Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ “ಗಿರಗಿಟ್ಲೆ” ಪುಸ್ತಕ ಬಿಡುಗಡೆಗೆ ಸಜ್ಜು!

ತೀರ್ಥಹಳ್ಳಿಯಲ್ಲಿ “ಗಿರಗಿಟ್ಲೆ” ಪುಸ್ತಕ ಬಿಡುಗಡೆಗೆ ಸಜ್ಜು!
– ಪತ್ರಕರ್ತರು, ಸಾಹಿತಿಗಳೂ ಆದ ಶಿವಾನಂದ ಕರ್ಕಿ ಅವರ ಪುಸ್ತಕ
– ಜನಪದ, ಮಲೆನಾಡಿನ ಕಥೆಗಳ ಪುಸ್ತಕ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ “ಗಿರಗಿಟ್ಲೆ” ಪುಸ್ತಕ ಬಿಡುಗಡೆಗೆ ಸಿದ್ಧತೆ ನಡೆದಿದೆ. ತೀರ್ಥಹಳ್ಳಿಯ ಧ್ವನಿ ಪ್ರಕಾಶನದಿಂದ ಪತ್ರಕರ್ತರು, ಸಾಹಿತಿಗಳೂ ಆದ ಶಿವಾನಂದ ಕರ್ಕಿ ಅವರ ಪುಸ್ತಕ ಮೇ 24ರಂದು ಬಿಡುಗಡೆಗೊಳ್ಳಲು ಸಿದ್ಧತೆ ನಡೆದಿದೆ.
-ಜನಪದ, ಮಲೆನಾಡಿನ ಕಥೆಗಳ ಪುಸ್ತಕ ಶಾಂತವೇರಿ ಗೋಪಾಲಗೌಡ ರಂಗಮಂದಿರ, ತೀರ್ಥಹಳ್ಳಿಯಲ್ಲಿ ಮೇ. 24ರ ಶನಿವಾರ ಸಂಜೆ 4.00ಕ್ಕೆ ಸರಿಯಾಗಿ ಸಮಾರಂಭ ಅದ್ದೂರಿಯಾಗಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಕುವೆಂಪು ವಿಶ್ವವಿದ್ಯಾಲಯ ಶಂಕರಘಟ್ಟ ಇದರ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಇವರು ಪುಸ್ತಕ ಬಿಡುಗಡೆಯನ್ನು ಮಾಡಲಿದ್ದಾರೆ. ಕನ್ನಡ ಸಹಪ್ರಾಧ್ಯಾಪಕಿ, ಹೊಳೆಹೊನ್ನೂರು ಡಾ. ಭಾರತಿ ದೇವಿ ಪಿ. ಪುಸ್ತಕದ ಕುರಿತು ಮಾತನಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹ್ಯಾದ್ರಿ ಸಮೂಹ ಸಂಸ್ಥೆ ತೀರ್ಥಹಳ್ಳಿ ಅಧ್ಯಕ್ಷರಾದ ಬಸವಾನಿ ವಿಜಯದೇವ್ ಅವರು ವಹಿಸಲಿದ್ದಾರೆ. ಹಾಗೂ ಮುಖ್ಯ ಅತಿಥಿಗಳಾಗಿ ತೀರ್ಥಹಳ್ಳಿ ಮಾಜಿ ಗೃಹಸಚಿವರು, ಶಾಸಕರಾದ ಆರಗ ಜ್ಞಾನೇಂದ್ರ,
ತೀರ್ಥಹಳ್ಳಿಯ ಮಾಜಿ ಶಿಕ್ಷಣ ಸಚಿವರು ಕಿಮ್ಮನೆ ರತ್ನಾಕರ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ತೀರ್ಥಹಳ್ಳಿಯ ಅಧ್ಯಕ್ಷರು ಟಿ.ಕೆ. ರಮೇಶ್ ಶೆಟ್ಟಿ, ಸಾಹಿತಿ, ಚಿಂತಕರು ನೆಂಪೆ ದೇವರಾಜ್, ಕೃತಿಯ ಲೇಖಕರು ಶಿವಾನಂದ ಕರ್ಕಿ ಭಾಗವಹಿಸಲಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.