Categories
ತೀರ್ಥಹಳ್ಳಿ

25ನೇ ವರ್ಷದ ಸಂಭ್ರಮದಲ್ಲಿ ಎಸ್‌.ಬಿ ಬೇಕರಿ!

25ನೇ ವರ್ಷದ ಸಂಭ್ರಮದಲ್ಲಿ ಎಸ್‌.ಬಿ ಬೇಕರಿ!
– ಬೆಳ್ಳಿ ಹಬ್ಬ ಸಿಬ್ಬಂದಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವ

ಸಮಸ್ತ ಗ್ರಾಹಕರಿಗೆ ಧನ್ಯವಾದ ಅರ್ಪಿಸಿದ ಶ್ರೀಕಾಂತ್‌ ಭಟ್‌ ಕುಟುಂಬ

ತೀರ್ಥಹಳ್ಳಿಯ ಪ್ರಸಿದ್ದ ಬೇಕರಿ ಉದ್ಯಮವಾದ ಎಸ್.ಬಿ. ಬೇಕರಿ ಸ್ವೀಟ್ಸ್ ಅಂಡ್ ಕಾಂಡಿಮೆಂಟ್ಸ್‌ 25ನೇ ವರ್ಷ ಪೂರೈಸಿದೆ. ಈಗಾಗಲೇ ಸಾವಿರಾರು ಗ್ರಾಹಕರ ಮೆಚ್ಚಿನ ಉದ್ಯಮವಾಗಿದೆ. ಈ ಉದ್ಯಮದ ಯಶಸ್ಸಿಗೆ ಸಿಬ್ಬಂದಿಯ ಸೇವೆ ಅಮೂಲ್ಯವಾದುದು. ಈ ಸವಿನೆನಪಿಗಾಗಿ ಆಗಸ್ಟ್ 30ರಂದು ಸಂಸ್ಥೆ ತನ್ನ ಬೇಕರಿ ಉದ್ಯಮದ ಬೆಳವಣಿಗೆಗೆ ಕಾರಣೀಕರ್ತರಾದ ತಮ್ಮ ಕಾರ್ಮಿಕ ಸಿಬ್ಬಂದಿಯವರಿಗೆ ಸ್ಮರಣಿಕೆ ನೀಡಿ ಉಡುಗೊರೆಯೊಂದಿಗೆ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿ ಮತ್ತು ಅವರ ಕುಟುಂಬಸ್ಥರು, ಮಾಲೀಕರಾದ ತುಡ್ಕಿಯ ಶ್ರೀಕಾಂತ್‌ ಭಟ್‌ ಕುಟುಂಬಸ್ಥರು ಭಾಗವಹಿಸಿದ್ದರು.
ಎಲ್ಲಾ ಗ್ರಾಹಕರಿಗೆ, ಸಮಸ್ತ ಜನತೆಗೆ, ಸಿಬ್ಬಂದಿಗೆ ಮಾಲೀಕರು ಧನ್ಯವಾದ ಅರ್ಪಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.