ಸಹಕಾರ ಕ್ಷೇತ್ರಕ್ಕೆ ಜ್ಞಾನೇಂದ್ರ ಪುತ್ರ ಅಭಿನಂದನ್ ಎಂಟ್ರಿ!
– ತೀರ್ಥಹಳ್ಳಿ ತೋಟಗಾರಿಕಾ ರೈತ ಉತ್ಪಾದಕ ಕಂಪನಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾಗಿ ಆಯ್ಕೆ
– ಕೃಷಿ, ಸಂಘಟನೆ ಜತೆಗೆ ಈಗ ಸಹಕಾರ ಕ್ಷೇತ್ರದಲ್ಲಿ ಸೇವೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಸಹಕಾರ ಕ್ಷೇತ್ರಕ್ಕೆ ಮಾಜಿ ಗೃಹ ಸಚಿವ ಹಾಗೂ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಪುತ್ರ ಅಭಿನಂದನ್ ಎಂಟ್ರಿ ಆಗಿದ್ದು ಇದೀಗ ಮಹತ್ವದ ಹುದ್ದೆ ಲಭಿಸಿದೆ.
ತೀರ್ಥಹಳ್ಳಿ ತೋಟಗಾರಿಕಾ ರೈತ ಉತ್ಪಾದಕ ಕಂಪನಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾಗಿ ಆಯ್ಕೆ ಆಗಿದ್ದು, 2024 – 25 ನೇ ಸಾಲಿನ ವಾರ್ಷಿಕ ಮಹಾಸಭೆ ಯಶಸ್ವಿಯಾಗಿ ನಡೆದಿದ್ದು ಈ ಸಭೆಯಲ್ಲಿ ನೂತನವಾಗಿ ವ್ಯವಸ್ಥಾಪಕ ನಿರ್ದೇಶಕರಾಗಿ ಅಭಿನಂದನ್ ಹೆಚ್. ಜೆ ಗುಡ್ಡೇಕೊಪ್ಪ ಆಯ್ಕೆ ಆಗಿದ್ದಾರೆ.
ಹೊಸ ಕಾರ್ಯಕಾರಿ ಮಂಡಳಿಯಲ್ಲಿ ಅಭಿನಂದನ್ ಹೆಚ್. ಜೆ ( ವ್ಯವಸ್ಥಾಪಕ ನಿರ್ದೇಶಕ)ರಾಗಿದ್ದು, ನಿರ್ದೇಶಕರಾಗಿ ಮಂಜುನಾಥ್ ಜಿ ಆರ್, ಗವಿಮಠ, ಸುಹಾಸ್ ಜೆ ಎಸ್ ಗುಡ್ಡೇಕೊಪ್ಪ, ಮೋಹನ್ ಮೂರ್ತಿ ಕೌರಿಕಾನ್, ಯಶೋಧ ಕೋಣಂದೂರು, ಅಶೋಕ್ ಗೌಡ್ರು ಕುಕ್ಕೆ, ರವಿ ಬಿ ಶೆಟ್ಟಿ ನೊಣಬೂರು,ರಾಘವೇಂದ್ರ ಭಟ್ ಕರಿಮನೆ, ಅನಿಲ್ ಹಾಲೇಸರ, ಅರುಣ್ ಕುಮಾರ್ ಮಲ್ಲೇಸರ,ಉಮೇಶ್ ಹೊಸಮನೆ, ರಾಕೇಶ್ ಶಿವಮೊಗ್ಗ, ಶ್ರೇಯಾ ಡಿ ಸಿಇಓ ಆಗಿ ಆಯ್ಕೆ ಆಗಿದ್ದಾರೆ. ಈಗಾಗಲೇ ಗುಡ್ಡೆಕೊಪ್ಪ ಸೊಸೈಟಿ ನಿರ್ದೇಶಕರಾಗಿರುವ ಅಭಿನಂದನ್ ಕೃಷಿ, ಸಂಘಟನೆ ಜತೆಗೆ ಸಹಕಾರ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. ಅವರಿಗೆ ಎಲ್ಲಾ ನಿರ್ದೇಶಕರು ಸಾಥ್ ನೀಡಿದ್ದಾರೆ.
