Categories
ತೀರ್ಥಹಳ್ಳಿ

ಕನ್ನಡದಲ್ಲಿ ಭಾಷಣ ಮಾಡಿದ ಪೋರನಿಗೆ ಶಿಕ್ಷಣ ಸಚಿವರಿಂದ ಸನ್ಮಾನ!

ಕನ್ನಡದಲ್ಲಿ ಭಾಷಣ ಮಾಡಿದ ಪೋರನಿಗೆ ಶಿಕ್ಷಣ ಸಚಿವರಿಂದ ಸನ್ಮಾನ!
– ತೀರ್ಥಹಳ್ಳಿಯ ಅದ್ವಿನ್ ಸಾಧನೆಗೆ ಮೆಚ್ಚುಗೆ
– ಸರ್ಕಾರಿ ಶಾಲೆ ಹುಡುಗನಿಗೆ ಮಧು ಬಂಗಾರಪ್ಪ ಅವರಿಂದ ಸನ್ಮಾನ
– ತೀರ್ಥಹಳ್ಳಿ ಪ್ರಾಥಮಿಕ ಶಿಕ್ಷಕರ ಸಂಘದ ಸೊಸೈಟಿಗೂ ಭೇಟಿ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಕುವೆಂಪು ಶಾಲೆಯ ಮ‌ೂರನೇ ತರಗತಿಯ ವಿಧ್ಯಾರ್ಥಿ ಅದ್ವಿನ್ ಎಸ್ ಶೆಟ್ಟಿ ಕನ್ನಡ ರಾಜ್ಯೋತ್ಸವದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿ ವೈರಲ್ ಆಗಿದ್ದು, ಇದೀಗ ಅವರ ಕನ್ನಡ ಪ್ರೇಮಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸನ್ಮಾನ ಮಾಡಿ ಗೌರವಿಸಿದ್ದಾರೆ. ತೀರ್ಥಹಳ್ಳಿಯಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಬಳಿಕ ಶಿಕ್ಷಕರ ಪ್ರಾಥಮಿಕ ಸಂಘದ ಕಚೇರಿಗೆ ಭೇಟಿ ನೀಡಿದ ವೇಳೆ ಸಚಿವರು ಸನ್ಮಾನಿಸಿದರು. ಅಲ್ಲದೆ ಬಾಲಕನ ಭಾಷಾ ಜ್ಞಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ತೀರ್ಥಹಳ್ಳಿ ಉದ್ಯಮಿ ಸತೀಶ್ ಶೆಟ್ಟಿ, ಕವಿತಾ ಶೆಟ್ಟಿ ಪುತ್ರನಾಗಿರುವ ಅದ್ವಿನ್ ತೀರ್ಥಹಳ್ಳಿಯ ರಾಷ್ಟ್ರಕವಿ ಕುವೆಂಪು ಬಾಲಕರ ಹಿರಿಯ ಪ್ರಾಥಮಿಕ ಶಾಲೆಯ 3ನೇ ತರಗತಿ ವಿದ್ಯಾರ್ಥಿ. ಸೊಗಸಾಗಿ ಕನ್ನಡದ ಬಗ್ಗೆ ನಾಡಿನ ಹಿರಿಮೆಯನ್ನು ಸ್ಪಷ್ಟವಾಗಿ ಮಾತನಾಡುವ ಮೂಲಕ ಕರ್ನಾಟಕದ ಸರ್ಕಾರಿ ಶಾಲೆಯ ವಿಧ್ಯಾರ್ಥಿಗಳು ಯಾರಿಗೂ ಕಮ್ಮಿ ಇಲ್ಲ ಎನ್ನುವ ರೀತಿಯಲ್ಲಿ ಅತನ ಭಾಷಣ ವೈರಲ್ ಆಗಿತ್ತು.

ಪ್ರಾಥಮಿಕ ಶಿಕ್ಷಕರ ಸಂಘಕ್ಕೂ ಭೇಟಿ

ಶಿಕ್ಷಕರ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಂಘದ ತೀರ್ಥಹಳ್ಳಿ ಕಚೇರಿಗೆ ಭೇಟಿ ನೀಡಿ ಅಲ್ಲಿ ಗೌರವ ಸ್ವೀಕರಿಸಿದರು. ಸಂಘದ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ, ಸಹಕಾರಿ ನಾಯಕ ಡಾ. ಮಂಜುನಾಥ ಗೌಡ, ಎಲ್ಲಾ ನಿರ್ದೇಶಕರು ಇದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.