ಜ. 21ಕ್ಕೆ ಬೆಳಗಾವಿಯಲ್ಲಿ ನಡೆಯುವ ‘ಜೈ ಬಾಬು’, ‘ಜೈ ಭೀಮ್’, ‘ಜೈ ಸಂವಿಧಾನ್ ‘ ಸಮಾವೇಶ!
– ಪತ್ರಿಕಾಗೋಷ್ಠಿ ನಡೆಸಿ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಅವರಿಂದ ಮಾಹಿತಿ!
– ಹಿಂದೂ ಧರ್ಮ ಉಳಿಯಬೇಕು, ರಾಮ ರಾಜ್ಯವಾಗಬೇಕು ಎಂದು ಮೊದಲು ಹೇಳಿದವರು ಗಾಂಧೀಜಿ!
– ರಸ್ತೆ ಮೇಲೆ ನಿಂತು ಶಾಸಕನಾಗಿರುವ ವ್ಯಕ್ತಿ ನಾನು!: ಕಿಮ್ಮನೆ ರತ್ನಾಕರ್
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ, ಗಾಂಧಿ ಭವನ ಕಾಂಗ್ರೆಸ್ ಕಚೇರಿಯಲ್ಲಿ ಜ.17 ರಂದು ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಅವರು ಜ. 21ರಂದು ಬೆಳಗಾವಿಯಲ್ಲಿ ನಡೆಯುವ ‘ಜೈ ಬಾಬು’, ‘ಜೈ ಭೀಮ್’, ‘ಜೈ ಸಂವಿಧಾನ್ ‘ ಸಮಾವೇಶ ಅಂಗವಾಗಿ ಹಾಗೂ ಪ್ರಚಲಿತ ವಿದ್ಯಾಮಾನಗಳನ್ನು ಉದ್ದೇಶಿಸಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿದರು.
ಮಹಾತ್ಮ ಗಾಂಧೀಜಿ ಅವರು ಡಿಸೆಂಬರ್ 26ರಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಬೆಳಗಾವಿಯಲ್ಲಿ, ಅದೇ ದಿನ ಕಾಂಗ್ರೆಸ್ ಪಕ್ಷ ಅದರ ನೆನಪಿಗಾಗಿ ಅದ್ದೂರಿ ಕಾರ್ಯಕ್ರಮ ಮಾಡಬೇಕೆಂದು ನಿರ್ಧಾರ ಮಾಡಿತ್ತು. ಆದರೆ ಅದರ ಹಿಂದಿನ ದಿನ ನಮ್ಮ ಪಕ್ಷದ ಮಾಜಿ ಪ್ರಾನ ಮಂ್ಿ ಮನಮೋಹನ್ ಸಿಂಗ್ ಅವರು ನಿಧನರಾದ ಕಾರಣಕ್ಕಾಗಿ ಸಭೆಯನ್ನು ಮುಂದೂಡಲಾಗಿತ್ತು. ಆದ್ದರಿಂದ ಇದೇ ಜನವರಿ 21ರಂದು ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷದ ದೊಡ್ಡ ಸಭೆ ನಡೆಯಲಿದ್ದು, ಇಡೀ ರಾಜ್ಯದಾದ್ಯಂತ ಬೆಳಗಾವಿ ಹೊರೆತುಪಡಿಸಿ ಎರಡು ಬ್ಲಾಕ್ ನಿಂದ ನೂರಾರು ಜನ ಸೇರಿ ನಡೆಸಬೇಕಾಗಿ ಪಕ್ಷದಿಂದ ಆದೇಶ ಇದೆ. ಆದೇಶವನ್ನು ಪರಿಗಣಿಸಿ ಇದೇ ಜನವರಿ 19ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ತೀರ್ಥಹಳ್ಳಿ ವಿಧಾನಸಭಾ ಪಕ್ಷದ ಕಾರ್ಯಕರ್ತರು, ಮುಖಂಡರು, ಪದಾಧಿಕಾರಿಗಳು ಆಯ್ಕೆಗೊಂಡಿರುವಂತಹ ಸದಸ್ಯರು ಮತ್ತು ಪಟ್ಟಣ ಪಂಚಾಯ್ತಿಯ ಕಾಂಗ್ರೆಸ್ ಪಕ್ಷದ ಸದಸ್ಯರು, ಹಾಗೂ ಎಲ್ಲಾ ಪಕ್ಷದ ಮುಖಂಡರುಗಳು. ತೀರ್ಥಹಳ್ಳಿ ಕಾಂಗ್ರೆಸ್ ಪಕ್ಷದ ಕಛೇರಿ ಗಾಂಧಿ ಭವನದಲ್ಲಿ ಈ ಸಲುವಾಗಿ ಸಭೆಯನ್ನು ಕರೆಯಲಾಗಿದೆ ಎಂಬ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಅವರು ಮಾಹಿತಿ ನೀಡಿದರು.
