Categories
ಸಿನಿಮಾ

ಯುವ ಮನಸು ಸೆಳೆದ ಅರ್ದಂಬರ್ಧ ಪ್ರೇಮ ಕಥೆ..!

ಯುವ ಮನಸು ಸೆಳೆದ ಅರ್ದಂಬರ್ಧ ಪ್ರೇಮ ಕಥೆ..!
– ಬಿಗ್ ಬಾಸ್ ಜೋಡಿ ದಿವ್ಯಾ ಉರುಡುಗ, ಅರವಿಂದ್ ಕೆಪಿ ನಟನೆಯ ಸಿನಿಮಾ
– ಲವ್ ಜತೆ ರೊಮ್ಯಾಂಟಿಕ್ ಕಥೆ: ಎಲ್ಲೆಡೆ ಉತ್ತಮ ಸ್ಪಂದನೆ

NAMMUR EXPRESS NEWS
ಬಿಗ್ ಬಾಸ್ ಜೋಡಿ ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆಪಿ ನಟನೆಯ ಸಿನಿಮಾ ಅರ್ಧ0ಬರ್ಧ ಪ್ರೇಮಕಥೆ ಇದೀಗ ಚಿತ್ರಮಂದಿರಗಳಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. ದಿವ್ಯ ಉರುಡುಗ, ರಾಪರ್ ಅಲೋಕ್, ಶ್ರೇಯಾ ಬಾಬು, ವೆಂಕಟಶಾಸ್ತ್ರಿ, ಪ್ರದೀಪ್‌ ರೋಷನ್, ಸೂರಜ್ ಹೂಗಾರ್, ಸುಜಿಶ್ ಶೆಟ್ಟಿ, ಅಭಿಲಾಷ್ ದ್ವಾರಕೀಶ್ ಹಾಗೂ ಮುಂತಾದವರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಒಂದು ಮುದ್ದಾದ ಹುಡುಗ ಹಾಗೂ ಸುಂದರವಾದ ಹುಡುಗಿಯ ಮನಸ್ಥಿತಿ, ಅವರ ನೋಟ, ಭೇಟಿ, ಸ್ನೇಹ, ಪಯಣ, ಪ್ರೀತಿ, ನೋವು, ನಲಿವು ಹೀಗೆ ಹಲವು ವಿಚಾರಗಳ ಬೆಸುಗೆಯೊಂದಿಗೆ ಪ್ರೀತಿಸುವ ವ್ಯಕ್ತಿ, ವ್ಯಕ್ತಿತ್ವ ಅದರ ಮಹತ್ವದ ರೂಪವನ್ನು ಮಾತುಕತೆ, ತರ್ಲೆಯ, ತುಂಟಾಟದ ಹಾದಿಯಲ್ಲಿ ತೆರೆಯ ಮೇಲೆ ಈ ವಾರ ತಂದಿರುವಂತಹ ಚಿತ್ರ “ಅರ್ದಂಬರ್ಧ ಪ್ರೇಮಕಥೆ”.

ತನ್ನದೇ ಏನೋ ಆಲೋಚನೆಯೊಂದಿಗಿರುವ ನಾಯಕ(ಅರವಿಂದ್. ಕೆ.ಪಿ). ಜೀವನದಲ್ಲಿ ಖುಷ್ ಖುಷಿಯಾಗಿ ಬದುಕಬೇಕೆಂದು ಆಸೆ ಪಡುತ್ತಾ ಆಡ್ ಏಜೆನ್ಸಿಯಲ್ಲಿ ಪ್ರಾಜೆಕ್ಟ್ ವರ್ಕ್ ಕೆಲಸ ಮಾಡುವ ನಾಯಕಿ (ದಿವ್ಯ ಉರುಡುಗ). ಅಚಾನಕ್ಕಾಗಿ ನಾಯಕನನ್ನ ಭೇಟಿಯಾಗುವ ನಾಯಕಿ ತನ್ನ ಕೆಲಸಕ್ಕಾಗಿ ಡ್ರಾಪನ್ನು ಕೇಳುತ್ತಾಳೆ. ಬೈಕಿನ ಮೂಲಕ ನಾಯಕಿ ಹೇಳಿದ ಸ್ಥಳಕ್ಕೆ ಡ್ರಾಪ್ ಮಾಡುವ ನಾಯಕನಿಗೆ ಆಕೆ ಪ್ರೀತಿಸಿದ ಹುಡುಗನಿಂದ ಬ್ರೇಕ್ ಅಪ್ ಆದ ವಿಚಾರ ತಿಳಿಯುತ್ತದೆ. ಮುಂದೆ ಆಕೆಯನ್ನು ಡ್ರಾಪ್ ಮಾಡಲು ಕರೆದುಕೊಂಡು ಹೋಗುವ ಮಾರ್ಗ ಮಧ್ಯ ಇಬ್ಬರಲ್ಲೂ ಸ್ನೇಹ, ವಿಶ್ವಾಸ ಬೆಳೆಯುತ್ತಾ ಕೆಲ ಸಮಯ ಕಾಲ ಕಳೆಯಲು ನಿರ್ಧರಿಸುತ್ತಾರೆ. ಮುಂದೇನಾಗುತ್ತದೆ ಎಂದು ತಿಳಿಯಬೇಕಾದರೆ ಅರ್ದಂಬರ್ಧ ಪ್ರೇಮಕಥೆ ಚಿತ್ರ ನೋಡಬೇಕು..!.

ಚಿತ್ರವನ್ನು ನಿರ್ದೇಶನ ಮಾಡಿರುವ ಅರವಿಂದ್ ಕೌಶಿಕ್ ಯುವ ಮನಸುಗಳ ಭಾವನೆ ತೆರೆ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತದ ಹಾಡು ಗಮನ ಸೆಳೆಯುತ್ತದೆ. ಛಾಯಾಗ್ರಹಕ ಸೂರ್ಯ ಕ್ಯಾಮೆರಾ ಕೈಚಳಕ ಅದ್ಭುತವಾಗಿದೆ. ನಾಯಕನಾಗಿ ಅರವಿಂದ್. ಕೆ.ಪಿ. ತಮ್ಮ ಪ್ರಥಮ ಚಿತ್ರದಲ್ಲಿ ಬಹಳ ಶ್ರಮಪಟ್ಟು ಅಭಿನಯಿಸಿದ್ದು, ಅನುಭವಿ ಕಲಾವಿದನಂತೆ ಪಾತ್ರಕ್ಕೆ ನ್ಯಾಯ ಕೊಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಒಬ್ಬ ಬೈಕ್ ರೈಡರ್ ಆಗಿದ್ದರು, ನಟನೆಯ ಬಗ್ಗೆ ಇರುವ ಆಸಕ್ತಿ ಕಾಣುತ್ತದೆ. ದಿವ್ಯಾ ಅತ್ಯುತ್ತಮ ನಟನೆ ಮಾಡಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.