ಇಡಿ ದಾಳಿ ಪ್ರಕರಣ: ಅರ್. ಎಂಗೆ ಹೈಕೋರ್ಟ್ ತಡೆಯಾಜ್ಞೆ!
– ಬಂಧನ ಮಾಡದಂತೆ ಹೈಕೋರ್ಟ್ ತಡೆ
NAMMUR EXPRESS NEWS
ತೀರ್ಥಹಳ್ಳಿ: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಆರ್.ಎಂ.ಮಂಜುನಾಥ್ ಗೌಡ ಮನೆ ಮತ್ತು ಕಚೇರಿಯ ಮೇಲೆ ಜಾರಿ ನಿರ್ದೇಶನಾಲಯಮಾಡಿರುವ ದಾಳಿ ಸಂಬಂಧಪಟ್ಟಂತೆ ಮಹತ್ವದ ಬೆಳವಣಿಗೆ ನಡೆದಿದೆ. ದಾಳಿ ಬಳಿಕ ಗೌಡರ ಬಂಧನ ಮಾಡದಂತೆ ಮಂಜುನಾಥ್ ಗೌಡ ಹೈ ಕೋರ್ಟ್ ಮೊರೆ ಹೋಗಿದ್ದರು, ಮಂಜುನಾಥ್ ಗೌಡರ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಲಯ ಇಡಿ ಪರಿಶೀಲನೆಗೆ ತಡೆಯಾಜ್ಞೆ ನೀಡಿದೆ ಎಂದು ಮಂಜುನಾಥ್ ಗೌಡರ ಆಪ್ತ ಯುವ ಸಹಕಾರಿ ರಾಘವೇಂದ್ರ ಶೆಟ್ಟಿ ಅವರು ಮಾಹಿತಿ ನೀಡಿದ್ದಾರೆ.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕಾಂಗ್ರೆಸ್ ಮುಖಂಡರು ಆಗಿರುವ ಆರ್.ಎಂ.ಮಂಜುನಾಥ್ ಗೌಡರ ತೀರ್ಥಹಳ್ಳಿ, ಶಿವಮೊಗ್ಗ, ಬೆಂಗಳೂರು ಮನೆ ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ವಾರದ ಹಿಂದೆ ದಾಳಿ ನೆಡೆಸಿ ಪರಿಶೀಲನೆ ನಡೆಸಿದ್ದರು. ಡಿಸಿಸಿ ಬ್ಯಾಂಕ್ ನಲ್ಲಿ ನೆಡೆದಿರುವ ಕೆಲವು ಹಗರಣಗಳ ವಿಷಯವಾಗಿ ದಾಳಿ ಮಾಡಲಾಗಿತ್ತು ಎಂದು ಹೇಳಲಾಗಿತ್ತು.