* ಹಿಂದೂ ಧರ್ಮ ಉಳಿಯಬೇಕು, ರಾಮ ರಾಜ್ಯವಾಗಬೇಕು ಎಂದು ಮೊದಲು ಹೇಳಿದವರು ಗಾಂಧೀಜಿ!
ಕಾರ್ಯಕ್ರಮದಲ್ಲಿ ಭಾಗವಹಿಸುವುದು ಮಾತ್ರವಲ್ಲ ಗಾಂಧೀಜಿ ಮತ್ತು ಅಂಬೇಡ್ಕರ್ ವಿಚಾರಧಾರೆಗಳನ್ನು ಜನರಿಗೆ ತಲುಪಿಸುವ ಕೆಲಸ ಆಗಬೇಕಿದೆ.
ಈ ಪ್ರಯುಕ್ತ 21ನೇ ತಾರೀಕಿನಂದು ತಾವೆಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿಕೊಳ್ಳಲಾಗಿದೆ.
ಈ ನಿಮಿತ್ತ ಜನವರಿ 19ರಂದು ಸಭೆ ಕರೆಯಲಾಗಿದೆ. ಗಾಂಧೀಜಿಯವರನ್ನು ಜನ ವಿರೋಧಿಸುತ್ತಾರೆ, ಗಾಂಧೀಜಿಯವರಿಗೆ ಜಾತಿ ಬೆಂಬಲವಿಲ್ಲ, ಅವರ ಜಾತಿ ಜನಸಂಖ್ಯೆ ಅತ್ಯಂತ ಕಡಿಮೆ ಇರುವುದು. ಆದರೆ ಗಾಂಧೀಜಿ ಜಾತಿ ಹಿಡಿತದಿಂದ ಮೇಲ್ಬಂದವರಲ್ಲ, ಮಾನವೀಯ ದೃಷ್ಟಿಯಿಂದ ಅಹಿಂಸೆಯ ಪರ ಹೋರಾಡಿ ಮುಂದೆ ಬಂದವರು. ಆದರೆ ಇದೇ ಜನ ಅಂಬೇಡ್ಕರನ್ನು ಎದುರು ಹಾಕಿಕೊಳ್ಳಲು ತಯಾರಿಲ್ಲ ಹಿಂದೂ ಧರ್ಮ ಉಳಿಯಬೇಕು, ರಾಮ ರಾಜ್ಯವಾಗಬೇಕು ಎಂದು ಮೊದಲು ಹೇಳಿದವರು ಗಾಂಧೀಜಿ ಎಂದು ಹೇಳಿದರು.
