Categories
ತೀರ್ಥಹಳ್ಳಿ ಶಿವಮೊಗ್ಗ

ತೀರ್ಥಹಳ್ಳಿಯಲ್ಲಿ ಇಂದು 2 ಗಣಪತಿಗಳ ವಿಸರ್ಜನೆ!

ತೀರ್ಥಹಳ್ಳಿಯಲ್ಲಿ ಇಂದು 2 ಗಣಪತಿಗಳ ವಿಸರ್ಜನೆ!
– ಮೇಲಿನ ಕುರುವಳ್ಳಿ, ಛತ್ರಕೇರಿ ಗಣಪತಿ ಶೋಭಾ ಯಾತ್ರೆ
– ಶಿವಮೊಗ್ಗದಲ್ಲಿ ಹಿಂದೂ ಮಹಾ ಸಭಾ ಗಣಪತಿ

NAMMUR EXPRESS NEWS
ತೀರ್ಥಹಳ್ಳಿ/ ಶಿವಮೊಗ್ಗ: ತೀರ್ಥಹಳ್ಳಿಯ ಪ್ರತಿಷ್ಠಿತ ಎರಡು ಗಣಪತಿಗಳ ಅತಿ ದೊಡ್ಡ ಶೋಭಾಯಾತ್ರೆ ನಡೆಯಲು ಕ್ಷಣಗಣನೆ ಆರಂಭವಾಗಿದೆ.
ತೀರ್ಥಹಳ್ಳಿ ಪಟ್ಟಣದ ಛತ್ರಕೇರಿಯ ಶ್ರೀ ಸಿದ್ಧಿ ವಿನಾಯಕ ಯುವಕ ಸಂಘ ಹಾಗೂ ಮೇಲಿನಕುರುವಳ್ಳಿಯ ಶ್ರೀ ವಿದ್ಯಾಗಣಪತಿ ಸೇವಾ ಸಂಘ ಇವರು ಪ್ರತಿಷ್ಠಾಪಿಸಿದ್ದ ಎರಡು ಗಣಪತಿಗಳ ವಿಸರ್ಜನಾ ಮೆರವಣಿಗೆಯ ಮಧ್ಯಾಹ್ನ 3:00 ಗಂಟೆಗೆ ಆರಂಭವಾಗಲಿದೆ.
ಛತ್ರಕೇರಿಯ ಶ್ರೀ ಸಿದ್ಧಿ ವಿನಾಯಕ ಯುವಕ ಸಂಘದ ಮೆರವಣಿಗೆಯು ಚಂಡೆ, ನಾಸಿಕ್ ಬ್ಯಾಂಡ್, ವಿವಿಧ ವೇಷಭೂಷಣಗಳ ಜೊತೆಗೆ ವಿಸರ್ಜನಾ ಮೆರವಣಿಗೆ ಆರಂಭವಾಗಿ ಆಗುಂಬೆ ಬಸ್ ನಿಲ್ದಾಣ, ಸೀಬಿನಕೆರೆ ಸರ್ಕಲ್, ಮಸೀದಿ ರಸ್ತೆ, ಗಾಂಧಿಚೌಕ, ಕೊಪ್ಪ ಸರ್ಕಲ್, ಕುಶಾವತಿ, ಕೆ ಸಿ ರಸ್ತೆ, ಮಿಲ್ಕೆರಿ ರಸ್ತೆ, ಛತ್ರಕೇರಿ ಹಾಗೂ ರಥಬೀದೀಯ ಮೂಲಕ ತುಂಗಾ ನದಿಯಲ್ಲಿ ವಿಸರ್ಜನೆ ನಡೆಯಲಿದೆ.
ಗಣಪತಿ ವಿಸರ್ಜನೆ ವೇಳೆ ಅದ್ಭುತ ಡ್ಯಾನ್ಸ್‌ ಮೂಲಕವೇ ಪ್ರಖ್ಯಾತಿ ಪಡೆದ ಮೇಲಿನಕುರುವಳ್ಳಿಯ ವಿದ್ಯಾ ಗಣಪತಿಯ ನಿಸರ್ಜನಾ ಮೆರವಣಿಗೆ 3 ಗಂಟೆಗೆ ಆರಂಭವಾಗಲಿದ್ದು ಮೆರವಣಿಗೆಯಲ್ಲಿ ಡಿಜೆ, ನಾಸಿಕ್ ಬ್ಯಾಂಡ್, ಅಘೋರಿಗಳ ತಂಡ, ಸೇರಿ ವಿವಿಧ ವೇಷ ಭೂಷಣ ಒಳಗೊಂಡ ಮೆರವಣಿಗೆ ಕುರುವಳ್ಳಿ, ರಥಬೀದಿ, ಛತ್ರಕೇರಿ, ಗಾಂಧಿಚೌಕ, ಆಗುಂಬೆ ಬಸ್ ನಿಲ್ದಾಣ,, ಸೀಬಿನಕೆರೆ ಸರ್ಕಲ್, ಮಸೀದಿ ರಸ್ತೆ, ಕೊಪ್ಪ ಸರ್ಕಲ್ ಮೂಲಕ ಪುನಃ ಮೇಲಿನಕುರುವಳ್ಳಿಯ ಹೆನ್ನಂಗಿ ಹಳ್ಳದಲ್ಲಿ ವಿದ್ಯಾಗಣಪತಿಯ ವಿಸರ್ಜನೆ ನಡೆಯಲಿದೆ.

ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ: ಬಂದೋಬಸ್ತ್

ಶಿವಮೊಗ್ಗ: ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಶುರುವಾಗಿದ್ದು, ಶಿವಮೊಗ್ಗ ನಗರದಲ್ಲಿ ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗಿದೆ. ಭದ್ರತೆಗಾಗಿ ಸುಮಾರು 5 ಸಾವಿರ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ. ಸಾವಿರಾರು ಜನ ಸೇರಲಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.