Categories
ತೀರ್ಥಹಳ್ಳಿ

ತೀರ್ಥಹಳ್ಳಿ ತಾಲೂಕಿನಲ್ಲಿ ಸಂಕ್ರಾಂತಿ ಸಂಭ್ರಮಕ್ಕೆ ಸಜ್ಜು!

ತೀರ್ಥಹಳ್ಳಿ ತಾಲೂಕಿನಲ್ಲಿ ಸಂಕ್ರಾಂತಿ ಸಂಭ್ರಮಕ್ಕೆ ಸಜ್ಜು!
– ಜ.14: ತೀರ್ಥಹಳ್ಳಿಯಲ್ಲಿ ಮಕರ ಸಂಕ್ರಾಂತಿ ರಥೋತ್ಸವ
– ಕುಂದಾದ್ರಿ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ
– ಬೆಜ್ಜವಳ್ಳಿ ಶ್ರೀ ಅಯ್ಯಪ್ಪಸ್ವಾಮಿ ಸನ್ನಿಧಾನದಲ್ಲಿ ವಿಶೇಷ ಕಾರ್ಯಕ್ರಮ
– ಆರಗ, ಹುಂಚ ಸೇರಿದಂತೆ ಎಲ್ಲೆಡೆ ಸಂಕ್ರಾಂತಿ ಸಂಭ್ರಮ++++++ ಜೋರು

NAMMUR EXPRESS NEWS
ತೀರ್ಥಹಳ್ಳಿ: ಸಂಕ್ರಾಂತಿ ಸಂಭ್ರಮ ಎಲ್ಲೆಡೆ ಸಜ್ಜು ಜೋರಾಗಿದೆ. ಈಗಾಗಲೇ ಸಂಕ್ರಾಂತಿಗೆ ಬೇಕಾದಂತಹ ಕಬ್ಬು ಎಳ್ಳು-ಬೆಲ್ಲ ಖರೀದಿ ಜೋರಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ತೀರ್ಥಹಳ್ಳಿಯ ರಾಮೇಶ್ವರ ದೇವಾಲಯದಲ್ಲಿ ಜನವರಿ 14ರ ಮಂಗಳವಾರ ಮಕರ ಸಂಕ್ರಾಂತಿ ರಥೋತ್ಸವವನ್ನು ನಡೆಸಲಾಗುತ್ತಿದ್ದು ಭಕ್ತಾದಿಗಳು ದಯಮಾಡಿಸಿ ದೇವರ ಪ್ರಸಾದ ವನ್ನು ಸ್ವೀಕರಿಸಿ ಶ್ರೀ ರಾಮೇಶ್ವರ ದೇವರ ಕೃಪೆಗೆ ಪಾತ್ರರಾಗುವಂತೆ ಹಾಗೂ ಮಕರ ಸಂಕ್ರಾಂತಿ ರಥೋತ್ಸವ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ವಿನಂತಿಸಿದ್ದಾರೆ. ರಥಾರೋಹಣದ ನಂತರ ಅನ್ನ ಸಂತರ್ಪಣೆ ವ್ಯವಸ್ಥೆ ಇರುತ್ತದೆ. ತೀರ್ಥಹಳ್ಳಿ,ಬೆಜ್ಜವಳ್ಳಿ, ಕುಂದಾದ್ರಿ, ಆರಗ, ಹುಂಚ ಸೇರಿದಂತೆ ಎಲ್ಲೆಡೆ ಸಂಕ್ರಾಂತಿ ಸಂಭ್ರಮಕ್ಕೆ ಸಜ್ಜು, ಎಲ್ಲೆಡೆ ವಿಶೇಷ ಕಾರ್ಯಕ್ರಮ ಭಕ್ತರಿಗೆ ಸ್ವಾಗತವನ್ನ ಕೋರಿದ್ದಾರೆ. ಬೆಜ್ಜವಳ್ಳಿ ಅಯ್ಯಪ್ಪ ದೇವಸ್ಥಾನ. ಹುಂಚ ಮಠ, ಕುಂದಾದ್ರಿ, ಬೆಜ್ಜವಳ್ಳಿ, ಆರಗ ಸೇರಿದಂತೆ ಬಹುತೇಕ ದೇವಸ್ಥಾನಗಳಲ್ಲಿ ಸಂಕ್ರಾಂತಿ ಸಂಭ್ರಮ ಮನೆ ಮಾಡಿದೆ. ಈಗಾಗಲೇ ಸಂಕ್ರಾಂತಿಗೆ ಸಿದ್ಧತೆ ಕೂಡ ಮಾಡಿಕೊಳ್ಳಲಾಗಿದೆ.

