿದೆ.

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮತ್ತು ಸಹಕಾರಿ ನಾಯಕ ಮಂಜುನಾಥ್ ಗೌಡ ಅವರ ಸಾರಥ್ಯದಲ್ಲಿ ಕಾಂಗ್ರೆಸ್ ಪಟ್ಟಣ ಪಂಚಾಯಿತಿಯನ್ನು ತಮ್ಮಲ್ಲೇ ಉಳಿಸಿಕೊಂಡಿದೆ. ಮಾಜಿ ಅಧ್ಯಕ್ಷ ರೆಹಮಾತುಲ್ಲ ಅಸಾದಿ, ಬಿ ಗಣಪತಿ, ರತ್ನಾಕರ್ ಶೆಟ್ಟಿ, ಮಂಜುಳಾ ನಾಗೇಂದ್ರ, ಪ್ರಮುಖರಾದ ರಾಘವೇಂದ್ರ ಶೆಟ್ಟಿ, ವೈ ನಾಗೇಂದ್ರ ಸೇರಿ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.