Categories
ತೀರ್ಥಹಳ್ಳಿ

ಆರಿದ್ರಾ ಮಳೆ ಆರ್ಭಟ: ಶಾಲೆಗಳಿಗೆ ರಜೆ?!

ಆರಿದ್ರಾ ಮಳೆ ಆರ್ಭಟ: ಶಾಲೆಗಳಿಗೆ ರಜೆ?!
– ಮಲೆನಾಡಲ್ಲಿ ಭಾರೀ ಮಳೆ: ಹಲವೆಡೆ ಅನಾಹುತ
– ತುಂಗೆ, ಭದ್ರೆ, ಶರಾವತಿ ಸೇರಿ ಎಲ್ಲಾ ನದಿಗಳು ಫುಲ್

NAMMUR EXPRESS NEWS
ಮಲೆನಾಡಲ್ಲಿ ಆರಿದ್ರಾ ಮಳೆಗೆ ಜನಜೀವನ ಸಂಪೂರ್ಣ ಸ್ತಬ್ದವಾಗಿದೆ. ಕಳೆದ 12 ಗಂಟೆಗಳಿಂದ ಎಡಬಿಡದೆ ಸುರಿಯುತ್ತಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ. ಎಲ್ಲೆಡೆ ಮಳೆ ಅನಾಹುತ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಲೆನಾಡಲ್ಲಿ ಶಾಲೆ ಅಂಗನವಾಡಿಗಳಿಗೆ ರಜೆ ಘೋಷಣೆ ಮಾಡುವ ಸಾಧ್ಯತೆ ಇದೆ.
ಮಳೆ ನಾಳೆಯೂ ಸಹ ಮುಂದುವರೆಯುವ ಸಾಧ್ಯತೆ ಹೆಚ್ಚಿದ್ದು ಈ ಬಗ್ಗೆಆಯಾ ಜಿಲ್ಲಾ ಅಧಿಕಾರಿಗಳು, ಕ್ಷೇತ್ರ ಶಿಕ್ಷಣ ಅಧಿಕಾರಿಗಳು ಹಾಗೂ ತಹಸೀಲ್ದಾರ್ ಗಮನಿಸಬೇಕಿದೆ.
ತೀರ್ಥಹಳ್ಳಿ, ಶೃಂಗೇರಿ, ಚಿಕ್ಕಮಗಳೂರು ಸೇರಿ ಅನೇಕ ಕಡೆ ಮರ ಬಿದ್ದಿದ್ದು, ಅನೇಕ ಕಡೆ ರಸ್ತೆ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ನದಿಗಳು ತುಂಬಿ ಹರಿಯುತ್ತಿವೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.