– ಜನವರಿ 14 ರಂದು ಕುಂದಾದ್ರಿ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ

ತೀರ್ಥಹಳ್ಳಿ: ಅತಿಶಯ ಶ್ರೀ ಕ್ಷೇತ್ರ ಹೊಂಬುಜ ಮಹಾಸಂಸ್ಥಾನದ ಶಾಖಾ ಕ್ಷೇತ್ರ ಆಚಾರ್ಯ ಶ್ರೀ ಕುಂದ ಕುಂದರ ತಪೋಭೂಮಿ ಶ್ರೀ ಕುಂದಾದ್ರಿ ಕ್ಷೇತ್ರದಲ್ಲಿ ಭಗವಾನ್ ಶ್ರೀ 1008 ಪಾರ್ಶ್ವನಾಥ ಸ್ವಾಮಿ ಮತ್ತು ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ಅಮ್ಮನವರ ವಾರ್ಷಿಕ ಜಾತ್ರಾ ಮಹೋತ್ಸವವು ಜನವರಿ 14ರ ಮಂಗಳವಾರ ಜರುಗಲಿದೆ. ಹೊಂಬುಜ ಜೈನಮಠದ ಪರಮ ಪೂಜ್ಯ ಜಗದ್ಗುರು ಸ್ವಸ್ತಿ ಶ್ರೀ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಮಹಾ ಸ್ವಾಮಿಗಳವರು ಸಾನಿಧ್ಯ ವಹಿಸುವರು. ಅಂದು ಬೆಳಿಗ್ಗೆ 8ರಿಂದ ಕಲಿಕುಂಡ ಯಂತ್ರಾರಾಧನೆ, 1 1 ಗಂಟೆಯಿಂದ ಶ್ರೀ ಪಾರ್ಶ್ವನಾಥ ಸ್ವಾಮಿಗೆ ವಿಶೇಷ ಅಭಿಷೇಕ ಪೂಜೆ, ಶ್ರೀ ಪದ್ಮಾವತಿ ದೇವಿ ಅಮ್ಮನವರ ಷೋಡಶೋಪಚಾರ ಪೂಜೆ ಮತ್ತು ಆಚಾರ್ಯ ಶ್ರೀ ಕುಂದ ಕುಂದಾಚಾರ್ಯರ ಪಾದುಕಾ ಮಂದಿರದಲ್ಲಿ ವಿಶೇಷ ಪೂಜೆ, ಮಧ್ಯಾಹ್ನ 12ಕ್ಕೆ ಧಾರ್ಮಿಕ ಸಭೆ ಇದೇ ದಿನ ಸಂಜೆ ದೀಪೋತ್ಸವ ನಡೆಯಲಿದೆ. ಈ ಜಾತ್ರಾ ಮಹೋತ್ಸವದಲ್ಲಿ ಭಕ್ತವೃಂದದವರು ಪಾಲ್ಗೊಂಡು ಪುಣ್ಯ ಪ್ರಾಪ್ತಿ ಮಾಡಿಕೊಳ್ಳುವಂತೆ ಶ್ರೀ ಕುಂದಾದ್ರಿ ದಿಗಂಬರ ಜೈನ ಮಂದಿರದ ವ್ಯವಸ್ಥಾಪಕರು ಹಾಗೂ ಶ್ರೀ ಹೊಂಬುಜ ಜೈನ ಮಠದ ಆಡಳಿತಾಧಿಕಾರಿಗಳು ವಿನಂತಿಸಿದ್ದಾರೆ.

ಸಂಕ್ರಾಂತಿಯ ವಿಶೇಷ ವಿಡಿಯೋಗಳು ಹಾಗೂ ಸುದ್ದಿಗಳಿಗಾಗಿ ನಮ್ಮೂರ್ ಎಕ್ಸಪ್ರೆಸ್ ಯೂಟ್ಯೂಬ್ ಚಾನೆಲ್ ವೀಕ್ಷಿಸಿ subscribe ಮಾಡಿ ಮಲೆನಾಡಿನ ಎಲ್ಲರಿಗೂ ಶೇರ್ ಮಾಡಿ..

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.