ಹೆದ್ದೂರು – ಮಹಿಷಿ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ
– ಸಂಸದ ರಾಘವೇಂದ್ರ, ಜ್ಞಾನೇಂದ್ರ, ಮಂಜುನಾಥ ಗೌಡ ಹಾಜರ್
– ಹೆದ್ದೂರು ನವೀನ್ ಸಾರಥ್ಯದಲ್ಲಿ ಕಾರ್ಯಕ್ರಮ ಸೂಪರ್
NAMMUR EXPRESS NEWS
ತೀರ್ಥಹಳ್ಳಿ: ಬೆಜ್ಜವಳ್ಳಿ ಮತ್ತು ಹೆದ್ದೂರು ಸಂಪರ್ಕದ ರಸ್ತೆ 10 ಕೋಟಿ ರೂಪಾಯಿ ವೆಚ್ಚದಲ್ಲಿ ಹೆದ್ದೂರು – ಮಹಿಷಿ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ಪೂಜೆ ನೆರವೇರಿಸಲಾಯಿತು. ಹೆದ್ದೂರು ಪ್ರಾಥಮಿಕ ಕೃಷಿ,ಸಹಕಾರ ಸಂಘದ ಆವರಣದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಸದ ರಾಘವೇಂದ್ರ ಅವರು
ಅತ್ಯಂತ ಹೆಚ್ಚು ಅನುದಾನ ಹೆದ್ದೂರಿಗೆ ಕೊಟ್ಟಿದ್ದು, ಒಂದು ಕಾಲದಲ್ಲಿ ಈ ಊರನ್ನು ದಾಟಿ ಮುಂದೆ ಹೋಗಲು ದಾರಿಯೇ ಇರಲಿಲ್ಲ, ಆದರೆ ಇದೀಗ ಇದೇ ದಾರಿಯಲ್ಲಿ ಅನೇಕರು ಸಂಚರಿಸುತ್ತಾರೆ ಇದು ಎಲ್ಲರ ಹೋರಾಟದ ಪ್ರತಿಫಲ. ಕಾಮಗಾರಿ ನಡೆದ ನಂತರ ರಸ್ತೆ ಸಂಪರ್ಕಕ್ಕೆ ಬಂದರೂ ವಾಹನಗಳನ್ನು ಎಳೆದು ತರಬೇಕಾದ ಪರಿಸ್ಥಿತಿ ಎದುರಾಗುತ್ತಿತ್ತು.ಈ ಊರು, ಸೊಸೈಟಿಗೆ ಸುತ್ತ ಮುತ್ತಲಿನ ಅನೇಕ ಜನ ವ್ಯವಹಾರಕ್ಕೆ ಬರುತ್ತಿದ್ದು, ಇದೀಗ ಅಧಿಕಾರಿಗಳ ಪ್ರಯತ್ನದಿಂದ ಮತ್ತೊಂದು ಸೇತುವೆ ನಿರ್ಮಾಣವಾಗಿದೆ. ಇದು ಬಹಳಷ್ಟು ಅನುಕೂಲವಾಗಿದೆ. ಇಲ್ಲಿಂದ ಮುಂದುವರೆದ ಭಾಗ ಕಾರ್ಯರೂಪಕ್ಕೆ ಬಂದಿರಲಿಲ್ಲ ಈಗ ಶಕ್ತಿಯನ್ನು ಬಳಸಿಕೊಂಡು ಉಳಿದಿರುವ ಕಾಮಗಾರಿಯ ಸಮಸ್ಯೆಯನ್ನು ಬಗೆಹರಿಸಿಕೊಡಬೇಕಾಗಿ ತಾಲೂಕು ಬಿಜೆಪಿ ಮಂಡಲದ ಅಧ್ಯಕ್ಷರು ಹೆದ್ದೂರು ನವೀನ್ ಪ್ರಾಸ್ತಾವಿಕ ನುಡಿಯ ಮೂಲಕ ವಿನಂತಿಸಿಕೊಂಡು ಮಾತನಾಡಿದರು.
