Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಅದ್ದೂರಿಯಾಗಿ ನಡೆದ ಪತ್ರಕರ್ತರ ದಿನ!

ತೀರ್ಥಹಳ್ಳಿಯಲ್ಲಿ ಅದ್ದೂರಿಯಾಗಿ ನಡೆದ ಪತ್ರಕರ್ತರ ದಿನ!
– ಸಾಧಕರು, ಪ್ರತಿಭಾವಂತರಿಗೆ ಸನ್ಮಾನ: ಪತ್ರಕರ್ತರ ಕೆಲಸ ಅವಲೋಕನ
– ಪತ್ರಿಕಾ ರಂಗ ಕಷ್ಟದಲ್ಲಿದೆ: ಪತ್ರಕರ್ತರು, ಗಣ್ಯರು,ಅಭಿಪ್ರಾಯ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ತೀರ್ಥಹಳ್ಳಿ ಘಟಕ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.
ಪತ್ರಿಕಾ ಧರ್ಮ ಸುದ್ದಿಗಾಗಿ ಅಥವಾ ಟಿಆರ್ಪಿಯ ಜನಪ್ರಿಯತೆಯ ಹಿಂದೆ ಓಡುತ್ತಿದೆ. ಪ್ರಜಾತಂತ್ರ ವ್ಯವಸ್ಥೆಯನ್ನೇ ತಪ್ಪಾಗಿ ಗ್ರಹಿಕೆ ಮಾಡಿಕೊಳ್ಳುವ ಹುನ್ನಾರ ನಡೆಯುತ್ತಿದೆ ಎಂದು ಕೋಣಂದೂರು ಪ್ರಥಮ ದರ್ಜೆ ಕಾಲೇಜಿನ ಮಾನವ ಕುಲಶಾಸ್ತ್ರಜ್ಞ ಪಿ. ಆರಡಿಮಲ್ಲಯ್ಯ ಕಟ್ಟೀರ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಅವರು ಮಾತನಾಡಿ, ಪ್ರಾಮಾಣಿಕವಾಗಿ ಕೆಲಸ ಮಾಡುವ ಪತ್ರಕರ್ತರ ಕುರಿತು ನಾಗರೀಕ ಪ್ರಪಂಚಕ್ಕೆ ಮಾಹಿತಿ ಇರಲಾದರು. ಅಂತವ ವ್ಯಕ್ತಿಗಳಿಗೆ ಹೆಸರು ಇರುವುದಿಲ್ಲ. ಜನಮನ್ನಣೆ ಇರುವುದಿಲ್ಲ. ಕಡೆಯದಾಗಿ ಸಂಬಳವೂ ಸಿಗುವುದಿಲ್ಲ. ಇಂತಹ ಸಂದರ್ಭದಲ್ಲಿ ಧ್ವನಿ ಇಲ್ಲದವರ ಧ್ವನಿಯಾಗುವುದಾದರು ಹೇಗೆ ಎಂದು ಪ್ರಶ್ನಿಸಿದರು.
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ಪ್ರಾಮಾಣಿಕವಾಗಿ ಜನರ ಮುಂದಿಡುವ ಮತ್ತೊಂದು ಅಂಗವಾಗಿ ಮಾದ್ಯಮರಂಗ ಗುರುತಿಸಿಕೊಂಡಿದೆ. ಧೈರ್ಯವಾಗಿ ಪ್ರಭುತ್ವದ ವಿರುದ್ಧ ಬರೆಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಟೀಕೆಗಳನ್ನು ಮಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ ಎಂದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಸಾಕ್ಷರತೆ ಪ್ರಮಾಣ ಹೆಚ್ಚಾದಂತೆ ಅಪರಾಧ ಚಟುವಟಿಕೆ ಪ್ರಮಾಣವು ಅಧಿಕವಾಗುತ್ತಿದೆ. ಕ್ರೌರ್ಯದ ಬಗ್ಗೆ ದೃಶ್ಯ ಮಾದ್ಯಮಗಳು ತೋರಿಸುವ ರೀತಿ ಭಯ ಮೂಡಿಸುವಂತಿದೆ ಎಂದರು.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ನಿರ್ದೇಶಕ ರವಿಕುಮಾರ್ ಟೆಲೆಕ್ಸ್ ಮಾತನಾಡಿ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಒಂದು ಕಡೆ ನಡೆಯುತ್ತಿದ್ದರೆ ಪತ್ರಕರ್ತರು ಒಂದು ವಿಚಾರದ ಬಗ್ಗೆ ಮಾತನಾಡದಂತೆ ಪೂರ್ವ ನಿರ್ಬಂಧ ಹೇರುತ್ತಿರುವ ಪ್ರಸಂಗಗಳು ಕರ್ನಾಟಕದಲ್ಲೇ ನಡೆಯುತ್ತಿದೆ ಎಂದು ಬೇಸರಿಸಿದರು. ಪತ್ರಕರ್ತರ ಸಂಘದ ಅಧ್ಯಕ್ಷ ಮೋಹನ್ ಮುನ್ನೂರು, ಜಿಲ್ಲಾ ಕಾರ್ಯದರ್ಶಿ ವಿ.ಟಿ.ಅರುಣ್, ಖಜಾಂಚಿ ರಂಜಿತ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಮಾಜಿ ಅಧ್ಯಕ್ಷ ಸೊಪ್ಪುಗುಡ್ಡೆ ರಾಘವೇಂದ್ರ, ತುಳುನಾಡು ಸಿರಿ ಸೌಹಾರ್ದ ಸಹಕಾರಿ ಅಧ್ಯಕ್ಷ ಬಿ.ಆರ್. ರಾಘವೇಂದ್ರ ಶೆಟ್ಟಿ, ಕಸಾಪ ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ, ಸಾಹಿತಿ ಶಿವಾನಂದ ಕರ್ಕಿ ಕಾರ್ಯದರ್ಶಿ ಮುರುಘರಾಜ್ ಕೋಣಂದೂರು, ಜಿಲ್ಲಾ ಪ್ರತಿನಿಧಿ ಟಿ.ಜೆ.ಅನಿಲ್ ಮುಂತಾದವರು ಇದ್ದರು.

