Categories
ತೀರ್ಥಹಳ್ಳಿ

ತೀರ್ಥಹಳ್ಳಿಯ ಹೆಚ್.ಎಸ್.ನಾಗೇಂದ್ರ ಹೆದ್ದೂರು ಅವರಿಗೆ ಮಹತ್ವದ ಹುದ್ದೆ

ತೀರ್ಥಹಳ್ಳಿಯ ಹೆಚ್.ಎಸ್.ನಾಗೇಂದ್ರ ಹೆದ್ದೂರು ಅವರಿಗೆ ಮಹತ್ವದ ಹುದ್ದೆ
– ಅಖಿಲ ಭಾರತ ಡಿ ಗ್ರೂಪ್ ನೌಕರರ ಒಕ್ಕೂಟದ ಆಲ್‌ ಇಂಡಿಯಾ ಉಪಾಧ್ಯಕ್ಷರಾಗಿ ಆಯ್ಕೆ
– ತೀರ್ಥಹಳ್ಳಿಯಲ್ಲಿ ಆ.24ಕ್ಕೆ ಹೆದ್ದೂರು ನಾಗೇಂದ್ರ ಅವರಿಗೆ ಸನ್ಮಾನಿಸುವ ಕಾರ್ಯಕ್ರಮ

NAMMUR EXPRESS NEWS
ಅಖಿಲ ಭಾರತ’ಡಿ’ಗ್ರೂಪ್ ನೌಕರರ ಕೇಂದ್ರ ಒಕ್ಕೂಟದ ಆಲ್ ಇಂಡಿಯಾ ಉಪಾಧ್ಯಕ್ಷರಾಗಿ ತೀರ್ಥಹಳ್ಳಿಯ ಹೆಚ್.ಎಸ್.ನಾಗೇಂದ್ರ ಹೆದ್ದೂರು ಇವರನ್ನು ಆಯ್ಕೆ ಮಾಡಲಾಗಿದೆ.
ಮೂರು ದಶಕಗಳಿಂದ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಕೆಲವು ಸಾಧನೆಗಳಲ್ಲಿ ಗುರುತಿಸಿ ಹಲವಾರು ಪ್ರಶಸ್ತಿಗಳು ಹಾಗೂ ಡಿ ಗ್ರೂಪ್ ನೌಕರರ ಹಲವಾರು ಸಮಸ್ಯೆಗಳಿಗೆ ಸ್ಪಂದಿಸಿ ಸೇವೆ ಸಲ್ಲಿಸಿದ್ದನ್ನು ಪರಿಗಣಿಸಿ ಎಲ್ಲಾ ರಾಜ್ಯಗಳು ಹಾಗೂ ರಾಜ್ಯದ ಪದಾಧಿಕಾರಿಗಳು ಹಾಗೂ ಎಲ್ಲಾ ಜಿಲ್ಲೆಯ ಪದಾಧಿಕಾರಿಗಳು, ಎಲ್ಲಾ ತಾಲ್ಲೂಕು ಪದಾಧಿಕಾರಿಗಳ ಒಮ್ಮತದ ಆಯ್ಕೆ ಬಳಿಕ ಈ ಹುದ್ದೆಗೆ ಹೆದ್ದೂರು ನಾಗೇಂದ್ರ ಹೆಚ್. ಎಸ್. ಇವರನ್ನು ನೇಮಕ ಮಾಡಲಾಗಿದೆ.
ಈ ಸಂದರ್ಭದಲ್ಲಿ ಅಖಿಲ ಭಾರತ ಅಧ್ಯಕ್ಷರಾದ ತಮಿಳುನಾಡಿನ ಕೆ.ಗಣೇಶನ್ ಆಲ್ ಇಂಡಿಯಾ ಅಧ್ಯಕ್ಷರು, ಮಹೇಂದ್ರ ಶರ್ಮ ಆಲ್ ಇಂಡಿಯಾ ಟ್ರಸರರ್, ಅಖಿಲ ಭಾರತ ಉಪಾಧ್ಯಕ್ಷರುಗಳಾದ ಬಾವು ಶ್ಯಾಯದ್ ಪಥನ್ ಮಹಾರಾಷ್ಟ್ರ, ಬಿ.ಎಂ.ನಟರಾಜ್ ಬೆಂಗಳೂರು, ಹೆಚ್.