Categories
ತೀರ್ಥಹಳ್ಳಿ

ತೀರ್ಥಹಳ್ಳಿ ತಾಲೂಕಿನ ಹಳ್ಳಿ ಹಳ್ಳಿಯಲ್ಲೂ ಅಕ್ರಮ ಮದ್ಯ!

ತೀರ್ಥಹಳ್ಳಿ ತಾಲೂಕಿನ ಹಳ್ಳಿ ಹಳ್ಳಿಯಲ್ಲೂ ಅಕ್ರಮ ಮದ್ಯ!

– ಹಳ್ಳಿ ಹಳ್ಳಿಯ ಅಂಗಡಿಗಳಲ್ಲಿ ಮಾರಾಟ: ಅಬಕಾರಿ ಇಲಾಖೆ ಮೌನ?
– ಸರ್ಕಾರಕ್ಕೆ ಜನರ ಜೀವನ ಹಾಳು ಮಾಡುವುದೇ ಆದಾಯವೇ?
– ಪ್ರತಿ ಗ್ರಾಮದಲ್ಲೂ ಮಾರಾಟ: ಹೋರಾಟಕ್ಕೆ ಮಹಿಳೆಯರು ಸಜ್ಜು

NAMMUR EXPRESS NEWS

ತೀರ್ಥಹಳ್ಳಿ : ಸುಸಂಸ್ಕೃತರ ಊರು ತೀರ್ಥಹಳ್ಳಿಯಲ್ಲಿ ಇದೀಗ ಅಕ್ರಮ ಮದ್ಯ ಓಡಾಟ ಹೆಚ್ಚಾಗಿದೆ. ಪ್ರತಿ ಹಳ್ಳಿ ಹಳ್ಳಿಯ ಅಂಗಡಿ, ಮನೆ ಮನೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಆದರೆ ಈ ಅಕ್ರಮಕ್ಕೆ ಕಡಿವಾಣ ಹಾಕಬೇಕಾದ ಅಬಕಾರಿ ಇಲಾಖೆ ಅಕ್ರಮ ಹಣಕ್ಕೆ ತಲೆಬಾಗಿದೆ ಎಂಬ ಬಗ್ಗೆ ಸ್ಥಳೀಯರು ದೂರು ನೀಡಿದ್ದಾರೆ.

ಆಗುಂಬೆ, ಮಂಡಗದ್ದೆ, ಕಟ್ಟೆಹಕ್ಕಲು, ಮೇಗರವಳ್ಳಿ, ಮೃಗವಧೆ, ಗಡಿ ಕಲ್ಲು, ಮೇಳಿಗೆ ಸೇರಿದಂತೆ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಈಗಾಗಲೇ ವಿದ್ಯಾರ್ಥಿಗಳು, ಯುವಕರು ಸೇರಿ ಸಾವಿರಾರು ಮಂದಿ ಈ ಹೆಂಡಕ್ಕೆ ದಾಸರಾಗಿದ್ದಾರೆ. ವಿವಿಧ ಕಾಯಲೆ, ಅಪಘಾತದಲ್ಲಿ ಜೀವ ಕಳೆದುಕೊಂಡಿದ್ದಾರೆ.