ತೀರ್ಥಹಳ್ಳಿ ತಾಲೂಕಿನ ಸಾಧಕರಿಗೆ ಸನ್ಮಾನ

ತೀರ್ಥಹಳ್ಳಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಿರಿಯ ವಕೀಲ ಎಂ.ಎನ್.ರಮೇಶ್, ಮಕ್ಕಳ ತಜ್ಞ ಡಾ.ಪ್ರಭಾಕರ್, ಕ್ರೀಡಾ ಪೋಷಕ ಅಬ್ದುಲ್ ಕಲಾಂ ಆಜಾದ್, ಪಶು ವೈದ್ಯ ಡಾ.ಪಾವುಲ್ ಕ್ಯಾಸ್ತಲಿನೋ, ಹಿರಿಯ ಸಂಗೀತ ಕಲಾವಿದ ಕೃಷ್ಣದಾಸ್ ಹೆಜಮಾಡಿ, ಐಐಟಿ ಪ್ರವೇಶ ಪಡೆದ ಸುಶಾಂತ್ ಎಂ.ಪ್ರಭು, ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿರುವ ಆರ್.ದೀಕ್ಷಾ, ಆರ್. ನೇತ್ರಾ, ಶ್ರಮಜೀವಿ ಎಂ.ಕೆ.ಶ್ರೀನಿವಾಸ ಪೂಜಾರಿ, ಯುವ ಸಹಕಾರಿ ಉದ್ಯಮಿ ಕಂಪದಗದ್ದೆ ಸುರೇಶ್, ಕೋಣಂದೂರು ಅಬ್ಬಾಸ್ ಮತ್ತು ಪತ್ರಕರ್ತರ ಕುಟುಂಬದವರಾಗಿದ್ದು ಉನ್ನತ ಸಾಧನೆ ಮಾಡಿರುವ ಕೆ.ಆರ್.ದೀಕ್ಷಾ, ಜಿ.ಎಂ.ಶ್ರವಣ್, ಜಿ.ಎಂ.ಶ್ರೇಯನ್ ಇವರುಗಳನ್ನು ಸನ್ಮಾನಿಸಲಾಯಿತು.
ಪತ್ರಕರ್ತರ. ದಿನ, ಪುಸ್ತಕ ಬಿಡುಗಡೆಯಂತಹ ಕಾರ್ಯಕ್ರಮಗಳಿಗೆ ಜನ ಸೇರಲ್ಲ ಎಂಬುದಕ್ಕೆ ಅಪವಾದ ಎಂಬಂತೆ 600ಕ್ಕೂ ಹೆಚ್ಚು ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.