Categories
ತೀರ್ಥಹಳ್ಳಿ

ಸಮಾಕಾನಿ ದೇವಸ್ಥಾನದಲ್ಲಿ ನವರಾತ್ರಿಯ ಸಂಭ್ರಮ

ಸಮಾಕಾನಿ ದೇವಸ್ಥಾನದಲ್ಲಿ ನವರಾತ್ರಿಯ ಸಂಭ್ರಮ
– ದುರ್ಗಾಪರಮೇಶ್ವರಿ ಅಮ್ಮನವರಿಗೆ ವಿಶೇಷ ಹೂವಿನ ಅಲಂಕಾರ ಪೂಜೆ

NAMMUR EXPRESS NEWS
ತೀರ್ಥಹಳ್ಳಿ: ನವರಾತ್ರಿ ಉತ್ಸವ ಹಾಗೂ ವಿಜಯದಶಮಿಯ ಪ್ರಯುಕ್ತ ಅ.15 ರ ಭಾನುವಾರದಿಂದ ದಿನಾಂಕ 24 ರ ಮಂಗಳವಾರದವರೆಗೆ ಸಮಾಕಾನಿಯ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ನವರಾತ್ರಿ ಉತ್ಸವ ಹಾಗೂ ವಿಜಯದಶಮಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಹಾಗೂ ಪ್ರತಿ ವರ್ಷದಂತೆ ವಿಶೇಷವಾಗಿ ಅ.19 ರ ಗುರುವಾರ ಲಲಿತಾ ಪಂಚಮಿಯಂದು ಚಂಡಿಕಾಯಾಗ ವನ್ನು ಹಾಗೂ ದಿನಾಂಕ ಅ 21ರ ಶನಿವಾರ ಬೆಳಿಗ್ಗೆ 10-30 ರಿಂದ 1ಗಂಟೆವರೆಗೆ ಕಾರ್ಯಕ್ರಮ ನಡೆದಿದೆ. ಹಾಗೂ ಶ್ರೀ ಸತ್ಯನಾರಾಯಣ ವ್ರತ ಮಾತಂಗಿ ಅಮ್ಮನವರಿಗೆ ವಿಶೇಷ ಪೂಜೆ ಹೂವಿನ ಪೂಜೆ, ನಾಗದೇವರಿಗೆ ವಿಶೇಷಪೂಜೆ, ಸರ್ವಾಲಂಕಾರ ಸೇವೆ, ಚಂಡಿಕಾ ಹೋಮ, ಸಪ್ತಶತಿ ಚಂಡಿಕಾ ಪಾರಾಯಣ ಪ್ರತ್ಯೇಕ ಸಪ್ತಶತಿ ಚಂಡಿಕಾ ಪಾರಾಯಣ, ಸಾಮೂಹಿಕ ಪೂಜಾ ವಿಧಿ ನಡೆಯುತ್ತಿವೆ. ದೇವಸ್ಥಾನದಲ್ಲಿ 10 ದಿನವೂ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯುತ್ತಿದೆ.

ದಿನಾಂಕ 24-10-2023 ನೇ ಮಂಗಳವಾರದಂದು ಶ್ರೀ ದೇವಿಯ ಪಲ್ಲಕ್ಕಿ ಉತ್ಸವ ಹಾಗೂ ಬನ್ನಿ ಮುಡಿಯುವ ಕಾರ್ಯಕ್ರಮ. ಹಾಗೂ ದೇವಿಯ ಸನ್ನಿಧಿಯಲ್ಲಿ ಭಕ್ತಾದಿಗಳಿಗೆ ಹರಕೆ ಸೀರೆಯನ್ನು ಕೊಡಲಾಗುವುದು. ಜಾನುವಾರು ಹರಾಜು ಇರುತ್ತದೆ. ದಿನಾಂಕ 21-10-2023ನೇ ಶನಿವಾರ ಬೆಳಿಗ್ಗೆ ಗಂಟೆ 10-30 ರಿಂದ 1 -00ರ ವರೆಗೆ ‘ಸಪ್ತಶತಿ ಚಂಡಿಕಾ ಪಾರಾಯಣ’ವನ್ನು ಏರ್ಪಡಿಸಲಾಗಿದೆ. ಈ ಸೇವೆಯನ್ನು ಪ್ರತ್ಯೇಕವಾಗಿಹಾಗೂ ಸಾಮೂಹಿಕವಾಗಿ ಮಾಡಬಹುದು. ಸರ್ವರಿಗೂ ನವರಾತ್ರಿ ಉತ್ಸವಕ್ಕೆ ಬರಲು ಸಮಾಕಾನಿ ಆಡಳಿತ ಮಂಡಳಿ ಸ್ವಾಗತಿಸಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.