ಸ್ವಾತಂತ್ರ ದಿನದಂದು ರಾಷ್ಟ್ರಧ್ವಜದ ಅಪಮಾನ ಮಾಡಬೇಡಿ…!
– ರಾಷ್ಟ್ರೀಯ ಚಿಹ್ನೆಗಳ ಬಗ್ಗೆ ಜಾಗೃತಿ ಮಾಡುವ ಕುರಿತು ಆಡಳಿತಕ್ಕೆ ಮನವಿ
– ತೀರ್ಥಹಳ್ಳಿಯಲ್ಲಿ ಹಿಂದೂ ಜನ ಜಾಗೃತಿ ಸಮಿತಿಯಿಂದ ಮನವಿ ಪತ್ರ
NAMMUR EXPRESS NEWS
ತೀರ್ಥಹಳ್ಳಿ : ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುವುದನ್ನು ತಡೆಯಲು ಕಾನೂನು ಕ್ರಮ ಕೈಗೊಳ್ಳುವಂತೆ ತಾಲ್ಲೂಕು ಕಛೇರಿಯ ಶಿರಸ್ತೆದಾರ್ ಸತ್ಯಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಗಣೇಶ್ ವೈಎನ್, ಶ್ರೀ ನಾಗರಾಜ್ ಡಿ ಪಟ್ಟಣ ಪಂಚಾಯಿತಿ ಅಧಿಕಾರಿ, ಪೋಲಿಸ್ ಅಧೀಕ್ಷಕರ ಕಛೇರಿಗೆ ಮನವಿ ನೀಡಲಾಯಿತು.
ರಾಷ್ಟ್ರಧ್ವಜವೇ ರಾಷ್ಟ್ರದ ಆತ್ಮವಾಗಿದೆ.ಈ ರಾಷ್ಟ್ರೀಯ ಧ್ವಜಗಳನ್ನು 15 ಆಗಸ್ಟ್ ಮತ್ತು 26 ಜನವರಿಯಲ್ಲಿ ಹೆಮ್ಮೆಯಿಂದ ಪ್ರದರ್ಶಿಸಲಾಗುತ್ತದೆ; ಆದರೆ ಅದೇ ದಿನ ಅದೇ ರಾಷ್ಟ್ರಧ್ವಜ ರಸ್ತೆ ಹಾಗೂ ಚರಂಡಿಗಳಲ್ಲಿ ಹರಿದ ಸ್ಥಿತಿಯಲ್ಲಿ ಬಿದ್ದಿರುವುದು ಕಂಡು ಬಂದಿದೆ. ಪ್ಲಾಸ್ಟಿಕ್ ಧ್ವಜಗಳು ತಕ್ಷಣವೇ ನಾಶವಾಗುವುದಿಲ್ಲ. ಆದ್ದರಿಂದ ಈ ರಾಷ್ಟ್ರಧ್ವಜಗಳು ಅನೇಕ ದಿನಗಳವರೆಗೆ ಅಗೌರವವನ್ನು ಕಾಣಬೇಕಾಗಿದೆ. ರಾಷ್ಟ್ರಧ್ವಜದ ಈ ಅಗೌರವವನ್ನು ತಡೆಯಲು ಹಿಂದೂ ಜನಜಾಗೃತಿ ಸಮಿತಿಯಿಂದ ಮುಂಬೈ ಹೈಕೋರ್ಟ್‌ನಲ್ಲಿ PIL (103/2011) ಸಲ್ಲಿಸಲಾಗಿದೆ.
ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವುದನ್ನು ತಡೆಯಲು ರಾಷ್ಟ್ರ ಧ್ವಜ ಗೌರವ ಕೃತಿ ಸಮಿತಿಯನ್ನು ಸ್ಥಾಪಿಸಬೇಕು.
ಜಿಲ್ಲೆಯಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ರಾಷ್ಟ್ರಧ್ವಜಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದರೆ ಕೂಡಲೇ ಸಂಬಂಧಪಟ್ಟವರ ವಿರುದ್ದ ಕ್ರಮ ಕೈಗೊಳ್ಳಬೇಕು. ಶಾಲೆಗಳಲ್ಲಿ ‘ರಾಷ್ಟ್ರಧ್ವಜವನ್ನು ಗೌರವಿಸಿ’ ಎಂಬ ಉಪಕ್ರಮವನ್ನು ನಡೆಸಲು ಸೂಚನೆಗಳನ್ನು ನೀಡಿ ಎಂದು ವಿನಂತಿಸುತ್ತೇವೆ ಎಂದು ಯತಿರಾಜ್ ಪಟ್ಟಣ ಪಂಚಾಯಿತಿ ಸದಸ್ಯರು, ಶ್ರೀ ಸುರೇಂದ್ರ ಶ್ರೀ ಚೌಡೇಶ್ವರಿ ದೇವಸ್ಥಾನ ಕಾರ್ಯದರ್ಶಿಗಳು. ಸೀಬಿನಕೆರೆ, ಉಪೇಂದ್ರ ಆಚಾರ್ ನಿರ್ದೇಶಕರು ತಾಲೂಕು ವಿಶ್ವಕರ್ಮ ಸಮಾಜ, ನಾರಾಯಣಗೌಡ ನಿವೃತ್ತ ಯೋಧರು, ಬಾಲ ಗೋಕುಲ ಜಿಲ್ಲಾ ಸಂಯೋಜಕರಾದ ಸಾವಿತ್ರಿ ಷಣ್ಮುಖ, ಶ್ರೀ. ಶ್ರೀನಿವಾಸ್ ತಾಲೂಕ್ ಪಂಚಾಯಿತಿ ಮಾಜಿ ಸದಸ್ಯರು, ಹಿಂದೂ ಜನ ಜಾಗೃತಿ ಸಮಿತಿಯ ಶ್ರೀ ಸುಮಂತ್, ವಿಠ್ಠಲ್ ಆಚಾರ್, ಸೌ.ವಾರಿಜಾ, ಸೌ.ಸ್ವರ್ಣ ಸೇರಿದಂತೆ ಇನ್ನಿತರ ರಾಷ್ಟ್ರ ಧರ್ಮ ಪ್ರೇಮಿಗಳು ಉಪಸ್ಥಿತರಿದ್ದರು.