* ಬಹು ಹಿಂದಿನ ದಿನಗಳ ಕನಸು ನನಸಾಗುತ್ತಿರುವ ಕಾರ್ಯಕ್ರಮ- ಮಂಜುನಾಥ್ ಗೌಡ
ಸಹಕಾರ ನಾಯಕರು, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಮಂಜುನಾಥ್ ಗೌಡ ಮಾತನಾಡಿ, ಇದೊಂದು ಒಳ್ಳೆಯ ಸಮಾರಂಭ, ಜೊತೆಗೆ ಬಹು ದಿನಗಳ ಹಿಂದಿನ ಕನಸು ನನಸಾಗಿಸುವ ಕಾರ್ಯಕ್ರಮ ಎಂದರೆ ತಪ್ಪಾಗದು. ದೇವಸ್ಥಾನಕ್ಕೆ ಬಂದಾಗ ಯಡಿಯೂರಪ್ಪನವರು ಈ ರಸ್ತೆ ಕಾಮಗಾರಿಯನ್ನು ಸರಿಪಡಿಸಲು ಒಪ್ಪಿಕೊಂಡಿದ್ದರು, ರೇವಣ್ಣನವರು ಹೊಸಹಳ್ಳಿ ದೇವಸ್ಥಾನಕ್ಕೆ ಬಂದಾಗ ರಸ್ತೆ ಕಾಮಗಾರಿಯ ಬಗ್ಗೆ ಮಾತನಾಡಿದರು. ನಂತರ ಒಂದುವರೆ ತಿಂಗಳಲ್ಲಿ ಆ ರಸ್ತೆ ಕಾಮಗಾರಿಯನ್ನು ಸಂಪೂರ್ಣಗೊಳಿಸಿದರು. ಅವರು ತಮ್ಮ ಅಧಿಕಾರದ ಸಂದರ್ಭದಲ್ಲಿ ಪ್ರಾಮಾಣಿಕತೆಯಿಂದ ಅಧಿಕಾರವನ್ನು ನಿರ್ವಹಿಸಿರುತ್ತಾರೆ. ತೀರ್ಥಹಳ್ಳಿಯ ಈ ರಸ್ತೆಗಳನ್ನು ಬೇರೆ ಕಡೆ ಹೋಲಿಸಿದರೆ ಈ ರೀತಿಯ ಗುಣಮಟ್ಟದ ರಸ್ತೆ ಕಾಣಲು ಸಾಧ್ಯವಿಲ್ಲ. ಇತರೆ ಹೋಲಿಸಿದರೆ ಹೆದ್ದೂರು ತಾಲೂಕು ಅಭಿವೃದ್ಧಿಯಲ್ಲಿ ಹಿಂದುಳಿದ ಗ್ರಾಮವಾಗಿತ್ತು ಇದೀಗ ಈ ಗ್ರಾಮವು ಅಭಿವೃದ್ಧಿಯತ್ತ ಸಾಗುತ್ತಿದೆ. ಇದಕ್ಕೆ ಅಧಿಕಾರಿಗಳ ಸಹಕಾರ ಕಾರಣ ಎಂದರು.
* ಕ್ಷೇತ್ರ ಅಭಿವೃದ್ಧಿಗೆ ಜೀವನ ಸಮರ್ಪಣೆ ಮಾಡಿಕೊಂಡ ಧೀಮಂತ ನಾಯಕರು – ರಾಘವೇಂದ್ರ
ತೀರ್ಥಹಳ್ಳಿ ಕ್ಷೇತ್ರಕ್ಕೆ ಅಭಿವೃದ್ಧಿ ವಿಚಾರ ಕೊರತೆಯಾಗದ ರೀತಿಯಲ್ಲಿ ಆರಗ ಜ್ಞಾನೇಂದ್ರ ಅವರು ನೋಡಿಕೊಂಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೋಸ್ಕರ ತಮ್ಮನ್ನು ತಾವು ತೊಡಗಿಸಿಕೊಂಡಂತಹ ವ್ಯಕ್ತಿ ಎಂದರೆ ತಪ್ಪಾಗದು. ಸಂಪೂರ್ಣ ಕ್ಷೇತ್ರದ ಅಭಿವೃದ್ಧಿಗೆ ಸಮರ್ಪಣೆ ಮಾಡಿಕೊಂಡಂತಹ ಧೀಮಂತ ನಾಯಕರಲ್ಲಿ ಆರಗ ಜ್ಞಾನೇಂದ್ರ ಒಬ್ಬರು ಹಾಗೆಯೇ ಮಂಜುನಾಥ ಗೌಡರು. ಅನುದಾನವನ್ನು ತಂದು ಇಬ್ಬರ ನೇತೃತ್ವದಲ್ಲಿ ತೀರ್ಥಹಳ್ಳಿ ಕ್ಷೇತ್ರ ಅಭಿವೃದ್ಧಿಯ ಪಥದತ್ತ ಹೋಗುವ ಕಾರ್ಯ ನಡೆಯಲಿ ಎಂದು ಲೋಕಸಭಾ ಸದಸ್ಯರು ಬಿ ವೈ ರಾಘವೇಂದ್ರ ಕೇಳಿಕೊಂಡರು.