ಎಸ್. ನಾಗೇಂದ್ರ ಹೆದ್ದೂರು ಶಿವಮೊಗ್ಗ, ರಾಂಚಂದ್ರ ಗುಪ್ತ ಉತ್ತರ ಪ್ರದೇಶ, ರಂಜಿತ್ ಸಿಂಗ್ ರನ್ವಾ ಪಂಜಾಬ್, ಎಸ್. ಮಾತುರಾಂ ತಮಿಳುನಾಡು, ವೆಂಕಟೇಶ್ವರ ಆಲುರಾಜು ಆಂದ್ರಪ್ರದೇಶ, ಚಂದ್ರಶೇಖರ್ ಗುಜಾರ್ ರಾಜಸ್ತಾನ್, ದಿನೇಶ್ ಕುಮಾರ್ ರಾಯ್ ಚಂಡಿಗಡ್, ಹರಿಸಿಂಗ್ ರಾಥೋಡ್ ದೆಹಲಿ, ದೀಪೇಶ್ ಕುಮಾರ್ ಸಾಲಂಕಿ ಗುಜರಾತ್, ರಾಂಬು ಪಂಚಾಲ್ ಮಹಾರಾಷ್ಟ್ರ, ರೋಹಿತ್ ಬಾರ್ಕಿ ಒಡಿಸ್ಸಾ, ಅಜಯ್‌ ಕುಮಾರ್ ದುಬೆ ಮಧ್ಯಪ್ರದೇಶ್, ಆಲ್‌ಇಂಡಿಯಾ ಜನರಲ್ ಸೆಕ್ರೆಟರಿಗಳಾದ ಗೋವಿಂದ ಸಿಂಗ್ ನೇಗಿ ಉತ್ತರ ಖಾಂಡ್, ಉಮೇಶ್ ಬಹದ್ದೂರು ಸಿಂಗ್ ಉತ್ತರ ಪ್ರದೇಶ, ಕೃಷ್ಣಪರ್ಶನ್ ಚಂಡಿಘಡ್, ಲೇಖರಾಜ್ ವರ್ಮರಾಜಸ್ತಾನ್, ಅನಿಲ್ ಬಾವರಿಯ ಗುಜರಾತ್, ಶ್ಯಾಂ ಸುಂದರ್‌ದಾಸ್ ಒಡಿಸ್ಸಾ, 1 ಸುರೇಶ್ ಸಿಂಗ್ ಯಾದವ್, ಉತ್ತರ ಪ್ರದೇಶ, ನರೇಶ್‌ ಕುಮಾರ್ ಹೆಚ್.ಪಿ., ಪ್ರವೀಣ್ ಕುಮಾರ್ ಬಿಹಾರ್, ಸುಧೀರ್ ಭಾರ್ಗವ್ ಮಧ್ಯಪ್ರದೇಶ, ಚಿತ್ರನ್‌ದಾಸ್ ಒಡಿಸ್ಸಾ, ಶ್ರೀಮತಿ ಮಾಯಾದೇವಿ ಯಾದವ್ ಉತ್ತರ ಪ್ರದೇಶ, ಕಾನು ಭಾಯಿ ಪಿ. ಸೋಲಂಕಿ ಗುಜರಾತ್, ರಾಮೇಂದ್ರ ಕುಮಾರ್ ಶ್ರೀವಾತ್ಸವ್ ಉತ್ತರಪ್ರದೇಶ, ತಪನ್ ಚಕ್ರವರ್ತಿ ಪಶ್ಚಿಮ ಬಂಗಾಳ, ಜ್ವಾರಾಸಿಂಗ್ ಜಾರ್ಖಂಡ್. ರಾಮದಾಸ್ ಸಿರಾಲಿಯಾ ಮಹಾರಾಷ್ಟ್ರ, ಮೋಹನ್ ಲಾಲ್ ಮೀಯಾಂರಾಜಸ್ತಾನ್, ಶ್ರೀಮತಿ ಕಲಾವತಿ ತಿವಾರಿ ಉತ್ತರ ಪ್ರದೇಶ, ಶ್ರೀಮತಿ ನೀಲು ಓಗ್ರೇ, ಶ್ರೀಮತಿ ಸೀತಾ ಪಾಂಡೇಕರ್ ಮಹಾರಾಷ್ಟ್ರ, ಶ್ರೀಮತಿ ಎ. ಅಭಿತಮಲ್, ಶ್ರೀಮತಿ ದೇವಗಂಗಾ ಮಿಶ್ರಾ, ರಾಂಗೋಪಾಲ್, ಪಿ. ಮುರಿಯಪ್ಪ, ಸುರೇಶ್ ಸೊನಾಲಿ ಆಯಕರ್ ಮಹಾರಾಷ್ಟ್ರ, ಕೆ.ಅಪ್ಪಾರಾವ್ ಒಡಿಸ್ಸಾ ಮತ್ತು ಎಲ್ಲಾ ರಾಜ್ಯದ ಅಧ್ಯಕ್ಷರು ಗಳು ಹಾಗೂ ಪದಾಧಿಕಾರಿಗಳು ಮತ್ತು ಎಲ್ಲಾ ಜಿಲ್ಲೆಯ ಪದಾಧಿಕಾರಿಗಳು, ಹಾಗೂ ತಾಲ್ಲೂಕು ಪದಾಧಿಕಾರಿಗಳ ಸಮ್ಮುಖದಲ್ಲಿ ಆಯ್ಕೆ ಮಾಡಲಾಗಿದೆ.

