Categories
ತೀರ್ಥಹಳ್ಳಿ

ತೀರ್ಥಹಳ್ಳಿಯ ಉದ್ಯಮ ಕ್ಷೇತ್ರಕ್ಕೆ ಗುಡ್ ನ್ಯೂಸ್!

ತೀರ್ಥಹಳ್ಳಿಯ ಉದ್ಯಮ ಕ್ಷೇತ್ರಕ್ಕೆ ಗುಡ್ ನ್ಯೂಸ್!
– ಬಾಳಗಾರು ಶ್ರೀಧರ ಶೆಟ್ಟಿಗೆ ‘ಬ್ಯುಸಿನೆಸ್ ಎಕ್ಸಲೆನ್ಸ್ ಅವಾರ್ಡ್’
– ಉದ್ಯಮ ಕ್ಷೇತ್ರದಲ್ಲಿ ತೀರ್ಥಹಳ್ಳಿಗೆ ಮತ್ತೊಂದು ಹಿರಿಮೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಉದ್ಯಮ ಕ್ಷೇತ್ರಕ್ಕೆ ಗುಡ್ ನ್ಯೂಸ್ ಸಿಕ್ಕಿದೆ. ತೀರ್ಥಹಳ್ಳಿ ತಾಲೂಕು ಬಾಳಗಾರು ಶ್ರೀಧರ ಶೆಟ್ಟಿಗೆ ‘ಬ್ಯುಸಿನೆಸ್ ಎಕ್ಸಲೆನ್ಸ್ ಅವಾರ್ಡ್’ ಸಂದಿದೆ. ಉದ್ಯಮ ಕ್ಷೇತ್ರದಲ್ಲಿ ತೀರ್ಥಹಳ್ಳಿಗೆ ಮತ್ತೊಂದು ಹಿರಿಮೆ ಬಂದಿದೆ. ಔಷಧ ತಯಾರಿಕಾ ಉದ್ಯಮದಲ್ಲಿ ವಿಶಿಷ್ಟ ಸಾಧನೆ ಮೂಲಕ ಹೆಸರು ಮಾಡಿರುವ ನೀಮಸ್ ಫಾರ್ಮಾಸ್ಕೂಟಿಕಲ್ಸ್ ಪ್ರೈವೆಟ್ ಲಿಮಿಟೆಡ್ ಕಂಪನಿಯ ಮಾಲೀಕರೂ, ಸ್ಥಾಪಕರೂ ಆದ ತೀರ್ಥಹಳ್ಳಿ ತಾಲೂಕಿನ ಬಾಳಗಾರು ಗ್ರಾಮದ ಶ್ರೀಧರ ಶೆಟ್ಟಿಯವರ ಉದ್ಯಮ ಶೀಲನೆಯನ್ನು ಗುರುತಿಸಿ ಅವರಿಗೆ ‘ಎಂಎಸ್ ಎಂಇ ಅಂಡ್ ಸ್ಟಾರ್ಟ್ ಅಪ್ ಕಾನ್‌ಪ್ಲೇವ್-2024 ಮತ್ತು ಬ್ಯುಸಿನೆಸ್ ಎಕ್ಸಲೆನ್ಸ್ ಅವಾರ್ಡ್’ ನೀಡಿ ಗೌರವಿಸಲಾಗಿದೆ.

ಸೌತ್ ಇಂಡಿಯಾ ರೀಜನಲ್ ಕೌನ್ಸಿಲ್ ಆಫ್ ದ ಇನ್ಸಿಟ್ಯೂಟ್ ಆಫ್ ಚಾರ್ಟಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಸಂಸ್ಥೆಯು ಫೆಡರೇಷನ್ ಆಫ್ ಕರ್ನಾಟಕ ಛೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀ ಇವರ ಸಹಯೋಗದಲ್ಲಿ ಈ ಪ್ರತಿಷ್ಟಿತ ಅವಾರ್ಡ್ ಅನ್ನು ಶ್ರೀಧರ ಶೆಟ್ಟಿ ಅವರಿಗೆ ಪ್ರದಾನ ಮಾಡಲಾಗಿದೆ. ತಮ್ಮ ಅನನ್ಯ ಉದ್ಯಮ ಶೀಲತೆಯಿಂದ ರಾಷ್ಟ್ರೀಯ ಮಟ್ಟದ ಗೌರವಕ್ಕೆ ಪಾತ್ರರಾಗಿರುವ ಶ್ರೀಧರ ಶೆಟ್ಟಿ ತಮ್ಮ ಪರಿಶ್ರಮ, ಸಾಧನೆಯಿಂದ ತೀರ್ಥಹಳ್ಳಿಗೆ ಹೆಮ್ಮೆತಂದಿದ್ದು, ಅವರಿಗೆ ಆತ್ಮೀಯರು, ಹಿತೈಷಿಗಳು ಅಭಿನಂದಿಸಿ ಶುಭ ಕೋರಿದ್ದಾರೆ.

ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮ ಕೂಡ ಅಭಿನಂದನೆ ಸಲ್ಲಿಸಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.