* ಕಾಲಿ ಕೈಯನ್ನು ಅಕ್ಷಯ ಪಾತ್ರೆ ಮಾಡಿದವರು ಕ್ಷೇತ್ರದ ಜನರು!- ರಾಘವೇಂದ್ರ
ಈ ಕಾಲಿ ಕೈಯನ್ನು ಅಕ್ಷಯ ಪಾತ್ರೆ ಮಾಡಿದವರು ನಮ್ಮ ಬೆಜ್ಜವಳ್ಳಿ, ತೀರ್ಥಹಳ್ಳಿ, ಶಿವಮೊಗ್ಗ ಕ್ಷೇತ್ರದ ಜನರು. ಸುಮಾರು ಕ್ಷೇತ್ರಗಳಲ್ಲಿ ಹೆಚ್ಚಿನ ಅನುದಾನವನ್ನು ತರುವ ಪ್ರಯತ್ನವನ್ನು ಮಾಡುತ್ತಿದ್ದೇವೆ.ಇದೊಂದು ರಸ್ತೆ ದಾಟಲು ಅನುಕೂಲವಾಗುವಂತಹ ಪುಣ್ಯ ಕಾರ್ಯ. ವಿಶೇಷವಾಗಿ ಮಲೆನಾಡಿನಲ್ಲಿ ನೆಟ್ವರ್ಕ್ ಸಮಸ್ಯೆಯಿಂದ ಜನರು ಕಂಗಾಲಾಗುತ್ತಾರೆ. ಅದಕ್ಕಾಗಿ ಟವರ್ ಗಳ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಹಾಗೆಯೇ ಪ್ರತಿಯೊಂದು ಸಮಸ್ಯೆಗೂ ನ್ಯಾಯ ಒದಗಿಸುವ ಕೆಲಸವನ್ನು ಮಾಡುತ್ತೇವೆ. ಎಂದು ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯರಾದ ಬಿ ವೈ ರಾಘವೇಂದ್ರ ಹೇಳಿದರು.
* ನಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ನಮ್ಮ ಕರ್ತವ್ಯ, ಸಾರ್ವಜನಿಕರ ಸಹಕಾರ ಅಗತ್ಯ – ಆರಗ!
“ನನ್ನನ್ನು ಐದು ಬಾರಿ ವಿಧಾನಸಭೆಯಲ್ಲಿ ಕೂರಿಸಿದ್ದೀರಿ, ನಾವೆಲ್ಲರೂ ಇದ್ದಾಗ ಅಭಿವೃದ್ಧಿಯ ಕಾರ್ಯಗಳು ನಡೆಯಬೇಕು”.
ಹಾಗೆಯೇ ಅಭಿವೃದ್ಧಿ ಕಾರ್ಯಗಳು ನಡೆದಿದೆ. ನನ್ನ ಪಕ್ಷದವರನ್ನು ಹೊರೆತುಪಡಿಸಿ ಇತರ ಪಕ್ಷದವರು, ಮತ ನೀಡದಿದ್ದರೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ಹೇಳಿಕೊಳ್ಳುತ್ತಾರೆ.
ಮೃಗವಧೆಯಲ್ಲಿ ಪ್ರತಿನಿತ್ಯ ಸಾವಿರಾರು ಭಕ್ತಾಧಿಗಳು ರಸ್ತೆಯಲ್ಲಿ ಓಡಾಡುತ್ತಾರೆ ಹಾಗಾಗಿ ಆ ರಸ್ತೆಯ ಕಾರ್ಯವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಲಾಗಿದೆ. ಇದು ಸಾಮಾನ್ಯ ಜನರಿಗೆ ಬಹಳಷ್ಟು ಅನುಕೂಲಕರವಾಗಿದೆ. ರಸ್ತೆ ಇಲ್ಲದಿದ್ದರೆ ಸೇತುವೆಯ ಪ್ರಯೋಜನವಾಗುವುದಿಲ್ಲ ಆದ್ದರಿಂದ ಆ ಕಾರ್ಯವನ್ನು ಆದಷ್ಟು ಬೇಗ ನಿರ್ವಹಿಸಲಾಗುತ್ತದೆ ಇದಕ್ಕೆಲ್ಲ ಸಾರ್ವಜನಿಕರ ಸಹಕಾರ ಅತಿ ಅಗತ್ಯ. ಸಾರ್ವಜನಿಕರು ಕೆಲಸಕ್ಕೆ ಯಾವುದೇ ರೀತಿಯ ಅಡ್ಡಿಯುಂಟು ಮಾಡದೆ ಸಹಕರಿಸುವುದೇ ಮುಖ್ಯ ವಿಚಾರ ಎಂದು ಶಾಸಕ ಆರಗ ಜ್ಞಾನೇಂದ್ರ ಅವರು ಮಾತನಾಡಿದರು. ಬೆಜ್ಜವಳ್ಳಿ ಮತ್ತು ಹೆದ್ದೂರು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರು, ಎಲ್ಲಾ ಸದಸ್ಯರು ಗ್ರಾಮಸ್ಥರು ಹಾಗೂ ಈ ಕಾರ್ಯಕ್ರಮವನ್ನು ಪಂಚಾಯತ್ ಅಧ್ಯಕ್ಷರಾದ ಲೋಕೇಶ್ ಅವರು ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಬೆಜ್ಜವಳ್ಳಿ ಪಂಚಾಯತ್ ಅಧ್ಯಕ್ಷರು ಉದಯ ಗಬಡಿ, ಉಪಾಧ್ಯಕ್ಷರು ಸುಬ್ರಹ್ಮಣ್ಯ, ಹೆದ್ದೂರು ಪಂಚಾಯಿತಿ ಉಪಾಧ್ಯಕ್ಷರು ಸುಚನಾ ಪ್ರವೀಣ್ , ಉಮಾನಾಯಕ್, ಸೊಸೈಟಿ, ಬಿಜೆಪಿ ಅಧ್ಯಕ್ಷರು ನವೀನ್, ಅವರು ಉಪಸ್ಥಿತರಿದ್ದರು.