* ರಸ್ತೆ ಮೇಲೆ ನಿಂತು ಶಾಸಕನಾಗಿರುವ ವ್ಯಕ್ತಿ ನಾನು!: ಕಿಮ್ಮನೆ ರತ್ನಾಕರ್
ನಾನು ಮಾಡಿರುವಷ್ಟು ಪ್ರತಿಭಟನೆ, ಪಾದಯಾತ್ರೆ ಯಾರು ಮಾಡಿರಲು ಸಾಧ್ಯವಿಲ್ಲ. ರಸ್ತೆ ಮೇಲೆ ನಿಂತು ಶಾಸಕನಾಗಿರುವ ವ್ಯಕ್ತಿ ನಾನು! ಸೇತುವೆಗೆ ಸಂಬಂಧ್ ಪ್ರಶ್ನೆ ನೀಡಿದರೆ, ರಸ್ತೆಗೆ ಸಂಬಂಧಪಟ್ಟ ಉತ್ತರ ನೀಡುತ್ತಾರೆ. ಅಷ್ಟು ಸೇತುವೆಗಳೆಲ್ಲ ನನ್ನ ಅವಧಿಯಲ್ಲಿ ಆಗಿರುವಂಥದ್ದು, ನನ್ನ ಅವಧಿಯಲ್ಲಿ ರಾಘವೇಂದ್ರ ಮತ್ತು ನನಗೆ ಯಡಿಯೂರಪ್ಪನವರು ನನಗೆ ಯಾವುದೇ ರೀತಿಯ ಅಡ್ಡಿಪಡಿಸಿಲ್ಲ. ಜ್ಞಾನೇಂದ್ರ ಒಬ್ಬರು ವ್ಯಾಪಾರಸ್ಥ, ಸುಮಾರಷ್ಟು ವ್ಯಾಪಾರಗಳನ್ನು ನಡೆಸಿದ್ದಾರೆ ಆದರೆ ನಾನು ಇಲ್ಲಿಯವರೆಗೆ ಯಾವುದೇ ವ್ಯಾಪಾರಿಯಲ್ಲ! ಯಾವುದೇ ವ್ಯಾಪಾರವನ್ನು ಹೊಂದಿಲ್ಲ. ಹೆದ್ದೂರು ಗ್ರಾಮ ಪಂಚಾಯಿತಿಯನ್ನು ಸರಿಪಡಿಸುವ ಕೆಲಸ ಮೊದಲು ನಡೆಯಬೇಕು.
ಇದೇ ಸುರಂಗ ಮಾರ್ಗ ನಿರ್ಮಾಣದ ಬಗ್ಗೆ ಚರ್ಚೆ ನಡೆಸಿದಾಗ ಬಿಜೆಪಿ ಪಕ್ಷ ಅಪಹಾಸ್ಯ ಮಾಡಿದೆ ಇದೀಗ ಬಿಜೆಪಿಯವರನ್ನು ಪ್ರಶ್ನಿಸುವವರಾರಿಲ್ಲ, ಜ್ಞಾನೇಂದ್ರ ಅವರ ಹೋರಾಟ ತೀರ್ಥಹಳ್ಳಿ ಕ್ಷೇತ್ರಕ್ಕೆ ಮಾತ್ರ ಸೀಮಿತ, ಹೊರತುಪಡಿಸಿ ಜಿಲ್ಲೆ ರಾಜ್ಯಕ್ಕೆ ಏನು ಉಪಯೋಗವಾಗಿಲ್ಲ ಎಂದು ಕಿಮ್ಮನೆ ರತ್ನಾಕರ್ ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನಾರಾಯಣ ರಾವ್, ಕೆಸ್ತೂರು ಮಂಜುನಾಥ್, ರಹಮತುಲ್ಲಾ ಅಸಾದಿ, ಗೀತಾ ರಮೇಶ್, ಸುಶೀಲ ಶೆಟ್ಟಿ, ರಾಘವೇಂದ್ರ ಶೆಟ್ಟಿ, ವಿಲಿಯಮ್ ಮಾರ್ಟಿಸ್, ವಿಶ್ವನಾಥ್ ಶೆಟ್ಟಿ, ಅಮರನಾಥ್ ಶೆಟ್ಟಿ ಸೇರಿ ಹಲವರು ಉಪಸ್ಥಿತರಿದ್ದರು.