ಹಲವೆಡೆ ಹೋರಾಟಕ್ಕೆ ಸಿದ್ಧತೆ

ತೀರ್ಥಹಳ್ಳಿ ತಾಲೂಕಿನ ಹಲವೆಡೆ ಸ್ತ್ರೀ ಶಕ್ತಿ ಸಂಘಟನೆಗಳು, ಸಹಕಾರಿ ಸಂಘಟನೆಗಳು ಕೆಲವು ಕುಟುಂಬಗಳು ಹೋರಾಟಕ್ಕೆ ಇಳಿಯಲು ಮುಂದಾಗಿದೆ. ಪ್ರತಿದಿನ ದುಡಿದ ಹಣವನ್ನೆಲ್ಲ, ಮಧ್ಯಕ್ಕೆ ಹಾಕುತ್ತಿರುವುದರಿಂದ ಅದರಲ್ಲೂ ಮದ್ಯದ ದರ ಹೆಚ್ಚಾಗಿರುವುದು ಅವರ ಕೂಲಿ ಹಣ ಹಾಗೂ ಸಂಪಾದಿಸಿದ ಹಣ ಮದ್ಯಕ್ಕೆ ಹೋಗುತ್ತಾ ಇದೆ. ಪ್ರತಿ ಅಂಗಡಿಗಳಲ್ಲಿ, ಮನೆಗಳಲ್ಲಿ ಸಿಗುತ್ತಾ ಇವೆ. ಅನೇಕ ಜನರು ಇದಕ್ಕೆ ದಾಸರಾಗಿದ್ದಾರೆ.ಮಕ್ಕಳಿಂದ ಹಿಡಿದು ಯುವಜನತೆ ಕೂಡ ಇದೀಗ ಮಧ್ಯಕ್ಕೆ ದಾಸರಾಗಿರುವುದರಿಂದ ಕುಟುಂಬಗಳು ಬೀದಿಗೆ ಬರುತ್ತಿವೆ. ಮನೆಯಲ್ಲಿ ನೆಮ್ಮದಿ ಇಲ್ಲದಂತಾಗಿದೆ, ಆದರೆ ಇದರ ಬಗ್ಗೆ ಗಮನಿಸಬೇಕಾದಂತಹ ಅಬಕಾರಿ ಇಲಾಖೆ ಮಾನಕ್ಕೆ ಜಾರಿದೆ ಎಂದು ಮಹಿಳಾ ಹೋರಾಟಗಾರರೊಬ್ಬರು ಹೇಳಿಕೆ ನೀಡಿದ್ದಾರೆ.

ಪ್ರತಿ ತಿಂಗಳ ಮಾಮೂಲಿಗೆ ಅಧಿಕಾರಿಗಳು ಶಾಮೀಲು?!

ಅಬಕಾರಿ ಅಧಿಕಾರಿಗಳು, ಹಣಕ್ಕೆ ಶಾಮಿಲಾಗಿದ್ದಾರೆ.
ಪ್ರತಿ ತಿಂಗಳ ಮಾಮೂಲಿಯನ್ನ ಪಡೆಯುತ್ತಿದ್ದಾರೆ ಎನ್ನುವ ಆರೋಪ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಕ್ಷಣ ಶಾಸಕರು, ಸರ್ಕಾರ, ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂಬ ಅಗ್ರಹ ವ್ಯಕ್ತವಾಗಿದೆ.

ಸರ್ಕಾರಕ್ಕೆ ಜನರ ಜೀವನ ಹಾಳು ಮಾಡುವುದೇ ಆದಾಯವೇ?

ಸರ್ಕಾರಕ್ಕೆ ಮದ್ಯವೇ ಆದಾಯವಾಗುವುದಾದರೆ ಆರೋಗ್ಯ, ಸಮಾಜದ ಸ್ವಾಸ್ಥ್ಯ, ಜನರ ನೆಮ್ಮದಿ , ಶಿಕ್ಷಣ, ಬದುಕು ಇದೆಲ್ಲಾ ಹಾಳಾಗುತ್ತೆ. ಜತೆಗೆ ಅಕ್ರಮ ಮದ್ಯ ಸೇವಿಸಿ ಲಿವರ್, ಕಿಡ್ನಿ ವೈಫಲ್ಯ, ಜಾಂಡಿಸ್ ಅಂತಹ ರೋಗಕ್ಕೆ ಮದ್ಯ ಸೇವನೆ ಚಟ ಹೊಂದಿರುವ ಜನರು ಸಾಯುತ್ತಿದ್ದಾರೆ. ಅಪರಾಧ, ಅನಾಹುತ, ಅಪಘಾತ ಹೆಚ್ಚಾಗುತ್ತಿದೆ. ಕುಡಿದವರ ಅನೈತಿಕತೆ ಸಮಾಜವನ್ನು ಕೆಟ್ಟ ಹಾದಿಗೆ ತಳ್ಳುತ್ತಿದೆ. ಈ ಬಗ್ಗೆ ಸರ್ಕಾರ, ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಿಸಬೇಕಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.