ಬಲಿಗೆ ಕಾಯುತ್ತಿದೆ ಸೇತುವೆ, ಬಸ್ ಸ್ಟಾಂಡ್..!
– ಶಾಸಕರ ಊರಿನ ಪಕ್ಕದ ಗ್ರಾಮ ಪಂಚಾಯತ್ ಅವ್ಯವಸ್ಥೆ
– ಚೂರು ಯಾಮಾರಿದ್ರೂ ಜೀವಕ್ಕೆ ಸಂಕಷ್ಟ.. ಪ್ರತಿಭಟನೆಗೆ ಸಜ್ಜು
– ನೆರಟೂರು ಗ್ರಾಮ ಪಂಚಾಯತ್ ನಿರ್ಲಕ್ಷ್ಯಕ್ಕೆ ಆಕ್ರೋಶ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಮಳೆ ಜೋರಾಗುತ್ತಿದೆ. ಗಾಳಿಯೂ ಬೀಸುತ್ತಿದೆ. ಎಲ್ಲೆಡೆ ಅನಾಹುತ ಸಂಭವಿಸುತ್ತಿವೆ. ಈ ನಡುವೆ ತೀರ್ಥಹಳ್ಳಿ ಪಟ್ಟಣಕ್ಕೆ ಸಮೀಪದ, ಶಾಸಕ ಆರಗ ಜ್ಞಾನೇಂದ್ರ ಊರಿನ ಪಕ್ಕದ ಗ್ರಾಮ ಪಂಚಾಯತ್ ಹಾಗೂ ಆಡಳಿತದ ಅವ್ಯವಸ್ಥೆ ಇದೀಗ ಜನರ ಬಲಿಗಾಗಿ ಕಾಯುತ್ತಿದೆ.
ಹೌದು. ತೀರ್ಥಹಳ್ಳಿ ತಾಲೂಕು ನೆರಟೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಸರಳ ಹೋಗುವ ರಸ್ತೆಯಲ್ಲಿ ತುಂಬಿ ಹರಿಯುತ್ತಿರುವ ಹಳ್ಳಕ್ಕೆ ತಡೆ ಗೋಡೆಯೇ ಇಲ್ಲ. ಒಂದು ಕ್ಷಣ ಯಾಮಾರಿದರೂ ದೊಡ್ಡ ದುರಂತ ಕಟ್ಟಿಟ್ಟಬುತ್ತಿ. ಇದೇ ರಸ್ತೆಯಲ್ಲಿ ಶಾಲಾ ವಾಹನಗಳು, ಜನ ಓಡಾಡುತ್ತಾರೆ. ದೊಡ್ಡ ಹಳ್ಳಕ್ಕೆ ಹಾಕಿರುವ ಸೇತುವೆ ಮುರಿದು ಬಿದ್ದಿದೆ. ತಡೆ ಗೋಡೆಯೂ ಇಲ್ಲ. ಆದ್ರೆ ಗ್ರಾಮ ಪಂಚಾಯತ್ ಮತ್ತು ತಾಲೂಕು ಆಡಳಿತ ಈ ಬಗ್ಗೆ ಗಮನಕೊಡದಿರುವುದು ಮಾತ್ರ ದುರಂತ. ಈ ಬಗ್ಗೆ ಜನ ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮಕ್ಕೆ ಮಾಹಿತಿ ಕಳುಹಿಸಿ, ಮುಂದೆ ಆಗುವ ಅನಾಹುತಕ್ಕೆ ಆಡಳಿತವೇ ಹೊಣೆ ಎಂದು ಪತ್ರ ಬರೆದಿದ್ದಾರೆ.
ಸಂಕದ ಹೊಳೆ ಬಸ್ ಸ್ಟ್ಯಾಂಡ್ ಅವ್ಯವಸ್ಥೆ!
* ಮಳೆಗಾಲದಲ್ಲಿ ನಿಲ್ಲಲು ಆಗದೆ ವಿದ್ಯಾರ್ಥಿಗಳು,ಸಾರ್ವಜನಿಕರ ಪರದಾಟ
ತೀರ್ಥಹಳ್ಳಿ: ತಾಲೂಕಿನ ನೆರಟೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸುಂಕದಹೊಳೆಯಲ್ಲಿರುವ ಬಸ್ ಸ್ಟ್ಯಾಂಡ್ ಮೇಲ್ಛಾವಣಿ ಸಂಪೂರ್ಣ ಹಾಳಾಗಿದ್ದು ಇದರಿಂದ ಸಾರ್ವಜನಿಕರು,ವಿದ್ಯಾರ್ಥಿಗಳು ತುಂಬಾ ತೊಂದರೆ ಅನುಭವಿಸುವಂತಾಗಿದೆ. ತಾಲೂಕಿನಾದ್ಯಂತ ವಿಪರೀತ ಮಳೆ ಇದ್ದು ಇಂತಹ ಸಂದರ್ಭದಲ್ಲಿ ಬಸ್‌ಗಾಗಿ ಕಾಯುವ ವಿದ್ಯಾರ್ಥಿಗಳು,ಸಾರ್ವಜನಿಕರು ಬಸ್ ಸ್ಟ್ಯಾಂಡ್ ಕೆಳಗೆ ನಿಲ್ಲಲೂ ಆಗುತ್ತಿಲ್ಲ ಕೇವಲ ಹೆಸರಿಗಷ್ಟೇ ಬಸ್‌ಸ್ಟ್ಯಾಂಡ್ ಇದ್ದು ಇದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ನೆರಟೂರು ಗ್ರಾ ಪಂ ವ್ಯಾಪ್ತಿಯಲ್ಲಿ ಬರುವ ಈ ಬಸ್ ಸ್ಟ್ಯಾಂಡ್‌ನ್ನು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ದುರಸ್ಥಿಪಡಿಸಿ ಕೊಟ್ಟು ಸಾರ್ವಜನಿಕರ ಕಷ್ಟಕ್ಕೆ ಸ್ಪಂದಿಸಬೇಕಾಗಿದೆ.
