Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ರಾಮ ಮಂಟಪ ಮುಳುಗುತ್ತಾ..?

ತೀರ್ಥಹಳ್ಳಿಯಲ್ಲಿ ರಾಮ ಮಂಟಪ ಮುಳುಗುತ್ತಾ..?
– ಕೆಲವೇ ಅಡಿಗಳು ಬಾಕಿ: ಶಾಲೆ ಕಾಲೇಜುಗಳಿಗೆ ರಜೆ
– ಅಲ್ಲಲ್ಲಿ ಗುಡ್ಡ ಕುಸಿತ: ಎಡಬಿಡದೆ ಮಳೆ
– ಅಡಿಕೆಗೆ ಕೊಳೆ ರೋಗದ ಆತಂಕ: ರೈತರ ಜಾಗೃತಿ

ವಿಶೇಷ ವರದಿ: ಕೃಷ್ಣಮೂರ್ತಿ

ನಮ್ಮೂರ್ ಎಕ್ಸ್ ಪ್ರೆಸ್ ತೀರ್ಥಹಳ್ಳಿ
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನಲ್ಲಿ ಎಡೆ ಬಿಡದೆ ಸುರಿಯುತ್ತಿರುವ ಮಳೆಗೆ ತುಂಗಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ಶೃಂಗೇರಿ, ಕೊಪ್ಪ, ತೀರ್ಥಹಳ್ಳಿ ಭಾಗದಲ್ಲಿ ಭಾರೀ ಮಳೆ ಆಗುತ್ತಿರುವ ಕಾರಣ ನೀರಿನ ಮಟ್ಟ ಏರಿಕೆ ಆಗಿದೆ. ರಾಮ ಮಂಟಪ ಮುಳುಗಲು ಕೆಲವೇ ಅಡಿ ಬಾಕಿ ಇದೆ.
ಭಾರೀ ಮಳೆ ಕಾರಣ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜತೆಗೆ ಎಲ್ಲೆಡೆ ಜನರಿಗೆ ಎಚ್ಚರಿಕೆ ನೀಡಲಾಗಿದೆ.

ತೀರ್ಥಹಳ್ಳಿ ಪಟ್ಟಣದಲ್ಲೇ ಭೂಕುಸಿತ!

ತೀರ್ಥಹಳ್ಳಿ ಪಟ್ಟಣದಲ್ಲೇ ಭಾರೀ ಮಳೆಗೆ ಭೂಕುಸಿತ ಸಂಭವಿಸಿದೆ. ಸೊಪ್ಪುಗುಡ್ಡೆ ಹೋಗುವ ಮಾರ್ಗದಲ್ಲಿ ಭೂ ಕುಸಿತವಾಗಿದೆ. ಇನ್ನು ತಾಲೂಕಿನ ಹಲವೆಡೆ ಮರ ಬಿದ್ದು ವಿದ್ಯುತ್ ಇಲ್ಲದೆ ಜನ ಪರದಾಟ ನಡೆಸುತ್ತಿದ್ದಾರೆ. ಪಟ್ಟಣದಲ್ಲಿ ಜನರ ಓಡಾಟ ಕಡಿಮೆ ಆಗಿದೆ.

ಭಾರೀ ಮಳೆಗೆ ಕೊಳೆ ಹೆಚ್ಚಳ?

ಮಳೆ ಹೆಚ್ಚಾಗುತ್ತಿದ್ದಂತೆ ಇನ್ನು ತೋಟಕ್ಕೆ ಔಷಧಿ ಹೊಡೆಯದ ರೈತರಿಗೆ ಆತಂಕ ಹೆಚ್ಚಾಗಿದೆ. ಕಳೆದ ವರ್ಷ ಫಸಲು ಅರ್ಧಕರ್ಧ ಕಡಿಮೆ ಆಗಿತ್ತು. ಈ ವರ್ಷ ಹೀಗೆ ಆದರೆ ಏನು ಗತಿ ಎಂಬ ಚಿಂತೆಯಲ್ಲಿದ್ದಾರೆ.

ನದಿ ತೀರಕ್ಕೆ ಹೋಗದಿರಿ ಹುಷಾರ್..!

ತೀರ್ಥಹಳ್ಳಿ ಸೇರಿದಂತೆ ನದಿ ತೀರದಲ್ಲಿ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ಜನತೆ ನದಿ ತೀರಗಳಿಗೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ. ರೀಲ್ಸ್ ಮಾಡಲು ಅನೇಕರು ನದಿ ಬಳಿ ಹೋಗುತ್ತಿದ್ದು ಪೊಲೀಸ್ ಇಲಾಖೆ ಎಚ್ಚರ ವಹಿಸುವಂತೆ ಮನವಿ ಮಾಡಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.