ಮನೆ ಮದ್ದು ವೈದ್ಯೆ ಇಂದ್ರಮ್ಮ ಇನ್ನಿಲ್ಲ!
– ಕುಂದಾದ್ರಿಯ ಸುತ್ತಮುತ್ತ ನೂರಾರು ಜನರಿಗೆ ಸೇವೆ
– ಗ್ರಾಮ ಪಂಚಾಯತ್ ಸದಸ್ಯ ರಾಘವೇಂದ್ರ ಅವರಿಗೆ ಮಾತೃ ವಿಯೋಗ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ನಂಟೂರು ಗ್ರಾಮದ ಕುಂದಾದ್ರಿ ವಾಸಿ ಇಂದ್ರಮ್ಮ ಅಣ್ಣನಾಯ್ಕ (95) ಶುಕ್ರವಾರ 20-10-23ರ ಮಧ್ಯಾಹ್ನ 12-30ಕ್ಕೆ ನಿಧನರಾಗಿದ್ದಾರೆ. ಮೃತರು ಅಕ್ಕಪಕ್ಕದ ಊರುಗಳಲ್ಲಿ ಮಕ್ಕಳು ಮತ್ತು ಮಹಿಳೆಯರ ಸಂಬಂಧಿಸಿದ ರೋಗಗಳಿಗೆ ಮನೆಮದ್ದು ನೀಡುವ ಮೂಲಕ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದ ಅವರು ಆರು ಜನಹೆಣ್ಣು ಮತ್ತು ಮೂರು ಜನ ಗಂಡುಮಕ್ಕಳು ಸೇರಿದಂತೆ ಅಪಾರ ಬಳಗವನ್ನು ಅಗಲಿದ್ದಾರೆ. ಹೊನ್ನೇತಾಳು ಗ್ರಾಮ ಪಂಚಾಯತ್ ಸದಸ್ಯ ಕುಂದಾದ್ರಿ ರಾಘವೇಂದ್ರ, ಹೊನ್ನೇತಾಳು ಸೊಸೈಟಿ ಸದಸ್ಯ ಕೃಷ್ಣಮೂರ್ತಿ ಅವರ ತಾಯಿ.