3 ದಶಕಗಳ ಸೇವೆಗೆ ಒಲಿದ ಹುದ್ದೆ

ಹೆಚ್.ಎಸ್. ನಾಗೇಂದ್ರ ಹೆದ್ದೂರು ಮೂರು ದಶಕಗಳಿಂದ ಕಾರ್ಯ ನಿರ್ವಹಿಸುತ್ತಿರುವ ರಾಜ್ಯ ಉಪಾಧ್ಯಕ್ಷರು ಶಿವಮೊಗ್ಗ ಜಿಲ್ಲಾ ಅಧ್ಯಕ್ಷರು ಇವರನ್ನು ಆಗಸ್ಟ್ 8ರ ಶುಕ್ರವಾರದಂದು ಬೆಂಗಳೂರು ನಗರದ ರಾಯಲ್ ಕಂಫರ್ಟ್ ಸಭಾಭವನದಲ್ಲಿ ಅಖಿಲ ಭಾರತ ‘ಡಿ’ಗ್ರೂಪ್ ನೌಕರರ ಒಕ್ಕೂಟದ ಪೂರ್ವಭಾವಿ ಸಭೆಯಲ್ಲಿ ಕೇಂದ್ರ ಸಂಘದ ಸಮ್ಮುಖದಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಕರ್ನಾಟಕ ರಾಜ್ಯದ ಎಲ್ಲಾ ಸರ್ಕಾರಿ ನೌಕರರು ಹಾರ್ದಿಕವಾಗಿ ಶುಭಕೋರಿದ್ದಾರೆ.

ತೀರ್ಥಹಳ್ಳಿಯಲ್ಲಿ ಆ.24ಕ್ಕೆ ಹೆದ್ದೂರು ನಾಗೇಂದ್ರ ಅವರಿಗೆ ಸನ್ಮಾನಿಸುವ ಕಾರ್ಯಕ್ರಮ

ಅಖಿಲ ಭಾರತ ಸರ್ಕಾರಿ ‘ಡಿ’ ಗ್ರೂಪ್ ನೌಕರರ ಒಕ್ಕೂಟದ ಸಭೆ 24-08-2025ರಂದು ಟಿ.ಎ.ಪಿ.ಸಿ.ಎಮ್.ಎಸ್ ಸಭಾಂಗಣ ತೀರ್ಥಹಳ್ಳಿಯಲ್ಲಿ ಸಮಯ: 10.30ಗಂಟೆ ಬೆಳಿಗ್ಗೆ ಸರಿಯಾಗಿ ಅಖಿಲ ಭಾರತ ಸರ್ಕಾರಿ ‘ಡಿ’ ಗ್ರೂಪ್ ನೌಕರರ ಒಕ್ಕೂಟದ ಆಲ್ ಇಂಡಿಯಾ ಉಪಾಧ್ಯಕ್ಷರಾಗಿ ಆಯ್ಕೆಯಾದ ತೀರ್ಥಹಳ್ಳಿಯ ಹೆದ್ದೂರು ನಾಗೇಂದ್ರ ಇವರನ್ನು (ಆಲ್ ಇಂಡಿಯಾ ಒಕ್ಕೂಟದ ಗೌರವಾನ್ವಿತ ಅಧ್ಯಕ್ಷರು ಮತ್ತು ಪದಾಧಿಕಾರಿಗಳು) ಸನ್ಮಾನಿಸುವ ಕಾರ್ಯಕ್ರಮ ಮತ್ತು ದಿನಾಂಕ : 28-09-2025ರ ಬೆಂಗಳೂರಿನಲ್ಲಿ ಆಲ್ ಇಂಡಿಯಾ ಸಮಾವೇಶ ನಡೆಸುವ ಸಲುವಾಗಿ ಆಲ್ ಇಂಡಿಯ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು ರಾಜ್ಯದ ಎಲ್ಲಾ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮತ್ತು ಎಲ್ಲಾ ‘ಡಿ’ ಗ್ರೂಪ್ ಜಿಲ್ಲಾ ಹಾಗೂ ತಾಲ್ಲೂಕು ಅಧ್ಯಕ್ಷರುಗಳು ಮತ್ತು ಎಲ್ಲಾ ನೌಕರ ಹಾಗೂ ಹೊರಗುತ್ತಿಗೆ ಹಾಗೂ ಇತರೆ ಹುದ್ದೆಯಲ್ಲಿ ದಿನಗೂಲಿ ನೌಕರರ ಸಮಸ್ಯೆಯ ಬಗ್ಗೆ ಚರ್ಚಿಸುವ ಸಲುವಾಗಿ ಮತ್ತು ಅವರ ಸಮಸ್ಯೆಗಳ ಬಗೆಹರಿಸುವ ನಮ್ಮ ರಾಜ್ಯದ ಹಾಗೂ ಬೇರೆ ರಾಜ್ಯದ ಮುಷ್ಕರ ಹಮ್ಮಿಕೊಂಡಿರುವ ಪ್ರಯುಕ್ತ ಮತ್ತು ಗೌರವಾನ್ವಿತ ಹುದ್ದೆಯಲ್ಲಿರುವವರನ್ನು ಸನ್ಮಾನಿಸುವುದು ಮತ್ತು ನೌಕಕರ ಬೇಡಿಕೆಯನ್ನು ಈಡೇರಿಸುವ ಸಲುವಾಗಿ ಸಭೆಯನ್ನು ಆಯೋಜಿಸಲಾಗಿದೆ. ತಾವುಗಳು ದಯಮಾಡಿ ಈ ಸಭೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.