ಹುಟ್ಟು ಹಬ್ಬದ ಅಂಗವಾಗಿ ರಕ್ತದಾನ..!
– ಯುವ ಉದ್ಯಮಿ ರೋ.ನಾಗರಾಜ್ ಅವರ ಮಾದರಿ ಸೇವೆ
– ಪ್ರತಿಯೊಬ್ಬರೂ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ರಕ್ತದಾನ ಮಾಡಲು ಮನವಿ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಯುವ ಉದ್ಯಮಿ, ರೋಟರಿ ವಲಯ ಅಧ್ಯಕ್ಷರು, ತೀರ್ಥಹಳ್ಳಿ ರೋಟರಿ ಮಾಜಿ ಅಧ್ಯಕ್ಷರಾದ ನಾಗರಾಜ್ ಗೌಡ ಅವರು ತಮ್ಮ ಹುಟ್ಟು ಹಬ್ಬದ ಅಂಗವಾಗಿ ರೋಟರಿ ಬ್ಲಡ್ ಬ್ಯಾಂಕ್ ನಲ್ಲಿ ರಕ್ತದಾನ ಮಾಡುವ ಮಾದರಿಯಾಗಿದ್ದಾರೆ. ತೀರ್ಥಹಳ್ಳಿ ವರ್ತಕರ ಸೌಹಾರ್ದ ನಿರ್ದೇಶಕ ನಾಗರಾಜ್11ನೇ ಬಾರಿ ತಮ್ಮ ಹುಟ್ಟು ಹಬ್ಬದ ದಿನದಲ್ಲಿ ರಕ್ತದಾನ ಮಾಡಿದ್ದಾರೆ. ತೀರ್ಥಹಳ್ಳಿ ರೋಟರಿ ಅಧ್ಯಕ್ಷ ರೊಟೇರಿಯನ್ ಭರತ್, ಪ್ರಮುಖರಾದ ರೊಟೇರಿಯನ್ ಚಂದ್ರಪ್ಪ, ರೋಟರಿ ಬ್ಲಡ್ ಬ್ಯಾಂಕ್ ನ ಪ್ರಮುಖರಾದ ಅರುಣ್ ಹಾಜರಿದ್ದರು.