ಅಡಿಕೆ ಕೊಯ್ಲಿಗೆ ಮಳೆರಾಯನ ಅಡ್ಡಿ..!
– ಮಲೆನಾಡಿನ ರೈತರು ಕಂಗಾಲು: ಒಂದು ಕಡೆ ರೋಗ, ಇನ್ನೊಂದು ಕಡೆ ಮಳೆ
NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡಿನಲ್ಲಿ ಮಳೆಗಾಲ ಮುಗಿದಿದ್ದು ಇದೀಗ ಎಲ್ಲೆಡೆ ಅಡಿಕೆ ಕೊಯ್ಲು ಪ್ರಾರಂಭವಾಗಿದೆ. ಅಡಿಕೆ ಕೊಯ್ಲಿನ ಈ ಸಂದರ್ಭದಲ್ಲಿ ಮಳೆ ಆಗಮಿಸುತ್ತಿರುವುದರಿಂದ ಮಲೆನಾಡಿನ ರೈತರು ಕಂಗಾಲಾಗಿದ್ದಾರೆ.
ಬರದ ನಡುವೆ ಭತ್ತ ಒಂದೆಡೆ ಒಣಗಿದ್ದರೆ ಇದೀಗ ಇನ್ನೊಂದೆಡೆ ಅಡಿಕೆ ಕೊಯ್ಲಿಗೆ ಮಳೆ ಅಡ್ಡಿಯಾಗಿದ್ದು, ಅಡಿಕೆಯನ್ನು ಒಣಗಿಸಲಾಗದೆ ರೈತರು ಪರದಾಡುವಂತಗಿದೆ. ಅದರಲ್ಲೂ ಕಳೆದ ಎರಡು ದಿನಗಳಿಂದ ಸಂಜೆಯ ನಂತರ ಮಳೆ ಆಗಮಿಸುತ್ತಿದ್ದು ಅಡಿಕೆ ಬೆಳೆಗೆ ಬಾರಿ ನಷ್ಟವಾಗುವ ಆತಂಕ ಎದುರಾಗಿದೆ. ಗುರುವಾರ ಸುರಿದ ಮಳೆಗೆ ಹಲವೆಡೆ ಅಡಿಕೆ ಮರಗಳು ಬಿದ್ದಿದೆ. ಮಳೆರಾಯನ ಆಗಮನಕ್ಕೆ ಬೆಳೆಗಾರರು ಕಂಗಾಲಾಗಿದ್ದು, ಮಲೆನಾಡು ರೈತರಿಗೆ ಮತ್ತೊಂದು ಚಿಂತೆ ಎದುರಾಗಿದೆ. ಮುಂದೆ ಹೇಗೆ ಎಂಬ ಚಿಂತೆಯೂ ಕಾಡತೊಡಗಿದೆ.
