ಮರಳು ಅಕ್ರಮದ ಮೇಲೆ ಆಡಳಿತದ ಕಣ್ಣು..!
– ಗ್ರಾಪಂ ಮಟ್ಟದಲ್ಲಿ ಅಕ್ರಮ ತಡೆಗೆ ಮಾಸ್ಟರ್ ಪ್ಲಾನ್
– ಮರಳು ಹೊಡೆಯುತ್ತಿದ್ದ ಮಾರ್ಗ ಬಂದ್
NAMMUR EXPRESS NEWS
ತೀರ್ಥಹಳ್ಳಿ: ಅಕ್ರಮ ಮರಳು ಗಣಿಗಾರಿಕೆ ಹಾಗೂ ಹಳ್ಳ ನದಿಗಳಲ್ಲಿ ಮರಳು ತೆಗೆಯುವ ಮರಳುಗಳ್ಳರ ಪ್ಲಾನ್ ಗೆ ಇದೀಗ ಆಡಳಿತ ಹೊಸ ಪ್ಲಾನ್ ಮಾಡಿದೆ. ನದಿ ಮತ್ತು ಹಳ್ಳಗಳಿಂದ ಬರುವ ರಸ್ತೆ ಮಾರ್ಗಗಳನ್ನೇ ಹೋಂಡಾ ತೆಗೆದು ರಸ್ತೆ ಕಡಿತ ಮಾಡಲಾಗಿದೆ. ಇದೀಗ ವಾಹನಗಳು ಹಳ್ಳ ಹಾಗೂ ನದಿಗಳಿಂದ ಮೇಲೆ ಬರದಂತೆ ಪ್ಲಾನ್ ಮಾಡಲಾಗಿದೆ. ಈಗಾಗಲೇ ಆರಗ, ನೆರಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ನದಿ,ಹಳ್ಳಗಳಿಂದ ಮರಳು ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿತ್ತು. ಈ ಬಗ್ಗೆ ಅನೇಕ ಬಾರಿ ದೂರುಗಳು ಬಂದಿದ್ದವು, ಈ ಬಗ್ಗೆ ಕ್ರಮವನ್ನ ಕೈಗೊಂಡ ತಾಲೂಕು ಆಡಳಿತ ಹಾಗೂ ಗ್ರಾಮ ಪಂಚಾಯಿತ್ ಆಡಳಿತ ಪಿಡಿಒ ಹಾಗೂ ತಾಲೂಕು ಆಡಳಿತ ಅಧಿಕಾರಿಗಳು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರ ಸಹಭಾಗಿತ್ವದಲ್ಲಿ ರಸ್ತೆಗಳನ್ನ ಅಗೆಯಲಾಗಿದೆ. ಈ ಮೂಲಕ ಮರಳು ಅಕ್ರಮಕ್ಕೆ ಬ್ರೇಕ್ ಹಾಕಲಾಗಿದೆ. ಇದು ಎಷ್ಟು ದಿನ ಮುಂದುವರಿಯುತ್ತದೆ ಎಂದು ಕಾದು ನೋಡಬೇಕಾಗಿದೆ.